ಕೊಚ್ಚಿ: ತನಗೆ ವ್ಯಾಪಾರದಲ್ಲಿ ನಷ್ಟವಾದರೂ ವಲಸೆ ಕಾರ್ಮಿಕರಿಗಾಗಿ 1 ರೂ.ಗೆ ಇಡ್ಲಿ ನೀಡುತ್ತಿರುವ ತಮಿಳುನಾಡಿನ 85 ವರ್ಷದ ವೃದ್ದೆ ಕಮಲತಲ್ ಅವರ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.  “ಕೊರೋನ ಆರಂಭವಾದ ನಂತರ ಪರಿಸ್ಥಿತಿ ಕಷ್ಟಕರವಾಗಿದೆ. ನಾನು 1 ರೂ.ಗೆ ಇಡ್ಲಿ ನೀಡುತ್ತಿದ್ದೇನೆ. ಇಲ್ಲಿ ಹಲವು ವಲಸೆ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದಾರೆ. ಅವರು ನನ್ನಲ್ಲಿಗೆ ಬರುತ್ತಾರೆ. ಹಲವರು ನನಗೂ ಸಹಾಯ ಮಾಡುತ್ತಿದ್ದಾರೆ. ಅವರು ನನಗೆ ಸಾಮಗ್ರಿಗಳನ್ನು ನೀಡುತ್ತಾರೆ ಮತ್ತು ನಾನು ಅವರಿಗೆ 1 ರೂ.ಗೆ ಇಡ್ಲಿ ವಿತರಿಸುತ್ತೇನೆ” ಎಂದು ಕಮಲತಲ್ ವಿವರಿಸುತ್ತಾರೆ. ಕಮಲತಲ್ ಅವರ ಈ ಸೇವೆಯ ಬಗ್ಗೆ ತಿಳಿದುಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾ ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಈ ಬಗ್ಗೆ ಕ್ರಿಕೆಟಿಗ ಮುಹಮ್ಮದ್ ಕೈಫ್ ಟೈಟ್ ಮಾಡಿದ್ದು, 30 ವರ್ಷಗಳಿಂದ ತಮಿಳುನಾಡಿನ ಕೆ. ಕಮಲತಲ್ ಜಿ 1 ರೂ.ಗೆ ಇಡ್ಲಿ ಮಾರುತ್ತಿದ್ದಾರೆ.

ಯಾರು ಈ ಮಹಾನ್ ಅಜ್ಜಿ

ಈ ಕಾಲದಲ್ಲೂ ಬಡವರಿಗಾಗಿ ಬದುಕುವ ಹಲವಾರು ಜೀವಗಳಿವೆ. ಕಳೆದ ಮೂವತ್ತು ವರ್ಷಗಳಿಂದ 80 ವರ್ಷದ ಕಮಲಥಾಲ್ ಪಾತಿ ದಿನಾ ಸಾವಿರ ಇಡ್ಲಿ ತಯಾರಿಸುತ್ತಾರೆ. ಬೆಳಗ್ಗೆ ಮನೆಯಲ್ಲಿ ಎಲ್ಲರೂ ನಿದ್ರಿಸುತ್ತಿದ್ದರೆ ಅವರು ಅಡುಗೆ ಮನೆಯಲ್ಲಿ ಕಲ್ಲು ಗ್ರೈಂಡರ್ ನಲ್ಲಿ ಇಡ್ಲಿ ತಯಾರಿಸುವ ಕೆಲಸದಲ್ಲಿ ನಿರತ ರಾಗುತ್ತಾರೆ. ಕೊಯಮತ್ತೂರಿನ ಕಮಲಥಾಲ್ ಪಾತಿ ಇಡ್ಲಿಯ ಬೆಲೆ ಕೇವಲ 1 ರೂಪಾಯಿ. ಅವರ ತಾಜಾ, ತುಪ್ಪುಳಿನಂತಿರುವ ಮತ್ತು ಹಬೆಯ ಬಿಸಿ ಇಡ್ಲಿಗಳ ರಹಸ್ಯವೇನೆಂದರೆ ಎಲ್ಲವನ್ನೂ ಅವರು ಅದೇ ದಿನ ತಯಾರಿಸುತ್ತಾರೆ. 1 ರೂಪಾಯಿ ಇಡ್ಲಿಯ ಮಾಹಿತಿ ಹೊರಬಿದ್ದೊಡನೆ ಕೊಯಮತ್ತೂರಿನ ಸಣ್ಣ ಕುಗ್ರಾಮವಾದ ವಾಡಿವೇಲಂಪಲಯದಲ್ಲಿನ ಕಮಲಥಾಲ್ ಅವರ ಪುಟ್ಟ ಅಂಗಡಿ ಹಲವು ಬಾರಿ ಮುಖಪುಟದಲ್ಲಿ ಗೋಚರಿಸಿಕೊಂಡಿವೆ.

ಅವರು ಹುಟ್ಟಿದ್ದು ಕೃಷಿ ಕುಟುಂಬದಲ್ಲಿ. ಅವಿಭಕ್ತ ಕುಟುಂಬವಾದ ಕಾರಣ ಇಡ್ಲಿ ತಯಾರಿಸುವುದು ಅನಿವಾರ್ಯ ಆಗಿತ್ತು. ಆದ್ದರಿಂದಲೇ ಅದಕ್ಕೆ ಬೇಕಾದ ನೈಪುಣ್ಯವನ್ನು ಕರಗತ ಮಾಡಿಕೊಂಡರು. ಪತಿ ಅವರನ್ನು ತೊರೆದ ಬಳಿಕ ಏಕಾಂಗಿಯಾಗಿ ಇಡ್ಲಿ ಮಾರಾಟ ಮಾಡಲು ತೊಡಗಿದರು ಎಂದು ಅವರ ಮೊಮ್ಮಗಳು ಆರತಿ ಹೇಳಿದ್ದಾರೆ.

ಮೊದಲು ಇವರು 50 ಪೈಸೆಗೆ ಇಡ್ಲಿ ಮಾರಲು ತೊಡಗಿದರು. ಕೆಲವೇ ವರ್ಷಗಳ ಹಿಂದೆ ಅವರು ಇಡ್ಲಿಗೆ ಒಂದು ರೂಪಾಯಿ ಮಾಡಿದರು. ಆದರೂ ಇಂದಿನ ಬೆಲೆ ಏರಿಕೆಯ ಬಗ್ಗೆ ನೋಡುವಾಗ ಇದೂ ಬಹಳ ಕಡಿಮೆ ಎಂದು ಹೇಳಬಹುದು. ಯಾರಾದರೂ ಬೆಲೆ ಹೆಚ್ಚಿಸಿ ಎಂದು ಸಲಹೆ ಕೊಟ್ಟರೆ ಅದನ್ನು ಸರಸಾಗಾಟವಾಗಿ ನಿರಾಕರಿಸಿ ನನ್ನ ಇಡ್ಲಿ ಬಡವರಿಗೆ ವರದಾನವಾಗಲಿ ಎನ್ನುತ್ತಾರೆ ಈ ಅಜ್ಜಿ. ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಅವರ ಅಂಗಡಿಯ ಹೊರಗೆ ಜನರು ಸಾಲಾಗಿ ನಿಲ್ಲುತ್ತಾರೆ. ಕಮಲಥಾಲ್ ಪ್ರತಿದಿನ ಸರಾಸರಿ 800 ಇಡ್ಲಿಗಳನ್ನು ಮಾರಾಟ ಮಾಡುತ್ತಾರೆ, ಕೆಲವೊಮ್ಮೆ1000 ವರೆಗೆ ತಲುಪುತ್ತದೆ.

LEAVE A REPLY

Please enter your comment!
Please enter your name here