ಕಷ್ಟಪಟ್ಟರೆ ಯಶಸ್ಸು ಖಂಡಿತ ಎನ್ನುವ ಮಾತು ಶತಪ್ರತಿಶತ ನಿಜ ಎಂಬುವುದಕ್ಕೆ ತಕ್ಕ ಸಾಕ್ಷಿ ಎಂಬಂತೆ ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದ ವಾಲ್ಮೀಕಿ ಕಾಲೋನಿಯ ನಿವಾಸಿ ಕುಸುಮ ಕಲಾ ವಿಭಾಗದಲ್ಲಿ 594 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡಿದಿದ್ದಾರೆ.

ಬಿಡುವಿನ ಸಮಯದಲ್ಲಿ ಬೈಕ್ ಪಂಕ್ಚರ್ ಹಾಕುತ್ತಿದ್ದ ಪಿಯುಸಿ ಕಲಾ ವಿಭಾಗದ ಕುಸುಮ ಮೊದಲ ರ್ಯಾಂಕ್ ಪಡೆದು ಸಾಧನೆ ಮಾಡಿದ್ದು, ಬಡ ಕುಟುಂಬದಿಂದ ಬಂದ ಕುಸುಮನ ಆಸೆ ಇಂದು ಪೂರ್ಣವಾಗಿದೆ.

ಇನ್ನು ತಳಸಮುದಾಯದ ತಂದ ದೇವೇಂದ್ರಪ್ಪ ಕಾಯಕವೇ ಕೈಲಾಸವೆಂದು ನಂಬಿ, ಪಂಕ್ಚರ್ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಪಂಕ್ಚರ್ ಅಂಗಡಿ ಮೂಲಕವೇ ತಮ್ಮ ಐವರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ದೇವೇಂದ್ರಪ್ಪ ಅವರ ಕೊನೆಯ ಮಗಳು ಕುಸುಮ. ತಂದೆಯಂತೆ ಪಂಕ್ಚರ್ ಹಾಕುವುದಲ್ಲಿಯೂ ಕುಸಮ ಎಕ್ಸ್ ಪರ್ಟ್. ರಜೆ ದಿನಗಳು ಹಾಗೂ ಖಾಲಿಯಿದ್ದಾಗ ಬೈಕ್, ಸೈಕಲ್ ಪಂಕ್ಚರ್ ಹಾಕಿ ಮನೆಗೆ ಮಗನಾಗಿ ಸಹಕಾರಿಯಾಗಿದ್ದಾಳೆ.

ಬಡ ಕುಟುಂಬವಾದರೂ ಮಕ್ಕಳ ಓದಿನ ವಿಷಯದಲ್ಲಿ ಕುಸುಮಾ ಮನೆಯವರು ನಿರಂತರ ಪ್ರೋತ್ಸಾಹ ನೀಡುತ್ತಿದ್ದರು. ಆಕೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.92 ರಷ್ಟು ಅಂಕ ಪಡೆದಿದ್ದರು. ಓದಿಗಂತಲೇ ಸಮಯ ನಿಗದಿಮಾಡಿಕೊಂಡಿರಲಿಲ್ಲ.

ಸಮಯ ಸಿಕ್ಕಾಗಲೆಲ್ಲ ಓದಿದ್ದೆ. ಕಾಲೇಜಿನಲ್ಲಿ ಪೂರ್ವಪರೀಕ್ಷೆ ತೆಗೆದುಕೊಂಡಿದ್ದರು. ಅನುಮಾನಗಳಿದ್ದರೆ, ತರಗತಿ ಅವಧಿಯಲ್ಲೇ ಇತ್ಯರ್ಥಮಾಡಿಕೊಳ್ಳುತ್ತಿದ್ದೆ. ಕಾಲೇಜು ಮತ್ತು ಮನೆ ಎರಡು ಕಡೆಯಲ್ಲೂ ಪ್ರೋತ್ಸಾಹ ಸಿಕ್ಕಿದ್ದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎನ್ನುತ್ತಾರೆ ಕುಸುಮಾ.

Leave a Reply