ಕೋಝಿಕ್ಕೊಡ್: ಕೇರಳದ ಹಿಂದೂಗಳ ಮತಗಳನ್ನು ಸಿಪಿಎಂ ವಿರುದ್ಧ ತಿರುಗಿಸಲು ಯತ್ನಿಸುತ್ತಿರುವ ಬಿಜೆಪಿ ಕೇರಳಕ್ಕೆ ಅಂಟಿದ ಶಾಪವೆಂದು ಕೇರಳದ ಸಚಿವ ಎಕೆ ಬಾಲನ್ ಎಂಬವರು ವಿವಾದಾಸ್ಪದ ಹೆಳಿಕೆಯನ್ನು ನೀಡಿದ್ದಾರೆ. ಬಿಜೆಪಿ ಸಿಪಿಂಗೆ ಹಿಂದೂಗಳ ಮತಗಳು ಸಿಗದಂತೆ ಮಾಡಲು ಯತ್ನಿಸುತ್ತಿದೆ. ಅದಕ್ಕಾಗಿ ಬೆಂಕಿಯುಗುಳವ ಹೇಳಿಕೆಗಳನ್ನು ನೀಡುತ್ತಿದೆ. ಇದು ಯಾವುದರಲ್ಲಿಯೂ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗದೆ ಹೋದಾಗ ಬಿಜೆಪಿ ಕೇರಳ ಅಧ್ಯಕ್ಷ ಶಬರಿಮಲೆ ವಿಷಯದಲ್ಲಿ ವಿವಾದ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ ಎಂದು ಬಾಲನ್ ಹೇಳಿದರು.

ಸರಕಾರ ಮತ್ತು ಸಿಪಿಎಂ ಸುಮ್ಮನಿರುವುದಿಲ್ಲ ಬಿಜೆಪಿಯ ಕೋಮುವಾದಿ ಪ್ರಚಾರದ ವಿರುದ್ಧ ಬಲವಾದ ಹೋರಾಟ ನಡೆಸಲಿದೆ. ಇದೆಲ್ಲವನ್ನು ಗುರುತಿಸಲು ವಿಫಲವಾದರೆ ಸ್ವಾಮಿ ವಿವೇಕಾನಂದರು ಹೇಳಿದಂತೆ ಕೇರಳ ಭ್ರಾಂತಾಲಯವಾಗಿ ಪರಿವರ್ತನೆಯಾಗಬಹುದು ಎಂದರು. ಕಾಂಗ್ರೆಸ್ ನಕಾರಾತ್ಮಕ ಧೋರಣೆಯನ್ನು ಮುಂದುವರಿಸಿದರೆ ಅದಕ್ಕೆ ಕೇರಳದಲ್ಲಿಯೂ ಉತ್ತರಭಾರತದ್ದೇ ಕಹಿ ಅನುಭವ ಕಾದಿದೆ ಎಂದು ಸಚಿವರು ಹೇಳಿದರು.

ಶಬರಿಮಲೆ ಮಹಿಳಾ ಪ್ರವೇಶ ಪ್ರಕರಣದಲ್ಲಿ ತಂತ್ರಿಕುಟುಂಬ, ಪಂದಳಂ ಅರಮನೆ, ಎನ್‍ಎಸ್‍ಎಸ್, ದೇವಸ್ವಂ ಮಂಡಲಿ ಕೂಡಕಕ್ಷಿಯಾಗಿತ್ತಲ್ಲವೇ. ಕೇರಳ ಸರಕಾರÀ ಸಂವಿಧಾನ ಪರ ನಿಲುವನ್ನು ಸ್ವೀಕರಿಸಿತು/. ಅಮಿಕಸ್ ಕ್ಯೂರಿಯ ಮುಂದೆ ಇವರು ಯಾರು ಕೂಡ ಅಭಿಪ್ರಾಯ ಹೇಳದಾದರು. ಯಾಕೆಂದರೆ ತಾತ್ವಿಕವಾಗಿ ಬಿಜೆಪಿ,ಕಾಂಗ್ರೆಸ್‍ಗಳಿಗೆ ಮಹಿಳಾ ಪ್ರವೇಶದ ವಿಷಯಲ್ಲಿ ಸಹಮತ ಇತ್ತು. ಆದ್ದರಿಂದ ಅಂದು ಸರಕಾರ ಕೂಡ ಸಂವಿಧಾನ ಪರ ನಿಲುವನ್ನು ಎತ್ತಿಹಿಡಿದಿದೆ. ಇದರ ವಿರುದ್ಧ ಅಭಿಪ್ರಾಯ ಪ್ರಕಟಿಸುವ ಗೋಜಿಗೆ ಅದು ಹೋಗಿಲ್ಲ. ಆದರೆ ಎಡಪಕ್ಷಗಳ ಸರಕಾರ ಯಾವ ವಿಶ್ವಾಸಕ್ಕೂ ಹಾನಿಯಾಗುವಂತಹ ವರ್ತಿಸಿಲ್ಲವೆಂದು ಬಾಲನ್ ಹೇಳಿದರು.

Leave a Reply