ದೇಶದಾದ್ಯಂತ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಮಧ್ಯೆ ಮುಸ್ಲಿಂ ಕುಟುಂಬವೊಂದು ಈ ಹಬ್ಬಕ್ಕೆ ಆದರ್ಶ್ ನಗರದಲ್ಲಿ ರಾವಣನ ಅತಿ ಎತ್ತರದ ಪ್ರತಿಮೆಯನ್ನು ತಯಾರಿಸುವಲ್ಲಿ ನಿರತವಾಗಿದೆ. ಮಥುರಾ ಮೂಲದ ಚಂದ್ ಬಾಬುರವರ ಕುಟುಂಬವು ಕಳೆದ ಐದು ತಲೆಮಾರುಗಳಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ಸ್ವತಹ ಅವರೇ ಹೇಳುತ್ತಾರೆ.

“ನಾವು ಮಥುರಾದಿಂದ ಬಂದವರು. ನಮ್ಮ ಕುಟುಂಬವು ಕಳೆದ ಐದು ತಲೆಮಾರುಗಳಿಂದ ಈ ಕೆಲಸದಲ್ಲಿ ತೊಡಗಿದೆ. ನಾವು ಜನ್ಮಾಷ್ಟಮಿಯ ನಂತರ ಈ ಪ್ರತಿಮೆಯನ್ನು ತಯಾರಿಸಲು ಪ್ರಾರಂಭಿಸುತ್ತೇವೆ ಮತ್ತು ದಸರಾ ಮೊದಲು ಮುಗಿಸುತ್ತೇವೆ. ಕಳೆದ ವರ್ಷಕ್ಕಿಂತ ಈ ವರ್ಷದ ಪ್ರತಿಮೆ ಉತ್ತಮ ಮತ್ತು ಅದ್ಭುತವಾಗಿದೆ. ರಾವಣನ ಕಿರೀಟಕ್ಕೆ ಹೆಚ್ಚು ವರ್ಣರಂಜಿತ ದೀಪಗಳನ್ನು ಸೇರಿಸಿದ್ದೇವೆ. ಪ್ರತಿಮೆಯನ್ನು ತಯಾರಿಸಲು ಒಟ್ಟು ವೆಚ್ಚ ಸುಮಾರು 10 ಲಕ್ಷ ರೂಪಾಯಿಗಳಾಗಿದ್ದು, ಸುಮಾರು 20 ಜನರು ಕೆಲಸ ಮಾಡುತ್ತಿದ್ದಾರೆ”   ಎಂದವರು ಹೇಳಿದರು.

 

LEAVE A REPLY

Please enter your comment!
Please enter your name here