ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆದ ಮೂರನೇ ಟಿ 20 ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಯ ಆರೋಪದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿಯವರಿಗೆ ಐಸಿಸಿ ಅಧಿಕೃತ ಎಚ್ಚರಿಕೆ ನೀಡಿದೆ. ಮಾತ್ರವಲ್ಲ ಕೊಹ್ಲಿಯವರು ಈ ಅನುಚಿತ ವರ್ತನೆಗೆ ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ.

ಐಸಿಸಿ ನೀತಿ ಸಂಹಿತೆಯ 2.12 ನೇ ವಿಧಿಯನ್ನು ಕೊಹ್ಲಿ ಉಲ್ಲಂಘಿಸಿರುವುದು ಕಂಡುಬಂದಿದೆ. ಕ್ರೀಡಾಪಟುಗಳು ಮತ್ತು ಅಂಪೈರ್, ಪಂದ್ಯದ ತೀರ್ಪುಗಾರ ಅಥವಾ ಯಾವುದೇ ವ್ಯಕ್ತಿಯೊಂದಿಗೆ (ಪ್ರೇಕ್ಷಕ ಸೇರಿದಂತೆ) ಅನುಚಿತ ದೈಹಿಕವಾಗಿ ತಾಗಿದರೆ ಅಥವಾ ಇತರ ದೈಹಿಕ ಸಂಘರ್ಷ ನಡೆಸಿದರೆ ಈ ವಿಧಿಯ ಪ್ರಕಾರ ದಂಡ ವಿಧಿಸಲಾಗುತ್ತದೆ.

ಇದು ಕೊಹ್ಲಿಯವರ ಮೂರನೇ ಡಿ ಮೆರಿಟ್ ಪಾಯಿಂಟ್ ಆಗಿದ್ದು, ಭಾರತದ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ರನ್ ತೆಗೆದುಕೊಳ್ಳುವಾಗ ಕೊಹ್ಲಿ ಬೌಲರ್ ಬ್ಯೂರನ್ ಹೆಂಡ್ರಿಕ್ಸ್ ರವರಿಗೆ ತಾಗಿದ್ದು, ತೀರ್ಪುಗಾರರಿಗೆ ಸರಿ ಕಾಣಿಸಲಿಲ್ಲ. ಕೊಹ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here