ತಿರುವನಂತಪುರಂ: ಜಲಪ್ರಳಯದಲ್ಲಿ ಆಗಿರುವ ನಷ್ಟದ ವ್ಯಾಪ್ತಿ ಬಹಳ ದೊಡ್ಡದು, ಇದುವರೆಗೆ ನಾವು ಲೆಕ್ಕ ಮಾಡಿದಕ್ಕಿಂತ ಎಷ್ಟೊ ಹೆಚ್ಚು ಕೇರಳಕ್ಕೆ ಮಳೆಹಾನಿ, ನೆರೆಹಾವಳಿಯಂದ ನಷ್ಟವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇನ್ಶೂರೆನ್ಸ್ ಒದಗಿಸುವ ವಿಷಯದಲ್ಲಿ ಪುನಃ ಚರ್ಚಿಸಲಾಗುವುದು. ಇದಕ್ಕಾಗಿ ಮುಖ್ಯ ಕಾರ್ಯದಶಿಶ ಇನ್ಶೂರೆನ್ಸ್ ಕಂಪೆನಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಪಿಣರಾಯಿವಿಜಯನ್ ಹೇಳಿದರು.
ಮಾಲಿನ್ಯ ತೆರವಿಗೆ ವಿಶೇಷ ಯೋಜನೆ ಯನ್ನು ರೂಪಿಸಲಾಗುವುದ. ಪ್ರಳಯ ಪೀಡಿತ ಪ್ರದೇಶದಲ್ಲಿ ಕುಡಿಯುವ ನೀರು ಒದಗಿಸಲಾಗುವುದು. ಅದಕ್ಕಾಗಿ ನೀರಿನ ಅಗತ್ಯವಿರುವಲ್ಲಿಗೆ ಕಿಯೋಸ್ಕುಗಳನ್ನು ಸ್ಥಾಪಿಸಲಾಗವುದು. ಜಲಮೂಲಗಳಲ್ಲಿ ಕಸಕಡ್ಡಿ ಇತರ ಮಾಲಿನ್ಯ ಹಾಕಿದರೆ ಕಠಿಣ ಕ್ರಮ ಜರಗಿಸಲಾಗುವುದು. ಜಲಜನ್ಯ ರೋಗಗಳು ಮತ್ತು ಅಂಟು ರೋಗಗಳನ್ನು ತಡೆಯಲು ಅಗತ್ಯವಾದ ಕ್ರಮ ತೆಗೆದುಕೊಳ್ಳಲಾಗುವುದು ಇದಕ್ಕಾಗಿ ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದರು.
ದುರಂತ ಪ್ರದೇಶದಲ್ಲಿ ಪೊಲೀಸರು ನಡೆಸಿದ ಕೆಲಸ ದೇಶಕ್ಕೆ ಮಾದರಿಯೋಗ್ಯವಾಗಿದ್ದು ಎಂದು ಅವರು ಹೇಳಿದರು. ಪುನರ್ವಸತಿ ಕಾರ್ಯಚಟುವಟಿಕೆಗಳು ಶೀಘ್ರವಾಗಿ ಮುಂದುವರಿಯುತ್ತಿದೆ. ಪುನರ್ವಸತಿ ಕಾರ್ಯದಲ್ಲಿ ಭಾಗವಹಿಸುವವರನ್ನು ಮತ್ತು ಸುಪ್ರೀಂಕೋರ್ಟು ನ್ಯಾಯಾಧೀಶರಿಂದ ರಾಷ್ಟ್ರೀಯ ಮಾಧ್ಯಮಗಳು ನೀಡಿದ ಬೆಂಬಲವನ್ನು ಮುಖ್ಯಮಂತ್ರಿ ಅಭಿನಂದಿಸಿದರು. ಪುನರ್ವಸತಿ ಚಟುವಟಿಕೆಗಳಿಗಾಗಿ ಅನಿವಾಸಿ ಭಾರತೀಯರಿಂದ ಭಾರೀ ದೊಡ್ಡದ ಸಹಾಯ ಅಗತ್ಯವಿದೆ. ಈಗ ಸಿಕ್ಕಿರುವುದನ್ನು ವ್ಯವಸ್ಥಿತಿ ರೀತಿಯಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯ ಮಂತ್ರಿ ತಿಳಿಸಿದರು.