ಇಡೀ ದೇಶದಲ್ಲಿ ಮೋದಿ ಅಲೆ ಇದ್ದರೆ ಒಡಿಶಾದ ಪುರಿ ಕ್ಷೇತ್ರದಲ್ಲಿ ಬಿಜೆಪಿಯ ಸ್ಟಾರ್ ವಕ್ತಾರ ಸಂಬಿತ್ ಪಾತ್ರ ಜಿದ್ದಾಜಿದ್ದಿನ ಮುಖಾಮುಖಿಯಲ್ಲಿ 11 ಸಾವಿರಕ್ಕೂ ಹೆಚ್ಚಿನ ಮತಗಳೊಂದಿಗೆಸೋತಿದ್ದಾರೆ. ಬಿಜೆಡಿಯ ಪಿನಾಕಿ ಮಿಶ್ರಾ ಅವರ ವಿರುದ್ಧ ಗೆದ್ದು ಕೊಂಡಿದ್ದು,ಶುಕ್ರವಾರ ಬೆಳಿಗ್ಗೆ ಫಲಿತಾಂಶ ಪ್ರಕಟಿಸಲಾಯಿತು, ಪಿನಾಕಿ ಮಿಶ್ರಾ 538321 ಮತಗಳನ್ನು ಪಡೆದರೆ, ಅವರ ಮತ ಶೇ 47.4 ರಷ್ಟು ಇತ್ತು. ಸಂಬಿತ್ ಪತ್ರಾ 526607 ಮತಗಳನ್ನು ಪಡೆದಿದ್ದು, ಅವರ ಮತದಾನದ ಹಂಚಿಕೆಯು 46.37% ಇತ್ತು. ಈ ಕ್ಷೇತ್ರದ ಮತದಾನ ಎಣಿಕೆ ಬಹಳ ಕುತೂಹಲ ಕಾರಿಯಾಗಿತ್ತು. , ಕೆಲವೊಮ್ಮೆ ಪಿನಾಕಿ ಮಿಶಾರವರು ಮುಂದೆ ಇನ್ನೊಮ್ಮೆ ಸಂಬಿತ್ ಪಾತ್ರ ಮುನ್ನಡೆ ಕಾಯ್ದುಕೊಂಡಿದ್ದರು.

ಕೊನೆಗೆ ಚುನಾವಣಾ ಫಲಿತಾಂಶ ಬಂದಾಗ ಕಡಿಮೆ ಮತಗಳ ಅಂತರದಿಂದ ಪಿನಾಕಿಯವರು ಗೆದ್ದರು. ಪುರಿ ಜೊತೆಗೆ, ಬಿಜೆಡಿ 21 ಸೀಟುಗಳ ಪೈಕಿ 12 ಸ್ಥಾನಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಬಿಜೆಪಿ 8 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಒಂದು ಸೀಟನ್ನು ಗಳಿಸಿದೆ. ಸಂಬಿತ್ ಪಾತ್ರರವರ ಅಬ್ಬರದ ಪ್ರಚಾರವೂ ಈ ಬಾರಿ ಅವರ ಕೈ ಹಿಡಿಯಲಿಲ್ಲ. ಅವರ ಪ್ರಚಾರದ ಶೈಲಿ ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply