ಶ್ರೀನಗರ: ಕಾಶ್ಮೀರದ ಬಾರಾಮುಲ್ಲ ದಲ್ಲಿ ಒಂಬತ್ತು ವರ್ಷದ ಬಾಲಕಿಯನ್ನು ಮಲ ಸಹೋದರ ಹಾಗೂ ಆತನ ಸಹಚರರು ಸೇರಿ ಸಾಮೂಹಿಕ ಆತ್ಯಾಚಾರ ನಡೆಸಿ ಕೊಲೆಗೈದು ಶವವನ್ನು ವಿಕೃತಗೊಳಿಸಿ ಬೆಂಕಿ ಹಚ್ಚಲಾಗಿದೆ.

ಹುಡುಗಿಯ ತಂದೆಯ ಮೊದಲ ಪತ್ನಿಯ ಅರಿವಿನಲ್ಲಿಯೇ ಈ ಕೃತ್ಯ ಮಾಡಲಾಗಿದೆ. ಹುಡುಗಿಯನ್ನು ಕ್ರೂರವಾಗಿ ಅತ್ಯಾಚಾರಗೈದು ಕೊಲೆ ಮಾಡಿ ಕಣ್ಣುಗಳನ್ನು ಕೀಳಿ ಶವದ ಮೇಲೆ ಆಸಿಡ್ ಸುರಿದು ಅರಣ್ಯ ಪ್ರದೇಶದಲ್ಲಿ ಎಸೆಯಲಾಗಿತ್ತು. 14ರ ಹರೆಯದ ಮಲ ಸಹೋದರ ಮತ್ತಾತನ ತಾಯಿಯನ್ನು ಸೆರೆ ಹಿಡಿಯಲಾಗಿದೆ.

ಬಾನುವಾರ ರಾತ್ರಿ ಪೋಲೀಸರಿಗೆ ಸುಟ್ಟು ಕರಕಲಾದ ದೇಹ ದೊರೆತಿದೆ. ಬಳಿಕ ನಡೆದ ತೀವ್ರ ತನಿಖೆಯಿಂದ ಈ ಕೃತ್ಯ ಬೆಳಕಿಗೆ ಬಂದಿದೆಯೆಂದು ಬಾರಾಮುಲ್ಲಾದ ಹಿರಿಯ ಪೋಲೀಸಧಿಕಾರಿ ಮೀರ್ ಇಂತಿಯಾಝ್ ಹುಸೇನ್ ಬಹಿರಂಗಪಡಿಸಿದ್ದಾರೆ. ಆಕೆಯ ತಂದೆಯ ಮೊದಲ ಪತ್ನಿಯನ್ನು ತನಿಖೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪತಿ ಹೆಚ್ಚಾಗಿ ಎರಡನೇಯ ಪತ್ನಿ ಹಾಗೂ ಮಗಳೊಂದಿಗೆ ವಾಸಿಸುವುದರಿಂದ ಕೆರಳಿ ಈ ಕೃತ್ಯ ನಡೆಸಿದ್ದಾರೆ. ಹತಳಾದ ಹುಡುಗಿಯನ್ನು ಆಕೆಯ ತಂದೆ ಹೆಚ್ಚು ಹಚ್ಚಿಕೊಂಡಿದ್ದರು ಇದು ಮೊದಲ ಪತಿಯನ್ನು ಕೆರಳಿಸಿತ್ತು.

Leave a Reply