ತಿರುವನಂತಪುರ: ಕೊರೊನಾ ಸೋಂಕು ಬಂದ ಮೇಲೆ ಕೇರಳದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಅಧಿಕ ಗೊಂಡಿದೆ. ಆನ್‌ಲೈನ್ ಶಿಕ್ಷಣಕ್ಕೆ ಅವಕಾಶ ನೀಡಿದ್ದರೂ ಲಾಕ್‌ಡನ್‌ನಿಂದಾಗಿ ಮನೆಯಲ್ಲಿ ರುವುದರಿಂದ ಮಕ್ಕಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಮಾರ್ಚ್ 25 ರಿಂದ ಜುಲೈ 10 ವರೆಗೆ ಒಟ್ಟು 66 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಸಂಶೋಧನೆ ನಡೆಸುತ್ತಿದ್ದು, ಇದಕ್ಕೆ ಲಾಕ್ ಡೌನ್ ಕಾರಣ ಎಂದು ಡಾ. ಅಂಜು ಮ್ಯಾಥ್ಯು ಹೇಳಿದ್ದಾರೆ. ಕೇರಳ ಮೊದಲಿನಿಂದಲೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವ ನೀಡುತ್ತ ಬಂದಿದೆ. ಈಗ ಕೊರೋನಾ ಸೋಂಕು ಅಧಿಕಗೊಂಡಿದ್ದು, ವಿದ್ಯಾರ್ಥಿಗಳ ಆತ್ಮಹತ್ಯೆ ರಾಷ್ಟ್ರೀಯ ಸರಾಸರಿ ಗಿಂತ ಅಧಿಕವಾಗಿದೆ. 2014 ರಲ್ಲಿ 330, 2015 ರಲ್ಲಿ 297, 2016 ರಲ್ಲಿ 242 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವಜಾತ ಶಿಶುಗಳ ಮರಣ ಕೂಡ ಕೇರಳದಲ್ಲಿ ಕಡಿಮೆ. ಹೀಗಿರುವಾಗ ಮಕ್ಕಳು ಆತ್ಮಹತ್ಯೆ ಮಾಡಿ ಕೊಳ್ಳಲು ಮಾನಸಿಕ ಒತ್ತಡ ಮತ್ತು ಆತಂಕ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಎಂದರೆ ಆತ್ಮವಿಶ್ವಾಸ ತುಂಬುವುದು. ಮಕ್ಕಳಲ್ಲಿ ಹೆದರಿಕೆ ತುಂಬಿದಲ್ಲಿ ಅವರು ಜೀವನದಲ್ಲಿ ಯಾವುದೇ ಸಂದಿಗ್ಧ ಪರಿಸ್ಥಿತಿ ಎದುರಿಸಲು ಆತ್ಮ ಸೈರ್ಯ ಇರುವುದಿಲ್ಲ. ಈಗ ಆನ್‌ಲೈನ್ ಶಿಕ್ಷಣಕ್ಕೆ ಉತ್ತಮ ಲ್ಯಾಪ್ ಟ್ಯಾಪ್ ಮತ್ತು ಮೊಬೈಲ್ ಬೇಕು. ಬಹುತೇಕ ತಂದೆತಾಯಿಗಳಿಗೆ ಹಣ ಕೊರತೆಯಿಂದ ಸ್ಮಾರ್ಟ್ ಫೋನ್ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಇದರಿಂದ ಇತರೆ ಮಕ್ಕಳಿಗಿಂತ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ.

LEAVE A REPLY

Please enter your comment!
Please enter your name here