ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು, ಆಹಾರದಲ್ಲಿನ ವ್ಯತ್ಯಾಸ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣ. ಆದರೆ, ಹೊಸ ಅಧ್ಯಯನವೊಂದು ವಿಷಕಾರಿ ಗಾಳಿಯೂ ಸಹ ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಗೆ ಮುಖ್ಯ ಕಾರಣ ಎಂಬುದನ್ನು ಬಹಿರಂಗಪಡಿಸಿದೆ.

ಮಿಚಿಗನ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನವೊಂದರ ಪ್ರಕಾರ, ಗಾಳಿಯಲ್ಲಿನ ಹಾನಿಕಾರಕ ಕಣಗಳು ಮೂತ್ರಪಿಂಡದ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದರಂತೆ ಧೂಮಪಾನ ಮಾಡುವುದಕ್ಕಿಂತಲೂ ಹೆಚ್ಚು ದುಷ್ಪರಿಣಾಮ ವಿಷಕಾರಿ ಗಾಳಿಯಿಂದ ಆಗುತ್ತದೆ ಎನ್ನಲಾಗಿದೆ.

“ಧೂಮಪಾನದಂತೆಯೇ ವಾಯು ಮಾಲಿನ್ಯವು ಮೂತ್ರಪಿಂಡಗಳಿಗೆ ನೇರವಾಗಿ ಹಾನಿಕಾರಕ” ಎಂದು ಅಧ್ಯಯನದ ಪ್ರಮುಖ ಲೇಖಕ ಜೆನ್ನಿಫರ್ ಬ್ರಗ್-ಗ್ರೇಷಮ್ ಹೇಲಿದ್ದಾರೆ. “ಮೂತ್ರಪಿಂಡಗಳು ತನ್ಮೂಲಕ ದೊಡ್ಡ ಪ್ರಮಾಣದಲ್ಲಿ ರಕ್ತಪರಿಚಲನೆಯನ್ನು ಹೊಂದಿದ್ದು, ಯಾವುದೇ ರೀತಿಯಲ್ಲಿ ರಕ್ತ ಸಂಚಲನ ಪ್ರಕ್ರಿಯೆಗೆ ತೊಂದರೆಯಾದರೆ ಅದರಿಂದ ಮೊದಲು ಹಾನಿಯಾಗುವುದು ಮೂತ್ರಪಿಂಡಗಳಿಗೆ” ಎಂದಿದ್ದಾರೆ.

ಹಾಗಾಗಿ ಮಾಲಿನ್ಯಯುಕ್ತ ಪ್ರದೇಶಗಳಲ್ಲಿ ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಗಳು ಅಧಿಕವಾಗಿ ಕಂಡುಬರುತ್ತದೆ ಎಂದು ಸಂಶೋಧನಾ ಅಧ್ಯಯನ ಹೇಳಿದೆ.

Leave a Reply