ತಿರುವನಂತಪುರಂ: ಕೇರಳದ ಹಲವು ಕಡೆಗಳಲ್ಲಿ ಅತ್ಯಂತ ತೀವ್ರ ಮಳೆ ಸುರಿಯುವುದಕ್ಕೆ ಕಾರಣವಾಗಿ ಅರಬಿ ಸಮುದ್ರದಲ್ಲಿ ಬದಲಾವಣ ರೂಪುಗೊಂಡಿದೆ. ಅರಬಿ ಸಮುದ್ರದಲ್ಲಿ ಲಕ್ಷದ್ವೀಪ ಸಮೀಪ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು, ಬಿರುಗಾಳಿಯಾಗಿ ಪರಿವರ್ತನೆಯಗುವ ಲಕ್ಷಣಗಳು ಗೋಚರಿಸಿದೆ ಎಂದು ಹವಮಾನ ನಿರೀಕ್ಷಣಾ ಕೇಂದ್ರ ತಿಳಿಸಿದೆ.
ಮಲಪ್ಪುರಂ ಇಡುಕಿಗಳಲ್ಲಿರೆಡ್ ಅಲರ್ಟ್ ಮುಂದುವರಿಯುತ್ತಿದೆ. ಇದೇ ವೇಳೇ ಕೇರಾಳಾದ್ಯಂತ ಕಟ್ಟೆಚ್ಚರಕ್ಕೆ ಕರೆನೀಡಲಾಗಿದೆ.

ಅರಬಿ ಸಮುದ್ರದಲಿ ಲಕ್ಷದ್ವೀಪ ಸಮೀಪದಲ್ಲಿ ವಾಯುಭಾರ ಕುಸಿತ ರೂಪುಗೊಳ್ಳುತ್ತಿದೆ. 24 ಗಂಟೆಗಳಲ್ಲಿಇದುಹೆಚ್ಚುತ್ತಾ ಹೋಗಿರವಿವಾರ ಚಂಡಮಾರುತವಾಗಿ ಬದಲಾಗಬಹುದು ಎಂದು ಹವಮಾನ ತಜ್ಞರು ಹೇಳಿದ್ದಾರೆ.

ಅರಬಿಸ ಮುದ್ರದ ಉತ್ತರ ದಿಕ್ಕಿನಲ್ಲಿ ಒಮಾನ್ ತೀರಕ್ಕೆ ಚಂಡಮಾರತ ಹೋಗಬಹುದು. ಕೇರಳಕ್ಕೆ ಇದು ನೇರವಾಗಿ ಬಾಧಿಸುವುದಿಲ್ಲ. ಅದರೆ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಬಿರುಸಿನ ಮಳೆಯಾಗಬಹುದು. ಗಂಟೆಗೆ 50 ಕಿಲೊಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.ಸಮುದ್ರ ಅತೀ ಪ್ರಕ್ಷುಬ್ದವಾಗಲಿದೆ. ಮೀನುಗಾರರು ಸಮುದ್ರಕ್ಕೆತೆರಳಬಾರದೆಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

ಮಂಗಳವಾರದ ವರೆಗೆ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆಯಿದ್ದು ಕೇರಳದ ಹೆಚ್ಚಿನ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.ಅತ್ಯಂತ ತೀವ್ರ ಮಳೆ ಸುರಿಯುವ ಸಾಧ್ಯತೆಯನ್ನು ಪರಿಗಣಸಿ ಮಲಪ್ಪುರಂ ಇಡುಕ್ಕಿ ಜಿಲ್ಲೆಗಳಲ್ಲಿರವಿವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಎನ್‍ಡಿಆರ್ ಎಫ್‍ನ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ)5 ತಂಡಗಳನ್ನು ವಯನಾಡ್, ಕಲ್ಲಿಕೋಟೆ, ಪಾಲಕ್ಕಾಡ್ ಇಡುಕ್ಕಿ, ಪತ್ತನಂತಿಟ್ಟ ಜಿಲ್ಲೆಯಲ್ಲಿ ನಿಯೋಜಿಸಲಾಗುವುದು. ಇನ್ನೂ ಹತ್ತು ತಂಡಗಳನ್ನು ಸಿದ್ಧತಾ ಸ್ಥಿತಿಯಲ್ಲಿರಿಸಬೇಕೆಂದು ಕೇಂದ್ರ ಸರಕಾರಕ್ಕೆಮನವಿ ಸಲ್ಲಿಸಲಾಗಿದೆ.

Leave a Reply