ಇದು ನಮ ಊರು: ಈಜಿಪ್ಟಿನ ಯುವಕನೊಬ್ಬ ಏಳು ತಿಂಗಳ ಹಿಂದೆ ಗೆಳೆಯರೊಂದಿಗೆ ತಮಾಷೆಯಲ್ಲಿ ಸವಾಲಾಗಿ ಸೆಲ್ ಫೋನ್ ನುಂಗಿದ್ದ, ಬಳಿಕ ಹೊಟ್ಟೆ ನೋವಿನಿಂದ ನರಳಿ ಆಸ್ಪತ್ರೆ ಸೇರಿದ ಆತನ ಹೊಟ್ಟೆಯಿಂದ ವೈದ್ಯರು ಕೊನೆಗು ಶಸ್ತ್ರಚಿಕಿತ್ಸೆ ನಡೆಸಿ ಸೆಲ್ ಫೋನ್ ಹೊರತೆಗೆದಿದ್ದಾರೆ. ಕಲುಬಿಯಾ ಗವರ್ನರೇಟ್‌ನ ಸಣ್ಣ ಹಳ್ಳಿಯ ನಿವಾಸಿ ಹಸನ್ ರಶಾದ್ ಎಂಬ 28 ವರ್ಷದ ಯುವಕ ಇದೀಗ ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾನೆ.

ತನ್ನ ಸ್ನೇಹಿತರೊಂದಿಗೆ ತಮಾಷೆ ಮಾಡುವ ಸಮಯದಲ್ಲಿ, ರಶಾದ್ ತನ್ನ ಸ್ನೇಹಿತರೊಂದಿಗೆ ಸವಾಲಾಗಿ ಸಾಧನವನ್ನು ನುಂಗಿದ್ದನು. ಈ ಘಟನೆಯ ಬಗ್ಗೆ ಅವನು ತನ್ನ ಕುಟುಂಬಕ್ಕೆ ಹೇಳಿರಲಿಲ್ಲ. ತೀವ್ರ ಹೊಟ್ಟೆನೋವು ಅನುಭವಿಸಿದ ನಂತರ ಆಸ್ಪತ್ರೆಗೆ ದಾಖಲಿಸಿ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ, ಸ್ಕ್ಯಾನ್ ಫಲಿತಾಂಶವು ಒಳಗೆ ಒಂದು ವಿಚಿತ್ರವಾದ ಸಂಗತಿಯನ್ನು ತೋರಿಸಿದೆ.

ಆ ಬಳಿಕ ವಿಚಾರಿಸಿದಾಗ ಯುವಕ ಸಂಗತಿಯನ್ನು ಬಾಯಿ ಬಿಟ್ಟಿದ್ದಾನೆ. ರಶಾದ್ ಸಹೋದರ ಅಹ್ಮದ್ ಹೇಳುವ ಪ್ರಕಾರ, ಹಸನ್ ರಶಾದ್ ಗೆ ಮಾನಸಿಕ ಅಸ್ವಸ್ಥತೆ ಸಮಸ್ಯೆ ಇದ್ದು, ಇದಕ್ಕಾಗಿದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

Leave a Reply