Representational Image

ಬೇಕಾಗುವ ಸಾಮಗ್ರಿಗಳು

ಖರ್ಜೂರ- 1/2 ಕೆಜಿ (25ರಿಂದ 30),
ಬೆಲ್ಲ- ಒಂದು ಸಣ್ಣ ತುಂಡು,
ತೆಂಗಿನಹಾಲು- ಪ್ರಥಮ ಹಾಲು 3/4 ಕಪ್,
ಎರಡನೇ ಹಾಲು 1,1/2 ಕಪ್,
ಏಲಕ್ಕಿ, ಒಣ ಶುಂಠಿ ಹುಡಿ- 1/4 ಟೀ.ಸ್ಪೂ.,
ತುಪ್ಪ- ರುಚಿಗೆ,
ತೆಂಗಿನ ತುಂಡುಗಳು- 5-10.

ತಯಾರಿಸುವ ವಿಧಾನ:

ಸ್ವಲ್ಪ ಬಿಸಿಯಾದ ನೀರಿನಲ್ಲಿ ನೆನೆಹಾಕಿದ ಖರ್ಜೂರ ವನ್ನು ಬೀಜ ತೆಗೆದು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಅರೆಯಿರಿ. ತಳ ದಪ್ಪವಿರುವ ಪಾತ್ರೆಯಲ್ಲಿ ತುಪ್ಪ ಸೇರಿಸಿ ಇದನ್ನು ಹಾಕಿ ನೀರು ಆರುವ ವರೆಗೆ ಬೇಯಿಸಿ. ಬೆಲ್ಲವನ್ನು ನೀರು ಮಾಡಿ ಸೇರಿಸಿ ಪುನಃ ಕುದಿಸಿ. ತುಪ್ಪ ತೆಂಗಿನಹಾಲು ಸೇರಿಸಿ, ಕುದಿಯುವಾಗ ಬೆಂಕಿ ನಂದಿಸಿ ಏಲಕ್ಕಿ, ಒಣ ಶುಂಠಿ ಹುಡಿ ಸೇರಿಸಿ.  ತೆಂಗಿನ ತುಂಡುಗಳನ್ನು ತುಪ್ಪದಲ್ಲಿ ಹುರಿದು ಸೇರಿಸಿ.

LEAVE A REPLY

Please enter your comment!
Please enter your name here