ಯುಎಇ: ಅಜ್ಮಾನ್‍ನಲ್ಲಿ ಇಬ್ಬರು ಮಕ್ಕಳೊಂದಿಗೆ ತಮಿಳ್ನಾಡಿನ ಬದ್ರುದ್ದೀನ್ ಎಂಬವರು ಊರಿಗೆ ಬರಲಾಗದೆ ಸಂಕಟ ಅನುಭವಿಸುತ್ತಿದ್ದಾರೆ. ಬದ್ರುದ್ದೀನ್ ಶ್ರೀಲಂಕದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು ಬದ್ರುದೀನ್ ಮತ್ತು ಅಕ್ಸಿಸ್‍ಬಾ ದಂಪತಿಗಳಿಗೆ ಒಂದು ಗಂಡು ಒಂದು ಹೆಣ್ಣು ಮಗು ಆಗಿತ್ತು. ನಂತರ ಅಕ್ಸಿಸ್‍ಬಾ ಬದ್ರುದ್ದೀನ್‍ರ ತೊರೆದು ಊರಿಗೆ ಹೊರಟು ಹೋಗಿದ್ದಾಳೆ.ಹೋಗುವಾಗ ಬದ್ರುದ್ದೀನ್ ದುಡಿದ ಹಣ ಮತ್ತು ಮಕ್ಕಳ ಬಗ್ಗೆಯಿರುವ ದಾಖಲೆಗಳನ್ನು ಕೂಡಾ ಅಕ್ಸಿಸ್‍ಬಾ ಕೊಂಡೊಯ್ದಿದ್ದಾಳೆಂದು ಬದ್ರುದ್ದೀನ್ ನೊಂದು ಹೇಳುತ್ತಿದ್ದಾರೆ.

ಮಕ್ಕಳಿಗೆ ಶ್ರೀಲಂಕಾದ ಪಾಸ್‍ಪೋರ್ಟ ಇದೆ. ಭಾರತದ ಪಾಸ್‍ಪೋಟು ಸಿಗದೆ ಮಕ್ಕಳೊಂದಿಗೆ ಬದ್ರುದ್ದೀನ್ ತಮಿಳ್ನಾಡಿಗೆ ಮರಳುವ ಸ್ಥಿತಿಯಲ್ಲಿಲ್ಲ. ಮಕ್ಕಳಿಗೆ ಇಂಡಿಯನ್ ಪಾಸ್‍ಪೋರ್ಟು ಮಾಡಿಸುವುದಕ್ಕಾಗಿ ಬದ್ರುದ್ದೀನ್ ಅಲೆದಾಡುತ್ತಿದ್ದಾರೆ. ಶ್ರೀಲಂಕನ್ ಪತ್ನಿ ತನಗೆ ಕೈಕೊಟ್ಟ ನಂತರ ಯುಎಇಯ ಅಜ್ಮಾನ್‍ನ ಲೇಬರ್ ಕ್ಯಾಂಪಿನಲ್ಲಿ ಇಬ್ಬರು ಪುಟ್ಟ ಮಕ್ಕಳ ಜತೆ ಬದ್ರುದ್ದೀನ್ ವಾಸವಾಗಿದ್ದಾರೆ.

ಲೇಬರ್ ಕ್ಯಾಂಪಿನಲ್ಲಿ ಹನ್ನೆರಡು ಕಾರ್ಮಿಕರು ವಾಸವಿರುವ ಕೋಣೆಯಲ್ಲಿ ಇಬ್ಬರು ಮಕ್ಕಳನ್ನು ಸಾಕಲು ಬದ್ರುದ್ದೀನ್ ತೀರಾ ಕಷ್ಟಅನುಭವಿಸುತ್ತಿದ್ದು ಮೂರು ವರ್ಷದ ಆಂಟನಿ ಮತ್ತು ಒಂದೂವರೆ ವರ್ಷದ ಆಂಟನಿ ಬದ್ರುದ್ದೀನ್ ಅಕ್ಸಿಸ್ಬ ಫೆರ್ನಾಂಡೊ ದಂಪತಿಯ ಕರುಳ ಕುಡಿಗಳಾಗಿದ್ದು, ಚಿಕ್ಕವಳು ಮೇರಿಗೆ ಹತ್ತುತಿಂಗಳು ಆಗಿದ್ದಾಗ ಅಕ್ಸಿಸ್‍ಬಾ ಪತಿ,ಮಕ್ಕಳನ್ನು ತೊರೆದು ಶ್ರೀಲಂಕಕ್ಕೆ ಹೋಗಿದ್ದಾರೆ.

ಬದ್ರುದ್ದೀನ್‍ರ ಹಣ,ಮಕ್ಕಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹೋಗುವಾಗ ಪತ್ನಿ ಕೊಂಡು ಹೋಗಿದ್ದಾರೆ ಎಂದು ಬದ್ರುದ್ದೀನ್ ಹೇಳುತ್ತಿದ್ದಾರೆ. ಬದ್ರುದ್ದೀನ್ ತಮಿಳ್ನಾಡಿನ ರಾಮೇಶ್ವರ ನಿವಾಸಿಯಾಗಿದ್ದು, ಸಾರ್ವತ್ರಿಕ ಕ್ಷಮಾದಾನದ ಸಮಯದಲ್ಲಿ ಊರಿಗೆ ಹೋಗಲು ನಿರ್ಧರಿಸಿದ್ದಾರೆ.ಆದರೆ ಮಕ್ಕಳಿಗೆ ಶ್ರೀಲಂಕನ್ ಪಾಸ್‍ಪೋರ್ಟ್ ಇದೆ. ಭಾರತಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬೇಕಾದರೆ ಇಂಡಿಯನ್ ಪಾಸ್‍ಪೋರ್ಟ್ ಸಿಗಬೇಕಾಗಿದೆ.

ಅಧಿಕಾರಿಗಳ ಸೂಚನೆಯಂತೆ ಮಕ್ಕಳ ಶ್ರೀಲಂಕನ್ ನಾಗರಿಕತೆ ರದ್ದುಪಡಿಸಲಾಗಿದೆ. ಆದರೆ, ಭಾರತದ ನಾಗರಿಕತೆ ಸಿಗಬೇಕಾಗಿದೆ..ಗಲ್ಫ್ ನಲ್ಲಿ ಪರಿಚಿತಳಾದ ಅಕ್ಸಿಸ್‍ಬಾರನ್ನು ಬದ್ರುದ್ದೀನ್ 2014ರಲ್ಲಿ ಮದುವೆಯಾಗಿದ್ದರು. ತಾಯಿಲ್ಲದೆ ತಬ್ಬಲಿಯಾದ ಮಗುವನ್ನು ಸಾಕುವ ಅಲೆದಾಟದಲ್ಲಿ ಇದ್ದ ಕೆಲಸವನ್ನೂ ಬದ್ರುದ್ದೀನ್ ಕಳಕೊಂಡರು. ಹೇಗಾದರೂ ತನ್ನೂರಿಗೆ ತೆರಳಬೇಕೆನ್ನುವ ಪ್ರಯತ್ನದಲ್ಲಿ ಬದ್ರುದ್ದೀನ್ ಇದ್ದಾರೆ. ಆದರೆ ಅದು ಈಡೇರಬೇಕಾದರೆ ಮಕ್ಕಳಿಗೆ ಭಾರತದ ಪೌರತ್ವ ಸಿಗಬೇಕಾಗಿದೆ. ಮಕ್ಕಳಿಗೆ ತಂದೆಯ ಊರಿನವರಾಗಬೇಕು. ಅದಕ್ಕೆ ಭಾರತದ ಅಧಿಕಾರಿಗಳ ಕೃಪೆ ದೋರಲೇಬೇಕಾಗಿದೆ.

Leave a Reply