ಪಶ್ಚಿಮ ಬಂಗಾಳದಲ್ಲಿ ಊರ ಪ್ರಮಾಣಿಗಳ ಪಂಚಾಯತ್ ತೀರ್ಪಿನ ಅನುಸಾರ ಓರ್ವ ವ್ಯಕ್ತಿಯನ್ನು ಜೀವಂತ ದಹನ ಮಾಡುವ ತೀರ್ಮಾನವಾಗಿ ಬೆಂಕಿ ಹಚ್ಚಿ ಸುಟ್ಟು ಕೊಲ್ಲುವ ಶ್ರಮ ನಡೆಯಿತು. ಮೊಂಡಾಲ್ ಹನ್ಸದ ಎಂಬ ಯುವಕ ಈ ಶಿಕ್ಷೆಗೆ ಗುರಿಯಾಗಿದ್ದ.
ಹನ್ಸದಾ ಹಾಗೂ ಆತನ ಕುಟುಂಬದ ಓರ್ವನ ನಡುವೆ ಜಾಗದ ತಕರಾರಿತ್ತು. ಇದರ ತೀರ್ಮಾನ ಮಾಡಲು ಪಂಚಾಯತ್ ಸೇರಿಸಲಾಗಿತ್ತು. ಯುವಕ ತಪ್ಪಿತಸ್ತನೆಂದು ಕಂಡು ಬಂದ ಕೂಡಲೇ ಈತನನ್ನು ಜೀವಂತ ದಹಿಸುವ ಶಿಕ್ಷೆಯನ್ನು ಪಂಚಾಯತ್ ನೀಡಿತ್ತು. ಈತನ ಕೈಕಾಲುಗಳನ್ನು ಕಟ್ಟಿ ಹಾಕಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ಈತನ ಕುಟುಂಬದವರು ಈತನನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸಿದರು.
ದೇಹವಿಡೀ ಸುಟ್ಟ ಗಾಯಗಳಿಂದ ಯುವಕನ ಸ್ಥಿತಿ ಚಿಂತಾಜನಕವಾಗಿದೆ, ಈ ಕುರಿತು ಪಂಚಾಯತ್ ಮುಖ್ಯಸ್ಥ ಸಹಿತ ಮೂವರನ್ನು ಪೋಲೀಸರು ಬಂಧಿಸಿದ್ದಾರೆ,.