ನವದೆಹಲಿ : ಮೋದಿ ಸರಕಾರ ಮತ್ತು ದೆಹಲಿಯ ಆಮ್ ಆದ್ಮಿ ಸರಕಾರವನ್ನು ತಾರತಮ್ಯ ಪಡಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರನ್ನು ಈ ಕುರಿತು ಬಹಿರಂಗ ಸಂವಾದಕ್ಕೆ ಬರುವಂತೆ ಕೇಜ್ರಿವಾಲ್ ಸವಾಲು ಹಾಕಿದ್ದಾರೆ.

ರಾಮ್ ಲೀಲಾ ಮೈದಾನದಲ್ಲಿ ಬಿಜೆಪಿ ರ್ಯಾಲಿಯಲ್ಲಿ ಮಾತನಾಡುತ್ತಾ ಅಮಿತ್ ಶಾ ರವರು ಕೇಜ್ರಿವಾಲ್ ಸರಕಾರವನ್ನು ಟೀಕಿಸಿದ್ದರು. ಮೂರೂವರೆ ವರ್ಷದ ಆಮ್ ಆದ್ಮಿ ಸರಕಾರ ನವದೆಹಲಿಯಲ್ಲಿ ಅಭಿವೃದ್ದಿಗೆ ತಡೆಯೊಡ್ಡುತ್ತಿದೆಯೆಂದೂ, ಕೇಜ್ರಿವಾಲ್ ಸುಳ್ಳುಗಾರ ಎಂದು ಅಮಿತ್ ಶಾ ಆರೋಪಿಸಿದ್ದರು.

ಇದಕ್ಕೆ ಉತ್ತರ ನೀಡಲು ಸಾಮಾಜಿಕ ಜಾಲತಾಣಗಳ ಮೂಲಕ ರಂಗಕ್ಕಿಳಿದ ಕೇಜ್ರೀವಾಲ್ ” ಕಳೆದ ನಾಲ್ಕು ವರ್ಷಗಳಲ್ಲಿ ಮೋದಿಯವರು ಮಾಡಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಕೆಲಸ ನಮ್ಮ ಸರಕಾರ ಮಾಡಿದೆ. ದೆಹಲಿ ಪೋಲೀಸ್ ಇಲಾಖೆ ಮತ್ತು ಶುಚಿತ್ವದ ರಂಗಗಳೆರಡನ್ನೂ ನೀವು ಹಾಳುಮಾಡಿದ್ದೀರಿ. ಬನ್ನಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಜನರ ಮುಂದೆ ಬಹಿರಂಗ ಚರ್ಚೆಗೆ ಬನ್ನಿ. ಅಲ್ಲಿ ಚರ್ಚಿಸೋಣ” ಎಂದು ಸವಾಲು ಹಾಕಿದರು.

Leave a Reply