ಈ ಬಾರಿಯ ಲೋಕ ಸಭೆ ಚುನಾವಣೆಯಲ್ಲಿ ಘಟಾನುಘಟಿಗಳು ಸೋತಿದ್ದಾರೆ. ಅವರಲ್ಲಿ  ಜ್ಯೋತಿರಾದಿತ್ಯ ಸಿಂಧಿಯಾ ಒಬ್ಬರು. ಇದೀಗ ಸೋತ ಅಭ್ಯರ್ಥಿಯೊಂದಿಗೆ ಗೆದ್ದ ಅಭ್ಯರ್ಥಿ ಸೆಲ್ಫಿ ತೆಗೆಯುವ ಹಳೆಯ ಫೋಟೋ ವೈರಲ್ ಆಗಿದೆ.
ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಬಿಜೆಪಿ ಅಭ್ಯರ್ಥಿ ಯಾದವ್ ಕೆಪಿ 1,25,549 ಮತಗಳಿಂದ ಸೋಲಿಸಿದ್ದಾರೆ.
ಯಾದವ್ ಅವರ ಛಾಯಾಚಿತ್ರವು ವೈರಲ್ ಆಗುತ್ತಿದ್ದು , ಇದರಲ್ಲಿ ಅವರು ಹಿಂದೊಮ್ಮೆ ಸಿಂಧಿಯಾ ಕಾರಿನಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದು ಕೊಳ್ಳುತ್ತಿದ್ದಾರೆ.
ಈ ಫೋಟೋವು ಯಾವಾಗದ್ದು ಸ್ಪಷ್ಟವಾಗಿಲ್ಲ. ಆದರೂ ಈ ಫೋಟೋ ತುಂಬಾ ವೈರಲ್ ಆಗಿದೆ.

 

Leave a Reply