ಕೊಚ್ಚಿ: ಕೇರಳದಲ್ಲಿ ಅಪರೂಪದಲ್ಲಿ ಕ್ರೈಸ್ತ ಸನ್ಯಾಸಿನಿಯರು ಪ್ರತಿಭಟನೆ ನಡೆಸಿದ್ದು ಲೈಂಗಿಕ ಆರೋಪಕ್ಕೆ ಗುರಿಯಾಗಿರುವ ಜಲಂಧರ್ ಬಿಷಪ್ ಫ್ರಾಂಕೊ ಮುಳUಲ್‍ರನ್ನು ಬಂಧಿಸಬೇಕೆಂದು ಆಗ್ರಹಿಸಿ ಕ್ರೈಸ್ತಭಗಿನಿಯರು ಬಹಿರಂಗ ಪ್ರತಿಭಟಿನೆ ನಡೆಸಿದರು. ಈಗ ಬಿಷಪ್ ವಿರುದ್ಧ ಪ್ರತಿಭಟಿಸುತ್ತಿರುವ ಕುರವಿಲಂಗಾಡ್ ಆಶ್ರಮದ ಕೈಸ್ತ ಸನ್ಯಾಸಿನಿಯರಿಗೆ ಜಾಯಿಂಟ್ ಕ್ರಿಶ್ಚಿಯನ್ ಕೌನ್ಸಿಲ್ ನೇತೃತ್ವ ನೀಡುತ್ತಿದೆ.

ಬಿಷಪ್ ವಿರುದ್ಧ ದೂರು ನೀಡಿದನಮ್ಮ ಸಹೋದರಿಗೆ ನ್ಯಾಯ ಲಭಿಸಲಿ ಎಂದು ಪ್ರತಿಭಟನಾನಿರತ ಕ್ರೈಸ್ತ ಸನ್ಯಾಸಿನಿಯರು ಮುಗಿಲೆತ್ತರ ಕೂಗುತ್ತಿದ್ದರು. ಬಿಷಪ್ ರಲ್ಲಿ ಹಣ ಇದೆ ಆದ್ದರಿಂದ ಅವರನ್ನು ಬಂಧಿಸಲಾಗಿಲ್ಲ ಎಂದು ಸನ್ಯಾಸಿನಿಯರು ಆರೊಪಿಸಿದರು. ಕ್ರೈಸ್ತ ಸಭೆಮತ್ತು ಪೊಲೀಸರು ನ್ಯಾಯ ಸಿಕ್ಕಿಲ್ಲವಾದ್ದರಿಂದ ಕೋರ್ಟಿನ ಮೊರೆ ಹೋಗುತ್ತೇವೆ ಎಂದು ಪ್ರತಿಭಟನಾ ನಿರತರು ಹೇಳಿದರು. ಪೊಲೀಸ್ ತನಿಖೆಯಲ್ಲಿ ವಿಶ್ವಾಸ ದುರ್ಬಲವಾಗಿದೆ. ಪೊಲೀಸರು ಬಿಷಪ್‍ರನ್ನು ವಿಚಾರಣೆ ಮಾಡಬಹುದು ಆದರೆ ಬಂಧಿಸಲಾರರು ಎಂದು ಕೈಸ್ತ ಸನ್ಯಾಸಿನಿಯರು ಹೇಳಿದರು.

ಜಲಂಧರ್‍ಗೆ ಹೋಗಿ ಬಿಷಪ್ ಫ್ರಾಂಕೊ ಮುಳಗಲ್‍ರನ್ನು ವಿಚಾರಣೆಗೆ ಗುರಿಪಡಿಸಿದರೂ ಅವರನ್ನು ಪೊಲೀಸರು ಬಂಧಿಸಿಲ್ಲ. ಸಾಕ್ಷ್ಯಗಳ ಕೊರತೆ ಬಿಷಪ್ ಬಂಧನಕ್ಕೆ ಅಡ್ಡಿಯಾಗಿದ್ದು ಪ್ರಕರಣದಲ್ಲಿ ಪೊಲೀಸರ ಮೇಲೆ ಭಾರೀ ಒತ್ತಡವಿದೆ ಎನ್ನಲಾಗುತ್ತಿದೆ.

Leave a Reply