ಇದು ನಮ್ಮ ಊರು: ಬದುಕು ಅಂದ್ರೆ ಹಾಗೆ ಕೆಲವೊಂದು ಘಟನೆಗಳು ನಮಮ್ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಗಿರುತ್ತದೆ. ಈ ಬಾಲಕಿಯ ಜೀವನದಲ್ಲೂ ಹಾಗೆ ಆಗಿದೆ. ಪುಸ್ತಕ ಪ್ರಿಯಳಾಗಿದ್ದ ಯಶೋಧಾಗೆ ಗ್ರಂಥಾಲಯದಲ್ಲಿ ಪುಸ್ತಕ ಓದುವ ಹವ್ಯಾಸವಿತ್ತು. ಹೀಗೆ ಗ್ರಂಥಾಲಯದಿಂದ ಪುಸ್ತಕ ತರುವುದು ಓದುವುದು ಅದನ್ನು ಹಿಂದಿರುಗಿಸುವುದು ಮಾಡುತ್ತಿದ್ದಳು. ಒಮ್ಮೆ ಪುಸ್ತಕವನ್ನು ತಡವಾಗಿ ಹಿಂದಿರುಗಿಸಿದ್ದಕ್ಕಾಗಿ ಗ್ರಂಥಾಲಯದವರು ದಂಡ ಪಾವತಿಸುವಂತೆ ಸೂಚಿಸಿದಾಗ ಯಶೋದಾಗೆ ತೀವ್ರ ದುಃಖವಾಯಿತು. ತಾನು ಓದಲು ಬಯಸುವ ಪುಸ್ತಕಕ್ಕೆ ದಂಡವನ್ನು ಏಕೆ ಪಾವತಿಸಬೇಕೆಂದು ಅವಳಿಗೆ ಅರ್ಥವಾಗಲಿಲ್ಲ. ತನ್ನ ಮಗಳು ಈ ಘಟನೆಯಿಂದ ತೀವ್ರಾವಾಗಲಿ ನೊಂದಿದ್ದಾಳೆ ಎಂದು ಯಶೋಧಾಳ ತಂದೆ ಫೇಸ್ಬುಕ್ ನಲ್ಲಿ ಬರೆದಿದ್ದರು. ಈ ಪೋಸ್ಟ್ ಓದಿದ ಜನರು ಯಶೋಧಾಳ ಬಗ್ಗೆ ತೀವ್ರ ಕಾಳಜಿ ವಿಳಾಸ ಕೇಳಿ ವಹಿಸಿ ಅವಳಿಗೆ ಪ್ರಿಯವಾದ ಪುಸ್ತಕವನ್ನು ತಾವು ಆಕೆಗೆ ಉಡುಗೊರೆಯಾಗಿ ನೀಡುವುದಾಗಿ ಹೇಳಿದರು.

ಹೀಗೆ ಅನೇಕ ಜನರು ಪುಸ್ತಕ ಕಳುಹಿಸಿ ಕೊಟ್ಟಿದ್ದರು. ಗಿಫ್ಟ್ ರೂಪದಲ್ಲಿ ಪುಸ್ತಕಗಳ ರಾಶಿಯನ್ನು ಪಡೆದಾಗ ಮನೆಯಲ್ಲಿ ತನ್ನದೇ ಆದ ಗ್ರಂಥಾಲಯವನ್ನು ಪ್ರಾರಂಭಿಸುವ ಬಗ್ಗೆ ಯಶೋಧಾ ಯೋಚಿಸಿದಳು. ಆಕೆಯ ಪೋಷಕರು ತಮ್ಮ ಮನೆಯ ಮೇಲಿನ ಮಹಡಿಯನ್ನು ಇದಕ್ಕಾಗಿ ಮೀಸಲಿಡಲು ಅನುಮತಿಸಿದ ನಂತರ ಅವಳು ಗ್ರಂಥಾಲಯವನ್ನು ಸ್ಥಾಪಿಸಿದಳು. ‘ಯಶೋದಾ ಗ್ರಂಥಾಲಯ’ ಪ್ರಸ್ತುತ 6000 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವನ್ನು ಹೊಂದಿದೆ ಮತ್ತು ಇದು ನೂರಾರು ಪುಸ್ತಕ ಪ್ರಿಯರಿಗೆ ಪ್ರಿಯವಾದ ಪ್ರಮುಖ ಸ್ಥಳವಾಗಿದೆ.

ಮಟ್ಟಂಚೇರಿಯ ಟಿಡಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿರುವ ಯಶೋಧಾಗೆ ಇದೀಗ ಹದಿಮೂರು ವಯಸ್ಸು. ಗ್ರಂಥಾಲಯದ ಸದಸ್ಯತ್ವ ಉಚಿತವಾಗಿದ್ದು, ಪುಸ್ತಕವನ್ನು ತಡವಾಗಿ ಹಿಂದಿರುಗಿಸಿದರೆ ಯಾವುದೇ ಹೆಚ್ಚುವರಿ ದಂಡ ವಿಧಿಸುವುದಿಲ್ಲ. ಇದರ ಜೊತೆಗೆ ಯಾವುದೇ ಮಾಸಿಕ ಶುಲ್ಕವೂ ವಿಧಿಸುವುದಿಲ್ಲ. ಇದಾಗಿದೆ ಯಶೋಧಾಲ ಗ್ರಂಥಾಲಯದ ವಿಶೇಷತೆ.

Leave a Reply