ಮಂಗಳೂರು: ಕೆಕೆಎಂಎ (ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್) ಕರ್ನಾಟಕ ಶಾಖೆಯ ವತಿಯಿಂದ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ, ಕೆಕೆಎಂಎ ಸಂಘಟನೆಯ ಮೃತ ಸದಸ್ಯರೋರ್ವರ ಕುಟುಂಬಕ್ಕೆ ‘ಫ್ಯಾಮಿಲಿ ಬೆನೆಫಿಟ್ ಸ್ಕೀಮ್’ ಅಡಿಯಲ್ಲಿ ಸಹಾಯಹಸ್ತ ಸೇರಿದಂತೆ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ವಿವಿಧ ಸಂತ್ರಸ್ತರಿಗೆ ಚೆಕ್ ವಿತರಿಸಲಾಯಿತು.

ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಕೆಕೆಎಂಯಂತಹ ಸಂಘಟನೆ ಎಲ್ಲರಿಗೂ ಸ್ಪೂರ್ತಿಯಾಗಿದೆ.  ಕರಾವಳಿಯ ಬ್ಯಾರಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದು, ನಾಗರಿಕ ಸೇವೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶ ಸೇವೆ ಮಾಡಬೇಕು.  ಸಮುದಾಯದ ಮಕ್ಕಳಿಗೆ ಕೇವಲ ಶರೀಅತ್ ಶಿಕ್ಷಣ ಕೊಡಿಸಿದರೆ ಸಾಲದು, ಉನ್ನತ ವ್ಯಾಸಂಗಕ್ಕೆ ಪ್ರೇರೇಪಿಸಬೇಕು. ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಧನಸಹಾಯ ಮಾಡುವ ಮೂಲಕ ಸಮುದಾಯಕ್ಕೆ ಕೊಡುಗೆ ನೀಡಬೇಕು. ಬಡವರಿಗೆ ಸಹಾಯ ಮಾಡುವ ಮಹತ್ಕಾರ್ಯ ಹಮ್ಮಿಕೊಂಡಿರುವ ಕೆಕೆಎಂಎ ಸಂಘಟನೆ ಮಾದರಿಯಾಗಿದೆ ಎಂದು ಹೇಳಿದರು.

ಸ್ಕಾಲರ್ಶಿಪ್ ವಿತರಣೆ
ಸ್ಕಾಲರ್ ಶಿಪ್ ವಿತರಣೆ
ಸ್ಕಾಲರ್ ಶಿಪ್ ವಿತರಣೆ
ಸ್ಕಾಲರ್ ಶಿಪ್ ವಿತರಣೆ

ಕೆಕೆಎಂಎ ಕರ್ನಾಟಕ ಶಾಖೆಯ ಕುವೈತ್ ಅಧ್ಯಕ್ಷ ಎಸ್.ಎಂ.ಅಝರ್ ಮಾತನಾಡಿ, ಕೆಕೆಎಂಎ ಸಂಘಟನೆಯು ಕಡಿಮೆ ಸಮಯದಲ್ಲಿ 18 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಕೇರಳ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೊಂಕಣ್ ಭಾಗದವರು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕಿಡ್ನಿ ಡಯಾಲಿಸಿಸ್ ಚಿಕಿತ್ಸೆಗೆ ಕೇರಳದಲ್ಲಿ ಹೆಚ್ಚಿನ ಸದಸ್ಯರಿಗೆ ಸಹಾಯಹಸ್ತ ನೀಡಲಾಗಿದೆ. ಇದನ್ನು ಕರ್ನಾಟಕಕ್ಕೂ ವಿಸ್ತರಿಸಲಾಗುತ್ತಿದೆ ಎಂದರು.

ಸಂಘಟನೆಯ ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಸಹಾಯಹಸ್ತ ನೀಡುತ್ತಾ ಬರಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 140ಕ್ಕೂ ಹೆಚ್ಚು ಸದಸ್ಯರು ಅಗಲಿದ್ದಾರೆ. ಪ್ರತಿ ಕುಟುಂಬಕ್ಕೂ 8 ರಿಂದ 10 ಲಕ್ಷ ರೂ.ವರೆಗೆ ಸಹಾಯಹಸ್ತ ನೀಡಲಾಗಿದೆ. ಮನೆರಹಿತರನ್ನು ಗುರುತಿಸಿ ಮನೆ ನಿರ್ಮಿಸಿ ಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 11 ಫಲಾನುಭವಿಗಳಿಗೆ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಎಸೆಸೆಲ್ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಹಾಯಧನ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಿಡ್ನಿ ಡಯಾಲಿಸಿಸ್ ಚಿಕಿತ್ಸೆಗಾಗಿ ಫಲಾನುಭವಿಗಳಿಗೆ ಚೆಕ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಐಡಿಎಸ್ ಕಾಲೇಜಿನ ಚೇರ್‌ಮನ್ ಆರ್ಕಿಟೆಕ್ಟ್ ಮುಹಮ್ಮದ್ ನಿಸಾರ್, ಸೀ ಫುಡ್ ಬೈಯರ್ಸ್ ಅಸೋಸಿಯೇಶನ್‌ ಅಧ್ಯಕ್ಷ ಬಾಷಾ ಹಸನ್, ದಿ ಶೆಪರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿಯ ಮುಖ್ಯ ಆಡಳಿತಾಧಿಕಾರಿ ಹಸನ್ ಯೂಸುಫ್, ಎಚ್‌ಐಎಫ್ ಅಧ್ಯಕ್ಷ ಎ.ಕೆ. ಸಾಜಿದ್, ಕೆಕೆಎಂಎ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ.ಫಾರೂಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂಮಾನ್ ಇಬ್ರಾಹೀಂ ಕಿರಾಅತ್ ಪಠಿಸಿದರು. ಕೆಕೆಎಂಎ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ.ಫಾರೂಕ್ ಸ್ವಾಗತಿಸಿದರು. ಕೆಕೆಎಂ ಮಂಗಳೂರು ಉಪಾಧ್ಯಕ್ಷ ಎಸ್.ಎಂ.ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಶಾಫಿ ಧನ್ಯವಾದ ಅರ್ಪಿಸಿದರು.

Leave a Reply