ಇದು ನಮ್ಮ ಊರು: ಮಕ್ಕಳು ಸೃಜನಶೀಲತೆಯನ್ನು ಬೆಳೆಸಿಕೊಂಡರೆ ಎಂತೆಂತಹ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಕೋಜಿಕ್ಕೋಡ್ ನ ಕರಸೇರಿಯಾದ ಕೊಡಿಯಾಥೂರ್ ಜಿಎಂಯುಪಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ನಿಹಲಾ ಫಾತಿಮಾ ತನ್ನ ತಂಗಿ ಹುದಾ ಫಾತಿಮಾಗೆ ವಿಶೇಷ ಉಡುಗೊರೆಯನ್ನು ನೀಡಲು ಬಯಸಿದ್ದಳು. ಇದಕ್ಕಾಗಿ ಅವಳು ತನ್ನ ಸೃಜನಶೀಲತೆಯನ್ನು ಬಳಸಿ ಹಳೆಯ ಪತ್ರಿಕೆಗಳನ್ನು ಉಪಯೋಗಿಸಿ ಬೈಸಿಕಲ್ ತಯಾರಿಸಿ ಇದೀಗ ಸುದ್ದಿಯಾಗಿದ್ದಾಳೆ.

ಇತ್ತೀಚಿಗೆ 3 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುವ ಹುದಾ ಫಾತಿಮಾಳ ಹುಟ್ಟು ಹಬ್ಬ ವಿತ್ತು. ಹುಟ್ಟು ಹಬ್ಬಕ್ಕೆ ಅಂಗಡಿಯಿಂದ ಸಾಮಾನ್ಯ ಉಡುಗೊರೆಯನ್ನು ಖರೀದಿಸಿ ನೀಡುವುದು ನಿಹಾಲಾಗೆ ಇಷ್ಟವಿರಲಿಲ್ಲ. ಆದ್ದರಿಂದ ಅವಳು ಬೇರೆ ಏನಾದರೂ ವಿಶೇಷ ಉಡುಗೊರೆಯನ್ನು ನೀಡಲು ಬಯಸಿದಳು. ತುಂಬಾ ಯೋಚಿಸಿದ ಪುಟ್ಟ ಹುಡುಗಿ ಕೊನೆಗೆ ಹಳೆಯ ಪತ್ರಿಕೆಗಳನ್ನು ಬಳಸಿ ಬೈಸಿಕಲ್ ತಯಾರಿಸಿದಳು. ತ್ಯಾಜ್ಯ ವಸ್ತುಗಳು ಮತ್ತು ಪತ್ರಿಕೆಗಳನ್ನು ಬಳಸಿ ಈಗಾಗಲೇ ಹಲವಾರು ಕರಕುಶಲ ವಸ್ತುಗಳನ್ನು ತಯಾರಿಸಿರುವ ನಿಹಾಲಾ ಚಿತ್ರಕಲೆಯಲ್ಲಿಯೂ ಪ್ರತಿಭಾವಂತಳು. ನಿಹಾಲಾ ಮತ್ತು ಹುದಾ ಅಸ್ಕರ್ ಸರ್ಕಾರ್ಪಾರಂಬು ಮತ್ತು ಫಾಸಿಲಾ ಅವರ ಪುತ್ರಿಯರು.

Leave a Reply