ಬೇಕಾಗುವ ಸಾಮಗ್ರಿ:

ಅಕ್ಕಿ – 2 ಕಪ್, ನೀರು – 4 ಕಪ್, ಏಲಕ್ಕಿ – 6, ಲವಂಗ – 6, ಕೆತ್ತೆ – 2 ತುಂಡು, ನಿಂಬೆರಸ – 1/2 ಟೀಸ್ಪೂನ್, ತುಪ್ಪ – 2 ಟೀ ಸ್ಪೂನ್, ಉಪ್ಪು.

ಮಸಾಲೆಯ ಸಾಮಗ್ರಿ:

ಮಟನ್ – 500 ಗ್ರಾಮ್, ನೀರುಳ್ಳಿ – 2 ದೊಡ್ಡದು, ಸಣ್ಣಗೆ ಕತ್ತರಿಸು, ಜಜ್ಜಿದ ಬೆಳ್ಳುಳ್ಳಿ – 6/7, ಜಜ್ಜಿದ ಶುಂಠಿ – 1 ದೊಡ್ಡ ತುಂಡು, ಕಾಯಿ ಮೆಣಸು – 4/5, ಟೊಮೇಟೊ – 2/3 ಕತ್ತರಿಸಿದು, ಗರಮ್ ಮಸಾಲ ಹುಡಿ – ಅರ್ಧ ಟೀಸ್ಪೂನ್, ತುಪ್ಪ – 2 ಟೀಸ್ಪೂನ್.

ಬಿಳಿ ಪೇಸ್ಟ್:
ತೆಂಗಿನ ತುರಿ – 3 ಟೀಸ್ಪೂನ್, ಗೇರು ಬೀಜ – 6-7, ಕಸ ಕಸ- 1/2 ಟೀಸ್ಪೂನ್ ಬೇಕಾದರೆ.
ಅದ್ದಿ ಇಡಲು:
ನೀರುಳ್ಳಿ – 1 ಕತ್ತರಿಸಿದು, ಮೊಸರು – 2 ದೊಡ್ಡ ಚಮಚ, ಹಳದಿ ಹುಡಿ – ಅರ್ಧ ಟೀಸ್ಪೂನ್, ಕರಿ ಮೆಣಸು ಹುಡಿ – 1 ಟೀಸ್ಪೂನ್, ನಿಂಬೆರಸ – 1 ಟೀಸ್ಪೂನ್, ಗರಮ್ ಮಸಾಲ -ಅರ್ಧ ಟೀಸ್ಪೂನ್, ಉಪ್ಪು

ತಯಾರಿಸುವ ವಿಧಾನ:

ಮಟನನ್ನು ಅದ್ದಿ ಇಡಲು ಉಪಯೋಗಿಸಲಾಗುವ ಸಾಮಗ್ರಿಯಲ್ಲಿ ಹಾಕಿ 1 ಗಂಟೆಗಳ ಕಾಲ ಇಡಿ. ಕುಕ್ಕರ್‍ನಲ್ಲಿ ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿ ಮಾಡಿ ನೀರುಳ್ಳಿ ಹಾಕಿ ಕಂದು ಬಣ್ಣ ಆದಾಗ ಬೆಳ್ಳುಳ್ಳಿ ಶುಂಠಿಯನ್ನು ಕಾಯಿ ಮೆಣಸು ಹಾಕಿ. 2 ನಿಮಿಷಗಳ ನಂತರ ಟೊಮೇಟೊ ಹಾಕಿ. ಟೊಮೇಟೊ ಬೆಂದಾಗ ಗರಮ್ ಮಸಾಲ ಹುಡಿ ಹಾಕಿ. 5 ನಿಮಿಷದ ನಂತರ ಮಸಾಲೆಯಲ್ಲಿ ಹಾಕಿಟ್ಟ ಮಟನ್ ಮಸಾಲೆಯೊಂದಿಗೆ ಹಾಕಿ. ಅರ್ಧ ಕಪ್ ನೀರು ಹಾಕಿ ಬೇಯಿಸಿ.

ಬಿಳಿ ಪೇಸ್ಟ್ ಮಾಡಲು:

ಅದರ ಸಾಮಗ್ರಿಯನ್ನು ಸಣ್ಣಗೆ ರುಬ್ಬಿ ಕೊಳ್ಳಿ. ಮಟನ್ ಅರ್ಧ ಬೆಂದಾಗ ಈ ಮಸಾಲೆಯನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಬೇಯಿಸಿ. ಮಸಾಲೆ ಸ್ವಲ್ಪ ದಪ್ಪವಾಗಿರಲಿ.
ದೊಡ್ಡ ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಏಲಕ್ಕಿ, ಲವಂಗ, ಕೆತ್ತೆ, ದಾಲ್ಚೀನಿ ಎಲೆ, ಮತ್ತು ಉಪ್ಪು ಹಾಕಿ ಕುದಿಸಿ. ಮೊದಲೇ ಅಕ್ಕಿಯನ್ನು ತೊಳೆದು 30 ನಿಮಿಷಗಳಿಗೆ ನೆನೆ ಹಾಕಿ. ನೀರನ್ನು ಬಸಿಯಿರಿ.

ಒಂದು ದೊಡ್ಡ ಪಾತ್ರೆಯಲ್ಲಿ ಮಟನ್‍ನ ಅರ್ಧ ಭಾಗವನ್ನು ಹಾಕಿ. ಅದರ ಮೇಲೆ ಅನ್ನ ಹಾಕಿ ಪುನಃ ಮಸಾಲೆ ಹಾಕಿ. ಅಕ್ಕಿ ಹಾಕಿ. ಕೊನೆಗೆ ತುಪ್ಪ ಮತ್ತು ಕೊತ್ತಂಬರಿ ಎಲೆ ಹಾಕಿ ಪಾತ್ರೆ ಮುಚ್ಚಿ ಹಬೆ ಹೊರಗೆ ಹೋಗದಂತೆ ಮುಚ್ಚಿ 25 ನಿಮಿಷಗಳ ಕಾಲ ಹದ ಉರಿಯಲ್ಲಿ ಬೇಯಿಸಿ.

ಇದನ್ನು ಓವನ್‍ನಲ್ಲೂ ಮಾಡಬಹುದು. 10 ನಿಮಿಷದ ಮೊದಲು ಒಂದನ್ನು 180 ಡಿಗ್ರಿಯಷ್ಟು ಬಿಸಿ ಮಾಡಿ. ಬೇಕಿಂಗ್ ಪಾತ್ರೆಯಲ್ಲಿ ತುಪ್ಪ ಹಚ್ಚಿ ಅದರ ಮೇಲೆ ಮಟನ್ ಮತ್ತು ಅಕ್ಕಿಯ ಬೇಯರ್ ಹಾಕಿ. 25/30 ನಿಮಿಷ ಬೇಕ್ ಮಾಡಿ. ಫ್ರೈ ಮಾಡಿದ ನೀರುಳ್ಳಿ ಮತ್ತು ಗೇರು ಬೀಜ, ಕಿಶ್‍ಮಿಶ್ ಹಾಕಿ ಅಲಂಕರಿಸಿ.

Leave a Reply