ಬಿಡುವಿನ ಸಮಯವನ್ನು ಬಣ್ಣ ಕಾಗದದಿಂದ ಉತ್ಸವ ಮಾಡುತ್ತಾಳೆ ಈ ಪೋರಿ. ಬಣ್ಣ ಕಾಗದ ಉಪಯೋಗ ರಹಿತವಾದ ಸಿ.ಡಿ., ಬಣ್ಣದ ನೂಲು, ಐಸ್ಕ್ರೀಮ್ ಸ್ಟಿಕ್ ಮುಂತಾದುವುಗಳನ್ನು ಬಳಸಿಕೊಂಡು ವಿವಿಧ ಆಟಿಕೆಗಳನ್ನು ತಯಾರಿಸುವಲ್ಲಿ ಪ್ರವೀಣೆ ಈ ಪುಟ್ಟ ಬಾಲಕಿ.
ಕಾಸರಗೋಡಿನ ಪಡನ್ನ ಐಸಿಟಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಎಂಟನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಮೊಹಸೀನಾ ಆಗಿದ್ದಾರೆ ಈ ಪ್ರತಿಭಾವಂತೆ ಬಾಲಕಿ.
“ಐದನೇ ತರಗತಿಯಿಂದಲೇ ನಾನು ಈ ಕೆಲಸದಲ್ಲಿ ತೊಡಗಿದ್ದೆ. ಮೊದಮೊದಲು ಬೀಡ್ಸ್ ಉಪಯೋಗಿಸಿ ನಾನು ಆಟಿಕೆಗಳನ್ನು ತಯಾರಿಸುತ್ತಿದ್ದೆ. ನಂತರ ನನ್ನ ತಂದೆಯವರು ರಬ್ಬರ್ ಬ್ಯಾಂಡ್ ತಂದು ಕೊಟ್ಟರು. ಅದರ ಮೂಲಕ ಬ್ರೆಸ್ಲೈಟ್ ಮಾಡಿದೆ. ಹೀಗೆ ಯೂಟ್ಯೂಬ್ ನೋಡಿ ಕೆಲವು ಉತ್ತಮ ಆಟಿಕೆಗಳನ್ನು ಕಲಿತೆ. ನನ್ನ ಅಪ್ಪ ನನಗೆ ಬೇಕಾದ ಎಲ್ಲಾ ವಸ್ತುಗಳನ್ನು ತಂದು ಕೊಡುತ್ತಿದ್ದರು, ಹೀಗೆ ಮುಂದುವರೆಯಿತು” ಎಂದು
ಆಕೆ ಹೇಳುತ್ತಾಳೆ.