ನವದೆಹಲಿ: ತನ್ನ ಲಕ್ಷಾಂತ ರೂಪಾಯಿ ಬೆಲೆಬಾಳುವ ಕಾರಿಗೆ ಸೆಗಣಿ ಮೆಟ್ಟಿದ್ದು , ಇದೀಗ ಈ ಕಾರಿನ ವಿಷಯ ಎಲ್ಲೆಡೆ ಚರ್ಚೆ ಯಾಗುತ್ತಿದೆ. ಕಾರಿಗೆ ಸ್ವಲ್ಪ ಸ್ಕ್ರಾಚ್ ಅಥವಾ ಪೈಂಟ್ ಹೋದರೆ ಅಥವಾ ಧೂಳಾದರೆ ತಲೆ ಬಿಸಿ ಮಾಡುವ ಕಾಲದಲ್ಲಿ ಗುಜರಾತಿನ ಮಹಿಳೆಯೊಬ್ಬರು ತನ್ನ ಕಾರನ್ನು ಕೂಲಾಗಿಸಲು ಸೆಗಣಿಯನ್ನು ಕಾರಿಗೆ ಕೋಟಿಂಗ್ ಮಾಡಿದ್ದಾರೆ.

ಕಾರಿನ ಚಕ್ರ ಹೊರತು ಪಡಿಸಿ ಕಾರು ಸಂಪೂರ್ಣ ಸೆಗಣಿಯಿಂದ ಆವೃತ್ತವಾಗಿರುವುದನ್ನು ಕಾಣಬಹುದು.
ಟೊಯೊಟಾ ಕೊರೋಲಾ ಅಲ್ಟೀಸ್ ಕಾರಿಗೆ ಸೆಗಣಿ ಮೆತ್ತಲಾಗಿದ್ದು, ಬಿಳಿ ಬಣ್ಣದ ಕೊರೊಲಾ ಅಲ್ಟೀಸ್ ಕಾರು ಕಂದು ಬಣ್ಣವಾಗಿದೆ.

  • ಯಾಕೆ ಹೀಗೆ ಸೆಗಣಿ ಮೆಟ್ಟಲಾಗಿದೆ ಎಂಬ ಕುತೂಹಲ

ಹೌದು ಈ ಬಾರಿ ಮಳೆ ಬರದೇ ಜನರು ಬಿಸಿಲಿನಿಂದ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಉತ್ತರ ಭಾರತದಲ್ಲಿ ಉರಿ ಬಿಸಿಲಿನ ತಾಪ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಹಿಂದೆ ಹಳ್ಳಿಯಲ್ಲಿ ಬಿಸಿಲಿನ ತಾಪ ತಡೆಯಲು ಮನೆಯಲ್ಲಿ ಸೆಗಣಿ ಬಳಸುತ್ತಿದ್ದರು. ಇಲ್ಲೂ ಅದೇ ಉದ್ದೇಶದಿಂದ ತಮ್ಮ ಕಾರಿಗೆ ಬಣ್ಣ ಬಳಿಯಲಾಗಿದೆ. ಸುಮಾರು ಐದರಿಂದ ಆರು ಲೇಯರ್ ಸೆಗಣಿ ಬಳಿಯಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಮಂಗಳೂರಿನ ಪುತ್ತೂರಿನ ವ್ಯಕ್ತಿಯೊಬ್ಬರು ಮನೆಗೆ ಸೆಗಣಿಯ ಪೇಂಟ್ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು. ಸಿದ್ದ ವೈದ್ಯ ಡಾ. ಶಶಿಶೇಖರ ಭಟ್ ತಮ್ಮ ಮನೆಯ ಗೋಡೆಗೆ ಸೆಗಣಿ ಪೇಂಟ್ ಮಾಡಿದ್ದು ವೈರಲಾಗಿತ್ತು. ಮಾತ್ರವಲ್ಲ, ಅವರು ಗೋ ರಂಗ್ (ಗೋ ಬಣ್ಣ ) ಎಂಬ ಹೊಸ ಯೋಜನೆಯನ್ನೂ ಪ್ರಾರಂಭಿಸಿದ್ದಾರೆ. ಅವರು ನಾಟಿ ಹಸುವಿನ ಸೆಗಣಿಯನ್ನು ಬಳಸಿ ಬಣ್ಣ ತಯಾರಿಸಿದ್ದು, ಅದನ್ನು ಪ್ರಾಯೋಗಿಕವಾಗಿ ತಮ್ಮ ಮನೆಗೆ ಬಳಿದಿದ್ದಾರೆ.

Leave a Reply