ಮಂಡ್ಯ : ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿದವರನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ತನ್ನ ಅಂಗಡಿಯ ಹೊರಗೆ ಕಿಡ್ನಿ ಮಾರುವುದಾಗಿ ಫಲಕ ಹಾಕಿದ್ದಾನೆ. ಗ್ರಾಮದ ವಿನೋದ್ ಕುಮಾರ್ (26) ಸಾಲಬಾಧೆ ತಾಳಲಾರದೆ ಕಿಡ್ನಿ ಮಾರಲು ಮುಂದಾದ ಯುವಕ.

ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿ ಟೀ ಸ್ಟಾಲ್ ಅಂಗಡಿ ನಡೆಸುವ ಈತ ಮನೆ ನಿರ್ಮಾಣ ಹಾಗೂ ಇನ್ನಿತರ ಕಾರಣಗಳಿಗೆ ಸಾಲ ಮಾಡಿದ್ದು ಇದೀಗ ಬಡ್ಡಿ ಕಟ್ಟಲು ಸಾಧ್ಯವಾಗದೆ ಕಂಗಾಲಾಗಿದ್ದಾನೆ. ಹಣ ಕೊಟ್ಟವರಿಗೆ ಜಾಮೀನು ಮಾರಿ ಹಣ ನೀಡೋಣವೆಂದರೆ ಜಮೀನಿನ ಡಾಕುಮೆಂಟ್ ಸರಿಯಾಗುತ್ತಿಲ್ಲ ಎಂದು ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ.

ನಂತರ ಸ್ಥಳೀಯ ಪೊಲೀಸರಿಗೆ ಈ ವಿಷಯ ತಿಳಿದು ಆತನನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಕೆಲವು ದಿನಗಳಿಂದ್ ವಿಚಿತ್ರವಾಗಿ ಮಾನಸಿಕವಾಗಿ ವರ್ತಿಸುತ್ತಿದ್ದಾನೆ ಎಂದು ಕುಟುಂಬದವರು ಹೇಳಿದ್ದಾರೆ. ನಿಮಾನ್ಸ್ ಗೆ ತೋರಿಸುವಂತೆ ಸ್ಥಳೀಯ ವೈದ್ಯರು ಸಲಹೆ ನೀಡಿದ್ದಾರೆ.

Leave a Reply