ಕರಸ್ನೊಯಾರಸ್ಕ್: ಪ್ರಿಯತಮೆಯನ್ನು ಕರೆದುಕೊಂಡು ಡೇಟಿಂಗ್ ಗೆಂದು ತೆರಳಿದಾತ ಆಕೆಯನ್ನು 88 ಬಾರಿ ಇರಿದು ಕೊಂದ ಘಟನೆ ರಷ್ಯಾದ ಕರಸ್ನೊಯಾರಸ್ಕ್ ನಲ್ಲಿ ನಡೆದಿದೆ.
34 ರ ಹರೆಯದ ಐರಿನಾ ಕ್ಲೋರೋವಾ ಪ್ರೀಯತಮನಿಂದ ಹತಳಾದ ದುರ್ದೈವಿ. ಐರಿನಾ ಪ್ರಸಿದ್ಧ ಉದ್ಯಮಿಯಾಗಿದ್ದ ಎವಾಗ್ನಿಯಾ ಮಾರ್ಕೋವ್ ಎಂಬಾತನನ್ನು ಪ್ರೀತಿಸುತ್ತಿದ್ದು ಆತ ಉದ್ಯಮಿಯಾಗುದಕ್ಕಿಂತಲೂ ಮುನ್ನ ಕಾರ್ ವಾಶರ್ ಆಗಿ ಕೆಲಸ ಮಾಡುತ್ತಿದ್ದನೆಂಬುದು ತಿಳಿದ ನಂತರ ನಗುತ್ತಾಳೆ. ಆದರೆ ಮಾರ್ಕೋವ್ ತನ್ನನ್ನು ಓರ್ವ ಕಾರ್ ವಾಶರ್ ಎಂದರಿತು ತನ್ನ ವ್ಯಕ್ತಿತ್ವದ ಮೇಲೆ ನಕ್ಕಿದ್ದರಿಂದ ಕೊಂದಿದ್ದಾಗಿ ಹೇಳಿಕೊಂಡಿದ್ದಾನೆ.
ಡೇಟಿಂಗ್ ನ ನಂತರ ತನಗಿಷ್ಟವಾದ ಸ್ಥಳಕ್ಕೆ ಡ್ರೈವ್ ಮಾಡಿಕೊಂಡು ಹೋಗುವಂತೆ ಐರಿನಾ ಗೆ ತಿಳಿಸಿದ್ದನು. ಐರಿನಾ ಆತನನ್ನು ಎನಿಸೇಯ್ ನದಿ ತಟದ ಕರಸ್ನೊಯಾರಸ್ಕ್ ನ ಬಳಿಯ ಸೈಬಿರಿಯನ್ ಸಿಟಿಯ ಹತ್ತಿರದ ಹಳ್ಳಿಯಾದ ಉಸ್ತ್ ಮಾನಾ ಕ್ಕೆ ಕರೆದುಕೊಂಡು ಹೋಗಿದ್ದಳು. ಆದರೆ ಅಲ್ಲಿ ತೆರಳಿದ ಬಳಿಕ ಸರ್ಪೈಸ್ ಕೊಡುವುದಾಗಿ ಕಣ್ಮುಚ್ಚಿಕೊಳ್ಳುವಂತೆ ಐರಿನಾಗೆ ತಿಳಿಸಿದ. ಮಾರ್ಕೋವ್ ಆಕೆಯನ್ನು 88 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಐರಿನಾಳ ಮೃತ ದೇಹವು ಆಕೆಯ ಕಾರಿನಲ್ಲಿ ಪತ್ತೆಯಾಗಿತ್ತು.