ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ನ್ಯಾಯಾಲಯವೊಂದು 10 ವರ್ಷದ ಬಾಲಕಿಯ ಬಲಾತ್ಕಾರ ನಡೆಸಿದ ಆರೋಪಿಗೆ ಜೀವಾವಧಿ ಶಿಕ್ಷೆಯೊಂದಿಗೆ 35,000 ರೂ. ಗಳ ದಂಡವನ್ನೂ ವಿಧಿಸಿದೆ.

ಪ್ರೊಸೆಕ್ಯೂಷನ್ ನ ಪ್ರಕಾರ ,2012 ಅಕ್ಟೋಬರ್ ನಲ್ಲಿ ಗೋಪಿಗಂಜ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ರಾಜೂ ಎಂಬ ಹೆಸರಿನ ಹುಡುಗ ತನ್ನ ಮನೆಯ ಹೊರಗೆ ಆಡುತ್ತಿದ್ದ ಬಾಲಕಿಯ ಬಾಯಿ ಒತ್ತಿ ಹಿಡಿದು ಪೊದೆಗೆ ಕೊಂಡೊಯ್ದು ಅತ್ಯಾಚಾರ ಎಸಗಿದ್ದ. ಪೊಲೀಸರು ರಾಜುವಿನ ವಿರುದ್ಧ ಕೇಸು ದಾಖಲಿಸಿ ಅವನನ್ನು ಘಟನೆಯ ಮರುದಿನ ಬಂಧಿಸಿದ್ದರು.

Leave a Reply