ಕೋಝಿಕೋಡ್ : ಇತ್ತೀಚಿಗೆ ಪ್ರಳಯ ಭಾದಿತ ರಾಜ್ಯ ಕೇರಳದ ಕೋಝಿಕೋಡ್ ನಲ್ಲಿ ಇಲಿ ಜ್ವರ ವ್ಯಾಪಕವಾಗುತ್ತಿದ್ದು, ಜಿಲ್ಲೆಯಲ್ಲಿ ಎಚ್ಚರಿಕೆಯ ಸೂಚನೆಯನ್ನು ನೀಡಲಾಗಿದೆ.
ಆಗಸ್ಟ್ ೮ ರ ಬಳಿಕ ೫ ಮಂದಿ ಈ ಜ್ವರಕ್ಕೆ ಬಲಿಯಾಗಿದ್ದು, ಮೂವತ್ತು ಮಂದಿ ಜ್ವರ ಪೀಡಿತರಾಗಿದ್ದಾರೆ ಎಂದು ದೃಢೀಕರಿಸಲಾಗಿದೆ. 24 ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ಕಂಟ್ರೋಲ್ ರೂಮ್ ಈ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. ಈ ಜ್ವರ ಹರಡದಿರಲೆಂದು ಪಂಚಾಯತ್ ಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ.

ಇಲಿ ಜ್ವರ ರೋಗ ಲಕ್ಷಣಗಳಿದ್ದ 76ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಇದರ ಆಧಾರದ ಮೇಲೆ ಎಚ್ಚರಿಕೆಯ ಸೂಚನೆ ನೀಡಲಾಗಿದ್ದು, ಮಧ್ಯಾಹ್ನ 9 ರಿಂದ 12 ಘಂಟೆಯವರೆಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಇಲಿಜ್ವರ ಔಷಧಿ ವಿತರಿಸಲಾಗುತ್ತದೆ ಎಂದು ಹೇಳಲಾಗಿದೆ.

ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಡಾಕ್ಟರ್ ಆಗಿ ನಿಯೋಜಿಸಲಾಗಿದ್ದು, ರೋಗಿಗಳ ಶುಶ್ರೂಷೆಗಾಗಿ ೧೬ ನರ್ಸ್ ಗಳನ್ನೂ ನೇಮಿಸಲಾಗಿದೆ. ಮಾತ್ರವಲ್ಲ ೮೨ ಹೆಲ್ತ್ ಇನ್ಸ್ಪೆಕ್ಟರ್ ಗಳನ್ನೂ ಜಿಲ್ಲೆಯಲ್ಲಿ ನೇಮಿಸಲಾಗಿದೆ.

Leave a Reply