ಚಿಕ್ಕಮಗಳೂರು: ಕರ್ನಾಟಕ ಕೋಮು ಸೌಹರ್ದ ವೇದಿಕೆಯ ಹದಿನೈದನೆ ವರ್ಷಚಾರಣೆ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಮಾತನಾಡಿ, ಕುವೆಂಪು ಅವರ ಹುಟ್ಟಿದ ದಿನ ಈ ವೇದಿಕೆ ರೂಪುಗೊಂಡು, ಅವರ ಆಶಯದಂತೆ ಕೆಲಸ ಮಾಡಿದೆ. ಪುಲೆ, ಅಂಬೇಡ್ಕರ್ ಶೋಷಿತರ ಧ್ವನಿಯಾದರೋ, ಪೆರಿಯಾರ್ ತಮಿಳರ ಸ್ವಾಭಿಮಾನದ ಧ್ವನಿಯಾದಂತೆ ಕುವೆಂಪು ಕನ್ನಡಿಗರ ಸಾಮರಸ್ಯದ ಪ್ರತೀಕವಾದರು. ಸಾಮರಸ್ಯದ, ಸ್ನೇಹದ ಮಾರ್ಗದರ್ಶಕರಾದರು.
ನನ್ನ ಮನಸ ಗುರುವಲ್ಲೂ ಅವರು ಒಬ್ಬರು. ಅವರಿಂದ ಕನ್ನಡ ನೆಲದಲ್ಲಿ ಸಾಮರಸ್ಯ ಮೂಡಿಸಿದ ವ್ಯಕ್ತಿ. ಅವರ ಆಶಯಗಳಿಗೆ ವೇದಿಕೆ ಪೂರಕವಾದ ಕೆಲಸ ಮಾಡುತ್ತಿದೆ. ನಮ್ಮ ಕಾಲಘಟ್ಟದಲ್ಲಿ ಅನ್ಯಾಯದ ವಿರುದ್ದ ಹಿಂಸೆಯ ವಿರುದ್ದ ಹೋರಾಡಿದ ಗೌರಿಯಂತಹ ಮತ್ತೊಂದು ಮಹಿಳೆ ಸಿಗುದಿಲ್ಲ. ವಿಚಾರಧಾರೆಯನ್ನು, ತತ್ವವನ್ನು , ಸತ್ಯವನ್ನು ಕೊಲ್ಲಲಾಗುವುದಿಲ್ಲ. ಅದು ಮತ್ತೊಂದು ಕಡೆ ಮರು ಹುಟ್ಟು ಪಡೆಯುತ್ತದೆ. ಗೌರಿ ಮರು ಹುಟ್ಟು ಪಡೆದಿದ್ದಾರೆ. ಅವರ ಜನಮಾನಸದಲ್ಲಿ ಜೀವಂತವಾಗಿದ್ದಾರೆ. ಅವರು ಹೋರಾಟಗಾರರಿಗೆ ಸ್ಪೂರ್ತಿ. ಅಂತಹವರನ್ನು ನೆನೆಸುವುದು ತೃಪ್ತಿ ತಂದಿದೆ ಎಂದರು.
ಹಿಂದೆ ಭಾವೈಕ್ಯತೆ, ಅನ್ಯೋನತೆ ಇತ್ತು. ಆದರೆ ಪರಿಸ್ಥಿತಿ ಬದಲಾಗಿದೆ. ಸಾಮರಸ್ಯದ ತಾಣವಾಗಿದ್ದ ಬಾಬಾಬುಡಾನ್ ಕ್ಷೇತ್ರ ದ್ವೇಷದ ತಾಣವಾಗಿ ಬದಲಾದದ್ದು ವಿಷಾದನೀಯ. ಇಲ್ಲಿ ಸಾವಿರಾರು ವರ್ಷಗಳಿಂದ ಮತ ಧರ್ಮಗಳು ಭಾರತಕ್ಕೆ ಬಂದಿವೆ. ಸಹಸ್ರಾರು ವರ್ಷಗಳಿಂದ ನಾವು ಕೂಡಿ ಬಾಳುತ್ತಿದ್ದ ಸಂದರ್ಭ ಕೆಲವು ವರ್ಷಗಳಿಂದ ಚಿಮ್ಮಿಸುವಂತ ತಾಣವಾಗಿದೆ. ದತ್ತಾತ್ರೇಯರು ಅವೈದಿಕರು , ಕೆಳವರ್ಗಕ್ಕೆ ಸಂಬಂಧಿಸಿದ ಹಿಂದು ಸಂತರು ದತ್ತಾತ್ರೇಯರು ಯಾವುದೇ ಕಟ್ಟು ಪಾಡಿಗೆ ಒಳಗಾದವರಲ್ಲ. ಅವರು ಅನ್ಯಾಯ, ಹಿಂಸೆಗಳ ವಿರುದ್ದ ಜಾಗೃತಿ ಮೂಡಿಸಿದವರು. ಮನುಷ್ಯರ ಪರಿಶುದ್ದತೆಯನ್ನು ಸಂರಕ್ಷಿಸಿದವರು. ಸೂಫಿ ಸಂತರು ಎಲ್ಲರನ್ನು ಪ್ರೀತಿಸಬೇಕು ಎಂಬ ತತ್ವ ಸಾರಿದವರು. ಸೂಫಿ ತತ್ವಕ್ಕೂ, ದತ್ತಾತ್ರೇಯ ತತ್ವಕ್ಕೂ ಯಾವುದೇ ಸಂಬಂಧವಿಲ್ಲ. ಅದು ಮನುಷ್ಯ ಸಂಬಂಧ ವೃದ್ಧಿಸುತ್ತದೆ ಎಂದರು. ಖಡ್ಗದಿಂದ ಇಸ್ಲಾಮ್ ಬೆಳೆಯಿತು ಎಂಬುದು ಸುಳ್ಳು, ಸೂಫಿಗಳ ಪ್ರೇಮ ಸಂದೇಶದಿಂದ ಇಸ್ಲಾಂ ಹರಡಿದೆ. ನಮ್ಮ ಜನ ದತ್ತ ಮತ್ತು ಬಾಬರನ್ನು ಒಂದೆ ದೃಷ್ಟಿಯಲ್ಲಿ ನೋಡಿದವರು. ನಮ್ಮ ಜನ ಕೂಡಿ ಬಾಳುವುದರಲ್ಲಿ ನಂಬಿಕೆ ಇಟ್ಟವರು. ಹಿಂದು ಸಂತರನ್ನು ಮುಸ್ಲಿಂ ಸಂತರನ್ನು ಭಿನ್ನವಾಗಿ ನೋಡಿಲ್ಲ. ಅವರಿಬ್ಬರ ತತ್ವ ಒಂದೆಯಾಗಿತ್ತು. ಇಬ್ವರನ್ನು ಸ್ವೀಕರಿಸಿದ್ದಾರೆ. ಸೌಹರ್ದ ಕೇಂದ್ರಗಳು ಮನುಷ್ಯ ಜನಾಂಗಕ್ಕೆ ಸಂಬಂಧಿಸಿದ ಸ್ಥಳಗಳು, ಅದು ಯಾವುದೇ ಧರ್ಮದ ಸ್ವತ್ತಲ್ಲ. ಬಾಬರಿ ಮಸೀದಿ ಧ್ವಂಸವಾಗದಿದ್ದರೆ ಆತಂಕವಾದ ಇರುತ್ತಿರಲಿಲ್ಲ. ಕೋಮುವಾದಿಗಳು ಆತಂಕವಾದಕ್ಕೆ ಕಾರಣ.
ಇಲ್ಲಿ ಶಾಂತಿ ಇರಬಾರದು, ಎರಡನೇ ದರ್ಜೆಯ ಪ್ರಜೆಗಳಾಗಿ ಇರಬೇಕು ಎಂಬ ಕಲ್ಲನೆಯೊಂದಿಗೆ ಕೋಮುವಾದಿಗಳು ದಬ್ಬಾಳಿಕೆಯ ರಾಜಕೀಯ ಮಾಡುತ್ತಿದ್ದಾರೆ.
ಕೇಂದ್ರ ಸಚಿವರೊಬ್ಬರು ಸಂವಿಧಾನದ ವಿರುದ್ದ ಮಾತನಾಡಿರುವುದು, ಇದು ಈಗ ಮಾತ್ರ ಮಾತನಾಡಿದ್ದಲ್ಲ 12 ನೇ ಶತಮಾನದಲ್ಲೂ ಇಂತವರ ಸಂತತಿಗಳು ಮಾತನಾಡಿದ್ದರು ಬಸವಣ್ಣ ಕೊಟ್ಟ ಉತ್ತರವನ್ನು ಈಗಾಲೂ ಕೊಟ್ಟು ಸಾಕು ಎಂದರು
ಬಿಜೆಪಿ ಸೋಲಿಸಲು ಅನಂತ್ ವಕುಮಾರ್ ಹೆಗಡೆ, ಈಶ್ವರಪ್ಪವಿರುವಾಗ ಕಾಂಗ್ರೇಸ್ ಗೆ ಹೆಚ್ಚು ಶ್ರಮ ಪಡಬೇಕಿಲ್ಲವೆಂದು ವ್ಯಂಗವಾಡಿದರು.
ಅವರಿಗೆ ಸಂವಿಧಾನದ ತತ್ವದ ಮೇಲೆ ನಂಬಿಕೆಯಿಲ್ಲ. ನಮಗೆ ಯಾರು ಬೇಕು ಎಂಬ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸಾಮಾಜಿಕ ಮೌಲ್ಯದಲ್ಲಿ ನಂಬಿಕೆಯಿಲ್ಲದವರು ನಮಗೆ ಬೇಕಾ ಎಂದು ಜನರು ವಿವೇಚನೆಯಿಂದ ಪ್ರಶ್ನಿಸಿಕೊಂಡು, ನಿರ್ಧಾರ ತೆಗೆದುಕೊಳ್ಳಬೇಕೆಂದರು. ಜಾತಿ ಧರ್ಮದ ಹೆಸರಿನಲ್ಲಿ ವಿಭಜಿಸಿ ರಾಜಕಾರಣ ಮಾಡುವುದು ಅಪಾಯಕಾರಿ. ಉಗ್ರವಾದ ನೋಡಿ ಕೋಮುವಾದ ಬೆಳೆಯುತ್ತದೆ, ಕೋಮುವಾದ ನೋಡಿ ಉಗ್ರವಾದ ಬೆಳೆಯುತ್ತದೆ. ಇದನ್ನು ಸೋಲಿಸಬೇಕು. ಇದು ಪ್ರಜಾಪ್ರಭುತ್ವ ಕ್ಕೆ ಮಾರಕ.ಇಲ್ಲಿ ಎಲ್ಲ ಧರ್ಮದ ಜನ ಒಗ್ಗಟ್ಟಾಗಿ ಸಮಾಜ ಘಾತುಕ ಶಕ್ತಿಗಳನ್ನು ಸೋಲಿಸಬೇಕು. ಧರ್ಮಗಳಲ್ಲಿ ತಪ್ಪು ಮಾಡುವ ಜನರನ್ನು ದೂರ ಇಡುವ ಅನಿವಾರ್ಯತೆ ಇದೆ ಎಂದರು. ಹಿಂಸಾಕಾರಿಗಳಿಗೆ, ಸಮಜಾಘಾತುಕರಿಗೆ ಮೌಲ್ಯ ಸಿಗುತ್ತಿದೆ ಇದುವಾಪಯಕಾರಿ. ಹಿಂದುಗಳು ಹಿಂದುತ್ವವಾದಿಗಳಿಂದ ಕಲಿಯುವಂತಹದು ಏನಿಲ್ಲ. ಹಿಂದುಗಳು ಪ್ರೀತಿ ಪ್ರೇಮವನ್ನು ಸಾರುವ ಜನ. ಹಿಂದುತ್ವ ಎಂಬುವುದು ರಾಜಕೀಯ ಸಿದ್ದಾಂತ. ನಿಜವಾದ ಹಿಂದು ಧರ್ಮ ಬೇರೆ. ಇವರ ಧರ್ಮ ಬೇರೆ. ಇವರು ಪ್ರತಿಪಾದಿಸುವ ಧರ್ಮ ಗೋಡ್ಸೆಯ ಧರ್ಮ.ನಮಗೆ ಗಾಂಧೀಜಿಯ ಧರ್ಮ ಬೇಕು. ಮುಸ್ಲಿಂ ಸಮಾಜದಲ್ಲೂ ಬದುಕುವ ಧರ್ಮ ಬೇಕು. ಗೋಡ್ಸೆಯ ಹುತಾತ್ಮ ದಿನ ಆಚರಿಸುವ ಹಿಂದುತ್ವವಾದಿಗಳಿಂದ ಹಿಂದು ಧರ್ಮಕ್ಕೆ ಅಪಾಯಕಾರಿ ಎಂದಿದ್ದಾರೆ. ನಿವೃತ ಜಸ್ಟೀಸ್ ನಾಗಮೋಹನ್ ದಾಸ್ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅದನ್ನು ಜಾರಿಗೆ ತರುವ ಅಗತ್ಯ ವಿದೆ. ಕೋಮು ಸೌಹರ್ದ ವೇದಿಕೆ ರೂಪುಗೊಂಡ ನಂತರ ಈ ಸಾಮರಸ್ಯಕ್ಕೆ ಬಹಳಷ್ಟು ಕೊಡುಗೆ ನೀಡಿದೆ ಆ ಕಾರಣಕ್ಕಾಗಿ ಇದು ಅಭಿನಂದನೆಗೆ ಅರ್ಹ. ಅಂತಹ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆಹಾರ ಸಚಿವರಾದ ಯುಟಿ ಕಾದರ್ ಮಾತನಾಡಿ,ಸಮಾಜದಲ್ಲಿ ವಿಭಜನೆ ಮಾಡುವವರ ಕೋಮು ಸೌಹರ್ದ ವೇದಿಕೆ ಬಣ್ಣ ಬಯಲು ಮಾಡಿದೆ. ಸಮಾಜಕ್ಕೆ ಮತ್ತು ದೇಶಕ್ಕೆ ಸಾಮರಸ್ಯದ ಸಂದೇಶ ಸಾರಿದೆ ಎಂದು ಹೇಳಿದರು. ಸಮಾಜದಲ್ಲಿ ಕ್ರೂರತೆ ಮಾರ್ಗ ಹಿಡಿಯುವವರ ಹೆಚ್ಚಾಗಿದೆ. ಅಂತಹ ಸಂದರ್ಭದಲ್ಲಿ ಅದಕ್ಕೊಂದು ತಡೆಯೊಡ್ಡಿ ಸ್ನೇಹದ ವಾತವರಣ ನಿರ್ಮಿಸಬೇಕಿದೆ. ಡಾ.ಬಿಆರ್ ಅಂಬೇಡ್ಕರ್ ಕಾರಣ ಸ್ವಾತಂತ್ರ್ಯ ಸಿಕ್ಕಿದೆ. ಇವತ್ತು ಮಾತನಾಡುವವರಿಗೆ ಹಕ್ಕನ್ನು ನೀಡಿದ್ದು ಅಂಬೇಡ್ಕರ್ ಬರೆದ ಸಂವಿಧಾನ ಕೊಟ್ಟ ಅವಕಾಶದ ಕಾರಣಕ್ಕೆ ಎಂದರು. ಎಲ್ಲ ಧರ್ಮಗಳನ್ನು ಒಗ್ಗೂಡಿಸಿ ಮುಂದುವರಿಯಬೇಕು. ಇನ್ನೊಬ್ವರಿಗೆ ನೋವನ್ನುಂಟು ಮಾಡುವ ಕೆಲಸವಾಗಬಾರದೆಂದು ಹೇಳಿದರು. ಕಾರ್ಯಕ್ರಮದಲ್ಲಿ ಹಲವಾರು ಸಾಹಿತಿಗಳು, ಗಣ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ರಾಜವರತ್ನಮ್, ಜಿ ರಾಜ್ ಶೇಖರ್, ಫಣಿರಾಜ್, ಕೆ.ಎಲ್ ಅಶೊಕ್, ತ್ರಿಮೂರ್ತಿ, ಸುರೇಶ್ ಭಟ್ ಬಾಕ್ರಬೈಲ್, ಅಮ್ಜದ್ ಪಾಶ, ಸುಂದರ್ ಮಾಸ್ಟರ್, ಡಿಸಿ ಮಾನಯ್ಯ, ಅಲ್ಲಮ ಪ್ರಭು ಬೆಟ್ಟದೂರು, ಸಿಜಿ ಗಂಗಪ್ಪ, ದೂಗೂರು ಪರಮೇಶ್ವರ, ಕೃಷ್ಣ ಗೌಡ, ಬಲ್ಲೂರು ರವಿಕುಮಾರ್ ಉಪಸ್ಥಿತರಿದ್ದರು.

ಕೃಪೆ ಕೋಸ್ಟಲ್ ಮಿರರ್

Leave a Reply