ಸಿಡ್ನಿ: ಮಗುವನ್ನು ಪೋಷಿಸುತ್ತಲೇ ಕ್ರಿಕೆಟ್ ಆಡಬಹುದು. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೆ ಇಂಥ ಉಡುಗೊರೆ ನೀಡಿ ಇತಿಹಾಸ ಬರೆದಿದೆ.. ವೇತನ ಸಹಿತ ರಜೆ, ಗುತ್ತಿಗೆಯ ಖಾತ್ರಿ ಜೊತೆಗೆ ಪುಟ್ಟ ಮಗುವಿದ್ದರೆ ಪ್ರವಾಸ ಸೌಲಭ್ಯವೂ ಈಗ ಮಹಿಳಾ ಕ್ರಿಕೆಟಿಗರಿಗೆ ದೊರೆಯಲಿರುವುದು ಎಂಬ ಸುದ್ದಿ ಕ್ರೀಡಾಳುಗಳಲ್ಲಿ ಸಂತಸ ಉಂಟು ಮಾಡಿದೆ. ಯಾವ ಆಟಗಾರ್ತಿ ಮಗುವಿಗೆ ಜನ್ಮ ನೀಡುತ್ತಾಳೋ ಅವಳಿಗೆ 12, ತಿಂಗಳ ವೇತನ ಸಹಿತ ರಜೆ ಸಿಗಲಿದೆ. ಮರುಋತುವಿನಲ್ಲಿ ಗುತ್ತಿಗೆ ವಿಸ್ತರಣೆಯೂ ಇದರಲ್ಲಿ ಸೇರಿದೆ. ಅಂದರೆ ರಜೆ ಮುಗಿದ ನಂತರ ಅವರು ಮತ್ತೆ ಕ್ರಿಕೆಟ್ ಆಡಬಹುದು ಎಂದು ಎಪಿಎಫ್ ವರದಿ ಮಾಡಿದೆ.

ಈ ವಿಷಯ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಕಳೆದ ಮೂರು ವರ್ಷಗಳಿಂದ ಆಟಗಾರ್ತಿಯರು ಮತ್ತು ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಜೊತೆಗೆ ಚರ್ಚೆ ನಡೆಸಿತ್ತು. ಮದುವೆಯಾಗಿ ಮಗು ಪಡೆಯುವ ಯಾವುದೇ ಆಟಗಾರ್ತಿಗೆ ಎಲ್ಲ ಸೌಲಭ್ಯ ನೀಡುವುದು ಒಳ್ಳೆಯದು. ಯಾಕೆಂದರೆ ಅವರಿಗೆ ಮನಶ್ಯಾಂತಿ ಮುಖ್ಯ ಎಂದು ಪ್ರಕಟಣೆ ತಿಳಿಸಿದೆ. ಈ ನೀತಿ ಮಹಿಳಾ ಕ್ರಿಕೆಟಿಗರಿಗೆ ಅಂತಿದ್ದರೂ, ಮಗು
ಜನಿಸಿದಾಗ ಪುರುಷ ಕ್ರಿಕೆಟರಿಗೂ ಕೂಡ ಮೂರು ವಾರಗಳ ಪಾಲಕರ ವೇತನ ಸಹಿತ ರಜೆ ಸಿಗಲಿದೆ. 2017 ರಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸದಸ್ಯರ ವೇತನವನ್ನು ಭಾರೀ ಏರಿಕೆ ಮಾಡಲಾಗಿತ್ತು. ಮಹಿಳಾ ತಂಡವು 18 ನೇ ಸತತ ಏಕದಿನ ಪಂದ್ಯ ಗೆದ್ದು ದಾಖಲೆ ಬರೆದಿದೆ.

LEAVE A REPLY

Please enter your comment!
Please enter your name here