ಸಲಿಂಗ ಕಾಮಿಗಳಾದ ನಲವತ್ತರ ಹರೆಯದ ಮಹಿಳೆ ಮತ್ತು 24ರ ಹರೆಯದ ಯುವತಿ ಜೊತೆಯಾಗಿ ಜೀವಿಸಲು ಕೇರಳ ಹೈಕೋರ್ಟು ಇಂದು ಅನುಮತಿ ನೀಡಿದೆ.
ತಿರುವನಂತಪುರದ ವಟ್ಟವಿಳದ ನಿವಾಸಿ ತನ್ನ ಮಹಿಳಾ ಸಂಗಾತಿಯೊಂದಿಗೆ ಜೀವಿಸಲು ಹೈಕೋರ್ಟು ಅನುಮತಿ ನೀಡಿದೆ. ಕತಾರ್ ನಲ್ಲಿ ಉದ್ಯೋಗಿಯಾಗಿರುವ ನಾನು ತಿರುವನಂತಪುರದ ಯವತಿಯೊಂದಿಗೆ ಪ್ರೀತಿ ಸ್ನೇಹದಿಂದ ಇದ್ದು ಜೊತೆಯಾಗಿ ಜೀವಿಸಲು ನಿರ್ಧರಿಸಿದ್ದೇವೆ. ನಮಗೆ ಅನುಮತಿ ನೀಡಬೇಕೆಂದು ಕೊಲ್ಲಮ್ ನ ಮಹಿಳೆ ನ್ಯಾಯಾಲಯದ ಮೆಟ್ಟಲೇರಿದ್ದಳು.
ಆದರೆ ವಟ್ಟವಿಳದ ನಿವಾಸಿ ಯವತಿಯು, ಮಾತಾಪಿತರು ಮಾನಸಿಕ ಚಿಕಿತ್ಸಾಕೇಂದ್ರಕ್ಕೆ ಸೇರ್ಪಡೆಗೊಳಿಸಿ ನನ್ನನ್ನು ಬಂಧಿಸಿದ್ದಾರೆಂದು ನಾನು ಮಾನಸಿಕ ಕೇಂದ್ರದಲ್ಲಿ ಜೀವ ಭಯದಿಂದ ಇದ್ದೇನೆ. ನನಗೆ ಆ ಮಹಿಳೆಯೊಂದಿಗೆ ಹೋಗಲು ಅನುಮತಿ ನೀಡಬೇಕೆಂದು ನ್ಯಾಯಾಲಯದಲ್ಲಿ ಹೇಳಿದಳು.
ಇವರ ವಾದ ಆಲಿಸಿದ ನ್ಯಾಯಾಲಯ ಈರ್ವರಿಗೂ ಒಂದಾಗಿ ಜೀವಿಸಲು ಅನುಮತಿಸಿತು. ಸಲಿಂಗ ಕಾಮಿಗಳಿಗೆ ಒಂದಾಗಿ ಜೀವಸಲು ಕಾನೂನಿನ ತಡೆಯಿಲ್ಲವೆಂಬ ಸುಪ್ರೀಮ್ ಕೋರ್ಟಿನ ತೀರ್ಪಿನ ಬಳಿಕ ಮೊದಲನೇಯ ಬಾರಿಗೆ ಕೇರಳ ಹೈಕೋರ್ಟು ಇಂತಹದ್ದೊಂದು ತೀರ್ಪು ನೀಡಿದೆ.