ಜೂನ್ 2, 1989ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ರೈತನ ಮಗಳಾಗಿ ಜನಿಸಿದ ಲಲಿತಾ ಬಾಬರ್ ಅವರು ಭಾರತದ ಲಾಂಗ್ ಡಿಸ್ಟೆನ್ಸ್ ಓಟಗಾರ್ತಿ. 3000 ಮೀಟರ್ ಸ್ಟೀಪಲ್ ಚೇಸ್ ಓಟದಲ್ಲಿ ಹೆಚ್ಚು ಭಾಗವಹಿಸುವ ಇವರು ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಇವರು ಇದೇ ಸ್ಪರ್ಧೆಯಲ್ಲಿ ಏಷ್ಯನ್ ಚಾಂಪಿಯನ್ ಕೂಡ ಹೌದು.’ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಮತ್ತು ಭಾರತೀಯ ಯುವಜನ ,ಕ್ರೀಡಾ ಇಲಾಖೆಯವರು ನೀಡಿದ ಭಾರತೀಯ ಕ್ರೀಡಾ ಪ್ರಶಸ್ತಿಗಳಲ್ಲಿ 2015ರ ಸಾಲಿನ ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಇವರು ಪಡೆದಿದ್ದಾರೆ.

ಬಾಬರ್ ಅವರು ತಮ್ಮ ಎಳೆ ವಯಸ್ಸಿನಲ್ಲಿಯೇ ಓಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪುಣೆಯಲ್ಲಿ ನಡೆದ ಇಪ್ಪತ್ತು ವರ್ಷದೊಳಗಿನವರ ಓಟದ ಸ್ಪರ್ಧೆಯಲ್ಲಿ ಗೆದ್ದ ಚಿನ್ನದ ಪದಕ ಇವರ ಮೊದಲ ಪದಕ. 2014ರಲ್ಲಿ ಸತತ ಮೂರನೇ ಬಾರಿಗೆ ಮುಂಬಯಿ ಮ್ಯಾರಥಾನನ್ನು ಗೆದ್ದ ಏಷಿಯನ್ ಕ್ರೀಡಾಕೂಟ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲೂ ದೇ ಶವನ್ನು ಪ್ರತಿನಿಧಿಸಿದ್ದಾರೆ. ಮ್ಯಾರಥಾನಿನಲ್ಲಿನ ಜಯದ ನಂತರ 3000 ಮೀಟರ್ ಓಟದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡ ಅವರು 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಏಷಿಯನ್ ಕ್ರೀಡಾಕೈಟದಲ್ಲಿ 9:35:36 ರ ಸಮಯದಲ್ಲಿ ಓಟವನ್ನು ಪೂರ್ಣಗೊಳಿಸಿ ಕಂಚಿನ ಪದಕ ಗೆದ್ದರು. ಈ ಪ್ರಯತ್ನದಲ್ಲಿ ಸುಧಾ ಸಿಂಗ್ [3] ಅವರ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಆದರೆ ಆ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದ ಬಹ್ರೇನಿನ ರೂಥ್ ಜೆಬೆಟ್ ಅವರು ಸ್ಪರ್ಧೆಯಿಂದ ಅನರ್ಹರಾದ ಕಾರಣ ಲಲಿತಾ ಬಾಬರ್ ಅವರಿಗೆ ಬೆಳ್ಳಿಯ ಪದಕ ದೊರಕುವಂತಾಯಿತು.

AFP

2015 ರ ಏಷಿಯನ್ ಚಾಂಪಿಯನ್ ಶಿಪ್ನಲ್ಲಿ 9:34:13 ರ ವೈಯುಕ್ತಿಕ ಸಾಧನೆಯೊಂದಿಗೆ ಚಿನ್ನದ ಪದಕ ಪಡೆಯುವುದರೊಂದಿಗೆ ಹೊಸ ಭಾರತೀಯ ದಾಖಲೆಯನ್ನೂ ಸ್ಥಾಪಿಸಿದರು. ಈ ಸಾಧನೆಯೊಂದಿಗೆ ಅವರು 2016ರ ಒಲಿಂಪಿಕ್ಸಿಗೆ ಅರ್ಹತೆಯನ್ನು ಗಳಿಸಿದರು. 2015ರ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ ತಮ್ಮ ಸಾಧನೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡ ಅವರು 9:27:86 ರ ರಾಷ್ಟ್ರೀಯ ದಾಖಲೆಯೊಂದಿಗೆ ಒಲಂಪಿಕ್ಸಿನ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮೊದಲ ಭಾರತೀಯ ಮಹಿಳೆಯಾದರು

ಏಪ್ರಿಲ್ 2016ರಲ್ಲಿ ದೆಹಲಿಯಲ್ಲಿ ನಡೆದ ಫೆಡರೇಷನ್ ಕಪ್ಪಿನಲ್ಲಿ 9:27:09 ರ ಸಮಯದೊಂದಿಗೆ ತಮ್ಮ ರಾಷ್ಟ್ರೀಯ ದಾಖಲೆಯನ್ನು ಇನ್ನೂ ಉತ್ತಮಪಡಿಸಿಕೊಂಡರು. ರಿಯೋ ಒಲಂಪಿಕ್ಸಿನಲ್ಲಿ 9:19:76ರ ವೈಯುಕ್ತಿಕ ಉತ್ತಮ ಪ್ರದರ್ಶನದೊಂದಿಗೆ ಫೈನಲ್ಲಿಗೆ ತಲುಪಿದರು. ಕಳೆದ 32 ಒಲಂಪಿಕ್ಸುಗಳಲ್ಲಿ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಫೈನಲ್ಲಿಗೆ ತಲುಪಿದ ಮೊದಲ ಭಾರತೀಯ ಸ್ಪರ್ಧಿಯಾದ ಇವರು 9:22:74 ರ ಸಮಯದೊಂದಿಗೆ 10ನೇ ಸ್ಥಾನಿಯಾಗಿ ತಮ್ಮ ಮೊದಲ ಒಲಿಂಪಿಕ್ ಪದಕದ ಕನಸಿಂದ ವಂಚಿತರಾದರು.

ವರ್ಷದ ಕ್ರೀಡಾಪಟು-2015. ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಮತ್ತು ಭಾರತೀಯ ಯುವಜನ ,ಕ್ರೀಡಾ ಇಲಾಖೆಯವರು ನೀಡಿದ ಭಾರತೀಯ ಕ್ರೀಡಾ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. (Wikipedia)

LEAVE A REPLY

Please enter your comment!
Please enter your name here