ಕೋಝಿಕ್ಕೋಡ್: ಬಂದ್ ಬೆಂಬಲಿಗರ ಪ್ರತಿಭಟನೆಯಲ್ಲಿ ಹಲವು ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಜನರನ್ನು ನಾವು ಕಂಡಿದ್ದೇವೆ. ಆದರೆ ಕೋಝಿಕ್ಕೋಡ್‍ನಲ್ಲಿ ಖಾಸಗಿ ಹಣಕಾಸು ಸಂಸ್ಥೆಯನ್ನು ಹರತಾಳ ಬೆಂಬಲಿಗರು ಮುಚ್ಚಿದಾಗ ನೌಕರೊಬ್ಬರು ಅದರೊಳಗೆ ಉಳಿದುಕೊಂಡರು. ನಂತರ ಪೊಲೀಸ್ ಮತ್ತು ಫೈನಾನ್ಸ್‍ನ ಇತರ ಉದ್ಯೋಗಿಗಳು ಕಷ್ಟಪಟ್ಟು ಬಾಗಿಲು ತೆರೆದು ಒಳಗಿದ್ದ ವ್ಯಕ್ತಿಯನ್ನು ಹೊರತಂದಿದ್ದಾರೆ.

ಕಲ್ಲಿಕೋಟೆ ಮಾವೂರ್ ರಸ್ತೆಯಲ್ಲಿ ಯುಡಿಎಫ್ ಮೆರವಣಿಗೆಯ ವೇಳೆ ಘಟನೆ ನಡೆದಿದೆ. ಸಮೀಪದ ಕಟ್ಟಡದಲ್ಲಿ ಫೈನಾನ್ಸ್ ತೆರೆದಿದೆ ಎಂದು ಯಾರೂ ಬಂದು ಇವರಿಗೆ ತಿಳಿಸಿದ್ದಾರೆ. ಯುವ ಕಾಂಗ್ರೆಸ್ ಮತ್ತು ಕೆಎಸ್‍ಯು ಸಂಘಟನೆಯವರು ಅವರ ಬೆನ್ನಿಗೆ ಪೊಲೀಸರು ಅಲ್ಲಿಗೆ ಬಂದರು. ಓಡಿ ಬಂದ ಪ್ರತಿಭಟನಾಕಾರರನ್ನು ನೋಡಿ ಹೆದರಿ ಫೈನಾನ್ಸ್ ಸಂಸ್ಥೆಯ ನೌಕರರು ಲೈಟ್ ಆಫ್ ಮಾಡಿ ಹೊರಗೆ ಬರುವ ತರಾತುರಿಯಲ್ಲಿದ್ದರು. ಇದೇ ವೇಳೆ ಪ್ರತಿಭಟನಾಕಾರರು ವ್ಯಕ್ತಿಯೊಬ್ಬ ಒಳಗೆ ಉಳಿದಿದ್ದಾನೆಂದು ಅರಿಯದೆ ಶಟರ್ ಎಳೆದು ಹೋಗಿದ್ದಾರೆ. ಶಟರ್‍ನೊಳಗಿನಿಂದ ಬಡಿಯುವುದು ಕೇಳಿ ಇತರ ನೌಕರರು ಪುನ: ಬಂದು ಬಾಗಿಲು ತೆರೆಯಲು ಯತ್ನಿಸಿ ವಿಫಲರಾದರು. ಆನಂತರ ಪೊಲೀಸರು ಬಂದು ಬಹಳ ಕಷ್ಟದಿಂದ ಬಾಗಿಲನ್ನು ತೆರೆದು ಒಳಗಿದ್ದ ವ್ಯಕ್ತಿಯನ್ನು ಹೊರಗೆಬರುವಂತೆ ಮಾಡಿದರು.

Leave a Reply