ಇಸ್ತಾಂಬುಲ್ : ಧರ್ಮದ ಹೆಸರಿನಲ್ಲಿ ನಿರಪರಾಧಿಗಳನ್ನು ಗುಂಡು ಹಾರಿಸಿ ಕೊಲ್ಲುವುದು ಜಿಹಾದ್ ಅಲ್ಲ ಎಂದು ಅದು ಭಯೋತ್ಪಾದನೆಯೆಂದು ಟರ್ಕಿಯ ಅತಿದೊಡ್ಡ ಮಸೀದಿಯನ್ನು ಇಸ್ತಾಂಬುಲ್‍ನಲ್ಲಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಉದ್ಘಾಟಿಸಿ, ಆರಾಧನಾಲಯಗಳ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ಖಂಡಿಸುವುದಾಗಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಉರ್ದುಗಾನ್ ಹೇಳಿದರು.

ಏಕ ಕಾಲದಲ್ಲಿ 63000 ಮಂದಿಗೆ ನಮಾಝ್ ನಿರ್ವಹಿಸುವ ಅವಕಾಶ ಇದರಲ್ಲಿದೆ. ಶುಕ್ರವಾರ ಜುಮಾ ನಮಾಝ್‍ಗೆ ಅನುಕೂಲವಾಗುವಂತೆ ಮಸೀದಿಯನ್ನು ತರೆಯಲಾಗಿದೆ. ಕಾಂಲಿಕ್ ಮೋಸ್ಕ್ ಕಾಂಪ್ಲೆಕ್ಸ್ ಅಟೋಮನ್, ಸಲ್ಜುಕಿಯನ್ ವಾಸ್ತುಶಾಸ್ತ್ರದ ಉಪಯೋಗಿಸಿ ಮಸೀದಿ ನಿರ್ಮಾಣವಾಗಿದೆ. ಆರು ವರ್ಷದಲ್ಲಿ ನಿರ್ಮಾಣ ಕಾರ್ಯ ನಡೆಯಿತು. 1998ರಲ್ಲಿ ಟರ್ಕಿಯ ದಕ್ಷಿಣ ಪ್ರಾಂತದಲ್ಲಿ ನಿರ್ಮಾಣಗೊಂಡು ಆರಂಭವಾದ ಸಬಾನ್‍ಕಿ ಸೆಂಟ್ರಲ್ ಮಸದಿ ಈವರೆಗಿನ ಟರ್ಕಿಯ ಅತಿದೊಡ್ಡ ಮಸೀದಿ ಆಗಿತ್ತು. ಇಲ್ಲಿ 28500 ಮಂದಿ ನಮಾಝ್ ನಿರ್ವಹಿಸುವ ಸೌಕರ್ಯವಿದೆ.

 

Leave a Reply