ಹೊಸದಿಲ್ಲಿ: ಮನುಷ್ಯ ದೇಹದ ಯಾವುದಾದರೂ ಭಾಗ ಕಳಕೊಳ್ಳುವ ಪರಿಸ್ಥಿತಿ ಎದುರಾದರೆ ಜನರು ಡಿಫ್ರೆಶನ್‍ಗೊಳಗಾಗುತ್ತಾರೆ. ಆದರೆ ಕೆಲವರು ಪರಿಸ್ಥಿತಿಯನ್ನು ಇದ್ದಂತೆ ಎದುರಿಸುತ್ತಾರೆ. ಇನ್ನು ಕೆಲವರು ಅದನ್ನೂ ಅನುಭವಿಸುತ್ತಾರೆ.ದಿಲ್ಲಿಯ ಸಿಮೆಂಟು ಕಾರ್ಖಾನೆಯಲ್ಲಿ ದುಡಿಯುತ್ತಿರುವ ವೃದ್ಧ ವ್ಯಕ್ತಿ ಕೋಪರ್ ಸಿಂಗ್ ಕೂಲಿ ಕಾರ್ಮಿಕ. ಒಂದು ಕಾಲಲ್ಲಿಯೇ ಅವರು ಪರಿಶ್ರಮದ ಕೆಲಸ ಸಲೀಸಾಗಿ ಮಾಡಿ ಮುಗಿಸಬಲ್ಲರು. ಬಡತನ ಅವರನ್ನು ಈಸ್ಥಿತಿಯಲ್ಲಿಯೂ ಧೃತಿಗೆಡದೆ ದುಡಿಯುವಂತೆ ಮಾಡಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊ ವೈರಲ್ ಆಗಿದೆ. ಅವರು ಒಂದು ಕಾಲಿನಲ್ಲಿ ಹೊಯ್ಗೆ ಸಿಮೆಂಟನ್ನು ಯಂತ್ರಕ್ಕೆ ತುಂಬುತ್ತಿದ್ದಾರೆ. ಕಷ್ಟದ ಕೆಲಸವನ್ನು ಅವರು ಲೀಲಾಜಾಲವಾಗಿ ಮಾಡುತ್ತಿರುವುದನ್ನು ನೋಡಿದರೆ ಯಾರೂ ಹುಬ್ಬೇರಿಸಬಹುದು.

ರಾಜಸ್ಥಾನದ ಖೋಪರ್ ಸಿಂಗ್ ದಿಲ್ಲಿಯಲ್ಲಿ ಕೆಲಸ ಮಾಡುತಾರೆ. ಕೆಲಸದಲ್ಲಿ ಖೋಪರ್ ತನ್ಮಯತೆ ಅವರು ಖುಷಿಯಾಗಿದ್ದಾರೆನ್ನುವುದನ್ನು ತಿಳಿಸುತ್ತಿದೆ. ವೀಡಿಯವನ್ನು 60 ಲಕ್ಷ ಮಂದಿ ನೋಡಿದ್ದಾರೆ ಮತ್ತು 70 ಸಾವಿರ ಮಂದಿ ಶೇರ್ ಮಾಡಿದ್ದಾರೆ. ವಿನೋದ್ ಶೌರಿ ಎನ್ನುವವರು ವೀಡಿಯೊವನ್ನು ಫೇಸ್‍ಬುಕ್‍ಗೆ ಹಾಕಿದ್ದರು.

Leave a Reply