ಚೀನಾದ ಈ ವಿಡಿಯೋ ತುಂಬಾ ವೈರಲ್ ಆಗಿದೆ. ಯಾಕೆಂದರೆ ಅಂಬೆಗಾಲಿಡುವ ಮಗು ಬಾಟಲಿಯನ್ನು ಕಾರು ಚಾಲಕನಿಗೆ ಹಿಂತಿರುಗಿಸುವ ವಿಡಿಯೋ ಇದು. ಈ ಮಗುವನ್ನು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಕೊಂಡಾಡಲಾಗಿದೆ. ಈ ಮಕ್ಕಳಿಂದ ದೊಡ್ಡವರಿಗೆ ತುಂಬಾ ಕಲಿಯಲಿಕ್ಕಿದೆ ಎಂದು ಕೆಲವರು ಹೇಳಿದ್ದಾರೆ. ಕೆಲವರಿಗೆ ಎಲ್ಲೆಂದರಲ್ಲಿ ಕಸ ಹಾಕುವ ಅಭ್ಯಾಸ ಇದೆ. ಕಾರಿನಲ್ಲಿ ತಂಪು ಪಾನೀಯ ಸೇವಿಸಿ ಪ್ಲಾಸ್ಟಿಕ್ ಬಾಟಲಿಯನ್ನು ಹೊರಗೆ ಬಿಸಾಡುತ್ತಾರೆ. ಹೀಗೆ ಕಾರು ಚಾಲಕನೊಬ್ಬ ಹೊರಗೆ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಯನ್ನು ಎತ್ತಿದ ಒಂದು ವರ್ಷದ ಮಗು ಪುನಃ ಕಾರು ಚಾಲಕನ ಕೈಗೆ ಕೊಡುತ್ತದೆ. ಮಗು ಈಗಷ್ಟೇ ನಡೆಯಲು ಕಲಿಯುತ್ತಿದೆ. ಇದು ಆಕಸ್ಮಿಕವಾಗಿ ಚಿತ್ರೀಕರಿಸಲಾಗಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ. ಈ ಮಗುವಿನ ಹೆಸರು ಸನ್ ಜಿಯಾರುಯಿ, ಪೂರ್ವ ಚೀನಾದ ಶಾಂಡೊಂಗ್ ಪ್ರಾಂತ್ಯದ ಜಿನಿಂಗ್ ನಗರದಲ್ಲಿ ಮಗುವಿನ ಕುಟುಂಬ ವಾಸವಿದೆ.

LEAVE A REPLY

Please enter your comment!
Please enter your name here