Representational Image

ಚೆನ್ನೈ: ಎಂಜಿನಿಯರಿಂಗ್ ಪದವಿಗಳು ತನ್ನ ವರ್ಚಸ್ಸನ್ನ ಕಳೆದು ಕೊಳ್ಳುತ್ತಿದೆ ಎಂಬುದಕ್ಕೆ ದೇಶದಲ್ಲಿ ತಲೆದೋರಿರುವ ನಿರುದ್ಯೋಗ ಪರಿಸ್ಥಿತಿ ಕಾರಣವಾಗಿದೆ. ಕೊಯಮತ್ತೂರಿನ ತಮಿಳುನಾಡು ಅರಣ್ಯ ಇಲಾಖೆಗೆ ಹೊಸದಾಗಿ ನೇಮಕಗೊಂಡ 597 ಅರಣ್ಯ ಕಾವಲುಗಾರರ ಪೈಕಿ 40 ಶೇಕಡಾ ಎಂಜಿನಿಯರ್‌ಗಳು, ಅವರಲ್ಲಿ 227 ಬಿಇಗಳು ಮತ್ತು 30 ಎಂಇಗಳು. ಅರಣ್ಯ ಕಾವಲುಗಾರರಿಗೆ ಕನಿಷ್ಠ ಅರ್ಹತೆ ಪ್ಲಸ್-ಟು 21-30 ವಯಸ್ಸಿನ ಮಿತಿ. ಅರಣ್ಯ ಕಾವಲುಗಾರರು ಕಾಲು ಸೈನಿಕರಾಗಿದ್ದು, ರಕ್ಷಣೆಯ ಅವಿಭಾಜ್ಯ ಅಂಗವಾಗಿದ್ದಾರೆ.

ಎಂಜಿನಿಯರ್‌ಗಳಲ್ಲದೆ, ವಿಜ್ಞಾನ ಹಿನ್ನೆಲೆ ಹೊಂದಿರುವರೂ ಇದ್ದಾರೆ. ಸುಮಾರು 150 ಹೊಸಬರು ಬಿಎಸ್ಸಿ ಮತ್ತು ಎಂಎಸ್ಸಿ ಹೊಂದಿದ್ದಾರೆ. ಎಂಬಿಎ, ಎಂಫಿಲ್, ಬಿ.ಫಾರ್ಮ್ ಮತ್ತು ಬಿಕಾಂ ಪದವಿ ಪಡೆದವರೂ ಸೇರಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಅವರಲ್ಲಿ 190 ಮಹಿಳೆಯರು. ಇಲಾಖೆಯು ಇದೇ ಮೊದಲ ಬಾರಿಗೆ ಮಹಿಳಾ ಕಾವಲುಗಾರರನ್ನು ನೇಮಕ ಮಾಡಿದೆ.

ಟಿಎನ್‌ಎಫ್‌ಯುಎಸ್‌ಆರ್‌ಸಿ ಅರ್ಜಿ ಆಹ್ವಾನಿಸಿದಾಗ ಸುಮಾರು 3.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 1.5 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸೂಕ್ತ ಅವಕಾಶಗಳ ಕೊರತೆ ಮತ್ತು ಉದ್ಯೋಗ ಭದ್ರತೆ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ ಎಂದು ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.

Leave a Reply