ನವರಾತ್ರಿ ದಿವಸಗಳಲ್ಲಿ ಮಾಂಸ ಮಾರಾಟ ಮಾಡಲು ಬಿಡೆವು ಎಂಬ ಬೆದರಿಕೆಯೊಂದಿಗೆ ಶಿವಸೇನೆ ಸಹಿತ 22 ಹಿಂದೂ ಸಂಘಟನೆಗಳು ರಂಗಕ್ಕಿಳಿದಿವೆ. ಹರಿಯಾಣದ ಗುರುಗ್ರಾಮದಲ್ಲಿ ಈ ಸಂಘಟನೆಗಳು ಬೆದರಿಕೆಯೊಡ್ಡಿವೆ. ಅಕ್ಟೊಬರ್ ಹತ್ತರಿಂದ ಹದಿನೆಂಟರ ವರೆಗೆ ನವರಾತ್ರಿ ಉತ್ಸವಗಳು ನಡೆಯುತ್ತಿವೆ.

ಈ ಸಂಧರ್ಭದಲ್ಲಿ ಯಾವುದಾದರೂ ಮಾಂಸದಂಗಡಿಗಳು ತೆರೆದಿಟ್ಟರೆ ನಾವು ಅದನ್ನು ಮುಚ್ಚುವೆವು ಎಂಬ ಬೆದರಿಕೆಯೊಡ್ಡಲಾಗಿದೆ. ಅದರ ಹೆಸರಲ್ಲಿ ಅನಾಹುತಗಳು ನಡೆದರೂ ನಾವು ನೋಡಿಕೊಳ್ಳುವೆವು ಎಂದು ಶಿವಸೇನೆಯಜಿಲ್ಲಾಧ್ಯಕ್ಷ ಗೌತಮ್ ಹೇಳಿದರು.

125 ಸದಸ್ಯರನ್ನು ನಾವು ನೇಮಕಗೊಳಿಸಿದ್ದು ಇವರು ನಗರದ ಪ್ರತೀ ಮಾಂಸದ ಅಂಗಡಿಗಳಿಗೆ ಭೇಟಿ ನೀಡಲಿದ್ದಾರೆ, ಎಂದೂ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲಿ ಪೋಲೀಸ್ ಭದ್ರತೆ ಹೆಚ್ಚಿಸಿದ್ದು ಯಾರಾದರೂ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೋಲೀಶ್ ಕಮೀಶನರ್ ಎಚ್ಚರಿಕೆ ನೀಡಿದ್ದಾರೆ.

2017 ರಲ್ಲಿ ಗುರ್ಗಾಂವ್ ನಲ್ಲಿ ಕೆಎಫ್ ಸಿ ಸೇರಿದಂತೆ ಸುಮಾರು 500 ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಬೇಡಿಕೆ ಇಡಲಾಗಿತ್ತು. ಆದರೆ ಪೋಲೀಸರ ಮಧ್ಯ ಪ್ರವೇಶದಿಂದ ಕೆಎಫ್ಸಿ ತೆರೆದಿದ್ದು, ಮಾಂಸದ ಅಂಗಡಿಗಳು ಮುಚ್ಚಲ್ಪಟ್ಟಿತ್ತು.

Leave a Reply