1995 ರಲ್ಲಿ ಕೇರಳದಲ್ಲಿ ಆಸ್ಪತ್ರೆಯಲ್ಲಿ ಒಂದೇ ಹೆರಿಗೆಯಲ್ಲಿ ಐದು ಮಕ್ಕಳು ಜನಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಮಕ್ಕಳಲ್ಲಿ ನಾಲ್ವರು ಹೆಣ್ಣು ಒಬ್ಬ ಗಂಡು. ಒಂದೇ ದಿನ ಹುಟ್ಟಿದ ಇವರ ಎಲ್ಲವೂ ವಿಶೇಷವಾಗಿತ್ತು. ಶಾಲಾ ಮೊದಲ ದಿನ, ಕಾಲೇಜಿನ ಮೊದಲ ದಿನ, ಮೊದಲ ಮತಚಲಾವಣೆ ಎಲ್ಲವೂ ವಿಶೇಷವಾಗಿತ್ತು. ಮಾತ್ರವಲ್ಲ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇವರ ಜೀವನದಲ್ಲಿ ಹಲವು ಕಹಿ ನೆನಪುಗಳು ಸಂಭವಿಸಿದರೂ ಇದೀಗ ಈ ಸಹೋದರಿಯರು ಇನ್ನೊಂದು ಇನ್ನಿಂಗ್ಸ್ ಪ್ರಾರಂಭಿಸಲು ಸಜ್ಜಾಗಿದ್ದಾರೆ.

ಬರುವ ವರ್ಷ ಏಪ್ರಿಲ್ ನಲ್ಲಿ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಒಂದೇ ದಿನ ಎಲ್ಲರೂ ಮದುವೆಯಾಗಲಿದ್ದಾರೆ. ಈ ಮಕ್ಕಳ ತಂದೆ ಸಣ್ಣ ವ್ಯಾಪಾರಿಯಾಗಿದ್ದರು. ಮಾತ್ರವಲ್ಲ ಮಕ್ಕಳ ಬಗ್ಗೆ ಅವರು ತುಂಬಾ ಉತ್ಸುಕರಾಗಿದ್ದರು. ಐದು ಮಕ್ಕಳಿಗೆ ಅವರು ಸಮಾನ ಹೆಸರುಗಳನ್ನು ಇಟ್ಟರು. ಈ ಮಕ್ಕಳು ಉತ್ರಮ್ ನಕ್ಷತ್ರದಲ್ಲಿ ಜನಿಸಿದ ಕಾರಣ ಅವರಿಗೆ ಉಹ್ತ್ರಾಜಾ, ಉತ್ತರಾ, ಉತಮಾ, ಉತ್ರಾ ಮತ್ತು ಉತ್ರಾಜನ್ ಎಂದು ಹೆಸರಿಟ್ಟರು. ಬಳಿಕ ತನ್ನ ಮನೆಗೆ ಪಂಚರತ್ನಮ್ ಎಂದು ಮರುನಾಮಕರಣ ಮಾಡಿದರು. ಆ ಮಕ್ಕಳನ್ನು ಒಂದೇ ರೀತಿ ಸಾಕುವುದು ಅಷ್ಟು ಸುಲಭವಾಗಿರಲಿಲ್ಲ. ಒಂದೇ ರೀತಿಯ ಬಟ್ಟೆ, ಬ್ಯಾಗ್ , ಚೀಲ ಹೀಗೆ ಎಲ್ಲವೂ ಒಂದೇ ರೀತಿಯಲ್ಲಿ ಒದಗಿಸಲು ಕಷ್ಟ ಪಟ್ಟರು.

ಅವರ ಪತ್ನಿಗೆ ಹೃದಯ ಕಾಯಿಲೆ ಉಂಟಾದಾಗ ಈ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಈ ಮಕ್ಕಳು ಜನಿಸಿದ ಒಂಬತ್ತು ವರ್ಷಗಳ ನಂತರ ಅವರ ತಂದೆ 2004ರಲ್ಲಿ ತನ್ನ ಅನಾರೋಗ್ಯ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಆತ್ಮಹತ್ಯೆಗೆ ಶರಣಾದರು. ಈ ದುರಂತ ಇಡೀ ರಾಜ್ಯವನ್ನು ದಿಗ್ಭ್ರಮೆಗೊಳಿಸಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದಾಗ ಕೆಲವು ಮಾಧ್ಯಮ ಸಂಸ್ಥೆಗಳು ಅವರಿಗೆ ಸಹಾಯ ಮಾಡಲು ಮುಂದೆ ಬಂದವು. ತಾಯಿಗೆ ಸರ್ಕಾರೀ ಕೆಲಸ ಸಿಕ್ಕಿತು. ಈಗ ಈ ಮಕ್ಕಳು ಕಲಿತು ಮುಂದೆ ಬಂದಿದ್ದು, ಒಬ್ಬಳು ಫ್ಯಾಷನ್ ಡಿಸೈನರ್, ಮತ್ತಿಬ್ಬರು ಅರಿವಳಿಕೆ ತಂತ್ರಜ್ಞರು, ಮತ್ತೊಬ್ಬಳು ಆನ್ಲೈನ್ ಬರಹಗಾರ್ತಿ. ಅವರ ಸಹೋದರ ಒಬ್ಬ ಟೆಕ್ಕಿ ಆಗಿ ಕೆಲಸ ಮಾಡುತ್ತಿದ್ದಾನೆ.

ನನ್ನ ಗಂಡನ ಅನಿರೀಕ್ಷಿತ ಆತ್ಮಹತ್ಯೆ ಬಹಳ ಆಘಾತವನ್ನುಂಟು ಮಾಡಿತು. ನಾನು ಮಕ್ಕಳಿಗಾಗಿ ಬದುಕಬೇಕು ಎಂದು ಭಾವಿಸಿದೆ. ಇಚ್ಛಾ ಶಕ್ತಿ ಇದ್ದಲ್ಲಿ ಮಾರ್ಗವಿದೆ ಎಂದು ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ಅವರ ತಾಯಿ ಹೇಳುತ್ತಾರೆ.

ಈ ಮಕ್ಕಳ ಜೀವಂತ ಇದ್ದಾಗ ಎಲ್ಲರಿಗೂ ಎಲ್ಲವೂ ಸಮಾನವಾಗಿ ಸಿಗಬೇಕು ಎಂದು ತಾಕೀತು ಮಾಡಿದ್ದರು. ನಾವು ಅವರ ಕನಸನ್ನು ಈಡೇರಿಸಲು ಬಯಸುತ್ತೇವೆ. ಆದ್ದರಿಂದ ಮಕ್ಕಳ ಮದುವೆಯನ್ನು ಒಂದೇ ದಿನ ನಿಗದಿ ಪಡಿಸಿದ್ದೇವೆ. ನನ್ನ ಮಗ ಇನ್ನಷ್ಟು ಬೆಳೆಯ ಬೇಕಾದ್ದರಿಂದ ಅವನು ಸ್ವಲ್ಪ ಕಾಯಬೇಕು ಎಂದು ತಿರುವನಂತಪುರಂ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ನಾಲ್ಕನೇ ದರ್ಜೆಯ ಉದ್ಯೋಗಿಯಾಗಿರುವ ಅವರ ತಾಯಿ ಹೇಳುತ್ತಾರೆ. ನಾವು ನಮ್ಮ ಒಡಹುಟ್ಟಿದ ಸಹೋದರನನ್ನ ತುಂಬಾ ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಸಹೋದರಿಯರು ಹೇಳಿದ್ದಾರೆ.

Leave a Reply