Shubman Gill and KL Rahul @Twitter

ದಕ್ಷಿಣ ಆಫ್ರಿಕಾ ಜೊತೆಗಿನ ಟೆಸ್ಟ್‌ ಕ್ರಿಕೆಟ್ ಗಾಗಿ 15 ಸದಸ್ಯರ ಭಾರತೀಯ ತಂಡ ಘೋಷಿಸಿದ್ದು,ಕೆ.ಎಲ್ ರಾಹುಲ್ ಬದಲಿಗೆ ಶುಭಮನ್ ಗಿಲ್ ಸ್ಥಾನ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಜೊತೆಗಿನ ಟೆಸ್ಟ್ ಸರಣಿಗಾಗಿ 15 ಸದಸ್ಯರ ಭಾರತೀಯ ತಂಡವನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಇದರಲ್ಲಿ ಕೆ.ಎಲ್. ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನದಲ್ಲಿ 20 ವರ್ಷದ ಶುಬ್ಮನ್ ಗಿಲ್ ಅವರು ಸ್ಥಾನ ಗಳಿಸಿದ್ದಾರೆ.  ಶುಬ್ಮನ್ ಗಿಲ್ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 72.15 ಸರಾಸರಿಯಲ್ಲಿ 1,443 ರನ್ ಗಳಿಸಿದ್ದಾರೆ. ಅಕ್ಟೋಬರ್ 2 ರಿಂದ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.

LEAVE A REPLY

Please enter your comment!
Please enter your name here