ಇದುನಮ್ಮಊರು: ಪ್ರತಿಯೊಬ್ಬರೂ ತಮ್ಮ ಕಷ್ಟವೇ ಮಹಾ ಎಂದು ನೊಂದು ಕೊಳ್ಳುತ್ತಾರೆ. ದುನಿಯಾ ಮೇ ಕಿತ್ನಾ ಘಮ್ ಹೈ ಮೇರಾ ಘಮ್ ಕಿತ್ನಾ ಕಮ್ ಹೈ ಎಂಬ ಪ್ರಸಿದ್ಧ ಹಿಂದಿ ಹಾಡಿನಂತೆ ನಮ್ಮ ಸುತ್ತ ಮುತ್ತಲಿನ ಜನರ ಕಷ್ಟಗಳ ಬಗ್ಗೆ ನೋಡಿದಾಗ ನಮ್ಮ ದುಃಖ ಸಂಕಷ್ಟ ಎಷ್ಟೊಂದು ಸಣ್ಣದು ಎಂಬುದು ಮನವರಿಕೆ ಆಗುತ್ತದೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಆಗದವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಅದೇ ಸಮಯದಲ್ಲಿ ಕಷ್ಟವನ್ನು ಸವಾಲಾಗಿ ಸ್ವೀಕರಿಸುವವರು ಒಂದಲ್ಲ ಒಂದು ದಿನ ಸುಖ ಬರುತ್ತದೆ ಎಂದು ಪರಿಶ್ರಮ ಪಡುತ್ತಾರೆ. ಮತ್ತು ಅವರು ನಿಜವಾಗ್ಲೂ ಜೀವನದಲ್ಲಿ ಗೆದ್ದೇ ಗೆಲ್ತಾರೆ. ಅಂತಹ ಒಂದು ಸ್ಪೂರ್ತಿದಾಯಕ ಸ್ಟೋರಿ ಭಾವೇಶ್ ಭಾಟಿಯಾರದ್ದು.

ಯೌವನದಲ್ಲಿ ದೃಷ್ಟಿ ಕಳಕೊಂಡರು

ಭಾವೇಶ್ ಭಾಟಿಯಾ 23 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಅವರು ಬಾಲ್ಯದಲ್ಲಿ ಅವರಿಗೆ ಕ್ಷೀಣವಾಗಿ ಕಾಣುತ್ತಿತ್ತು. ರೆಟಿನಾ ಸ್ನಾಯುವಿನ ಕ್ಷೀಣತೆಯಿಂದಾಗಿ ಅವರು ತನ್ನ ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳಕೊಂಡರು. ಆ ಸಮಯದಲ್ಲಿ ಅವರು ಹೋಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ದುಃಖದ ಮಧ್ಯೆ ಅಅವರ ತಾಯಿಗೆ ಕ್ಯಾನ್ಸರ್ ಬಂತು. ತಾಯಿ ಮತ್ತು ಮಗ ಇಬ್ಬರಿಗೂ ಚಿಕಿತ್ಸೆಗೆ ಹಣದ ಅಗತ್ಯವಿತ್ತು. ತಾಯಿಯೆಂದರೆ ಅವರಿಗೆ ಪಂಚಪ್ರಾಣ. ಈ ಮಧ್ಯೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು.

bhavesh
Yourstory

ತಾಯಿಯ ನಿಧನ – ದುಃಖದ ಮೇಲೆ ದುಃಖ

ಒಂದೆಡೆ ಚಿಕಿತ್ಸೆಗೆ ಹಣ ಇಲ್ಲ. ಇನ್ನೊಂಡೆಗೆ ಕೆಲಸ ಕಳಕೊಂಡರು. ಕೈಯಲ್ಲಿ ಹಣ ಇಲ್ಲ. ಉವೇಶ್ ರವರ ತಾಯಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಅವರು ಶೀಘ್ರದಲ್ಲೇ ನಿಧನರಾದರು. ತಾಯಿಯ ನಿಧನವು ಅವರನ್ನು ಇನ್ನಷ್ಟು ಮನೋವ್ಯಥೆಗೆ ತಳ್ಳಿತು.

ತಾಯಿಯ ಒಂದು ಉಪದೇಶ ಜೀವನವನ್ನೇ ಬದಲಿಸಿತು

ಭವೇಶ್ ಅವರ ತಾಯಿ ಅವರಲ್ಲಿ ಹೀಗೆ ಹೇಳಿದರು, ಕಣ್ಣು ಹೋದರೆ ಏನಾಯಿತು. ನೀನು ಜನರನ್ನು ನೋಡದಿದ್ದರೆ ಏನು ಒಂದು ದಿನ ಇಡೀ ಜಗತ್ತೇ ನಿನ್ನನ್ನು ನೋಡುವಂತೆ ನೀನು ಬೆಳೆಯುತ್ತಿ ಎಂದು ಹೇಳಿದರು. ಹೌದು ಅದು ತಾಯಿಯ ಮಾತು ಮಾತ್ರವಲ್ಲ ಒಂದು ರೀತಿಯಲ್ಲಿ ಪ್ರಾರ್ಥನೆಯೂ ಆಗಿತ್ತು. ತಾಯಿಯಾದವರು ಯಾವಾಗಲೂ ಮಕ್ಕಳಿಗೆ ಪಾಸಿಟಿವ್ ಎನರ್ಜಿ ನೀಡಿ ಪ್ರೋತ್ಸಾಹ ನೀಡಿದರೆ ಇಂತಹ ಸವಾಲನ್ನೇ ಎದುರಿಸಬಹುದು. ತಾಯಿಯ ಮಾತಿನಿಂದ ಪ್ರೇರಿತರಾಗಿ ಅವರು ಮುಂದೆ ತನ್ನನ್ನು ತಾನು ಪ್ರೀತಿಸ ತೊಡಗಿದರು. ನಿಮ್ಮ ಪಯಣದ ಬಗ್ಗೆ ಮಾತನಾಡಿದ ಭಾವೇಶ್, “ಬಾಲ್ಯದಿಂದಲೂ ನಾನು ನನ್ನ ಕೈಗಳಿಂದ ವಸ್ತುಗಳನ್ನು ತಯಾರಿಸಲು ಆಸಕ್ತಿ ಹೊಂದಿದ್ದೆ. ನಾನು ಗಾಳಿಪಟಗಳನ್ನು ತಯಾರಿಸುತ್ತಿದ್ದೆ, ಜೇಡಿಮಣ್ಣಿನ ಪ್ರಯೋಗ, ಆಟಿಕೆಗಳು ಮತ್ತು ಶಿಲ್ಪಗಳನ್ನು ತಯಾರಿಸುತ್ತಿದ್ದೆ. ಆಕಾರ ಮತ್ತು ವಾಸನೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲ ಕಾರಣ ಮೇಣದ ಬತ್ತಿ ತಯಾರಿಸಲು ನಿರ್ಧರಿಸಿದೆ. ನಾನು ಯಾವಾಗಲೂ ಬೆಳಕಿಗೆ ಆಕರ್ಷಿತನಾಗಿದ್ದೆ.”

bhavesh

ಯಶಸ್ಸಿನ ಗುಟ್ಟು ಕಲಿಕೆ ಮತ್ತು ಪ್ರಯತ್ನ

ಈಗ ಭಾವೇಶ್ ಇದಕ್ಕಾಗಿ ತರಬೇತಿ ಪಡೆದಿದ್ದರು. ಇದಕ್ಕಾಗಿ ಅವರು 1999 ರಲ್ಲಿ ಮುಂಬಯಿಯಲ್ಲಿರುವ ನ್ಯಾಷನಲ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್‌ನಿಂದ ತರಬೇತಿ ಪಡೆದರು. ಇಲ್ಲಿ ಅವರು ಸರಳ ಮೇಣದಬತ್ತಿಗಳನ್ನು ಮಾಡಲು ಕಲಿತರು. ಭಾವೇಶ್ ಬಣ್ಣಗಳು, ಆಕಾರಗಳು ಮತ್ತು ಸುಗಂಧದೊಂದಿಗೆ ವಿಭಿನ್ನ ರೀತಿಯಲ್ಲಿ ಪ್ರಯೋಗ ಮಾಡಲು ಬಯಸಿದ್ದರು, ಆದರೆ ಅಷ್ಟೊಂದು ಬಜೆಟ್ ಇರಲಿಲ್ಲ. ಈ ಕಾರಣದಿಂದಾಗಿ ಅವರು ರಾತ್ರಿಯಿಡೀ ಮೇಣದಬತ್ತಿಗಳನ್ನು ತಯಾರಿಸುತ್ತಿದ್ದರು ಮಹಾಬಲೇಶ್ವರ ಸ್ಥಳೀಯ ಮಾರುಕಟ್ಟೆಯ ಒಂದು ಮೂಲೆಯಲ್ಲಿ ಗಾಡಿಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಗಾಡಿ ಸ್ನೇಹಿತನಿಗೆ ಸೇರಿತ್ತು, ಪ್ರತಿದಿನ ಅದಕ್ಕೆ 50 ರೂಪಾಯಿ ಬಾಡಿಗೆ. ಮರುದಿನ ಕಚ್ಚಾ ವಸ್ತುಗಳನ್ನು ಜೋಡಿಸಲು ಅವರು ಪ್ರತಿದಿನ 25 ರೂಪಾಯಿ ಉಳಿತಾಯವನ್ನು ಮೀಸಲಿಡುತ್ತಿದ್ದರು.

ಭಾವೇಶ್ ಮತ್ತು ನೀತಾ ರವರ ಪ್ರೇಮಕಥೆ ತುಂಬಾ ಸ್ವಾರಸ್ಯಕರವಾಗಿದೆ

ಭಾವೇಶ್ ತಮ್ಮ ಮನಸ್ಸಿನ ಸಮಾಧಾನ ಸಂತೃಪ್ತಿ ನೀಡುವ ಕೆಲಸವನ್ನು ಮಾಡುತ್ತಿದ್ದರು. ಈ ಮಧ್ಯೆ ಅವರ ಜೀವನಕ್ಕೆ ಒಂದು ಟ್ವಿಸ್ಟ್ ಬರುತ್ತದೆ. ಅವರ ಪ್ರೇಮಕಥೆ ತುಂಬಾ ಸುಂದರವಾಗಿದೆ. ವರದಿಯ ಪ್ರಕಾರ, ಒಮ್ಮೆ ಒಬ್ಬ ಮಹಿಳೆ ಮೇಣದ ಬತ್ತಿ ಖರೀದಿಸಲು ಬಂದರು. ಭಾವೇಶ್ ರಿಗೆ ಈ ಮಹಿಳೆಯ ಸೌಮ್ಯತೆ ತುಂಬಾ ಇಷ್ಟ ಆಯಿತು. ಕೆಲವು ಗಂಟೆಗಳ ಮಾತುಕತೆಯ ನಂತರ, ಇಬ್ಬರು ಸ್ನೇಹಿತರಾದರು. ಆ ಮಹಿಳೆಯ ಹೆಸರು ನೀತಾ. ನೀತಾ ಮತ್ತು ಭಾವೇಶ್ ಪರಸ್ಪರ ಪ್ರೀತಿಸ ತೊಡಗಿದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ ಬಡ ಕುರುಡನೊಬ್ಬನನ್ನು ಮದುವೆಯಾಗಲು ನೀತಾಳ ಕುಟುಂಬಕ್ಕೆಇಷ್ಟವಿರಲಿಲ್ಲ. ಆದರೆ ನೀತಾರವರ ಒತ್ತಾಯಕ್ಕೆ ಮಣಿದು ಅವರ ಕುಟುಂಬ ಕೊನೆಗೂ ಒಪ್ಪಿತು. ಇಬ್ಬರು ವಿವಾಹವಾದರು ಮತ್ತು ಮಹಾಬಲೇಶ್ವರದ ಒಂದು ಸಣ್ಣ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು.

ನೀತಾ ತುಂಬಾ ಭರವಸೆಯ ಮಹಿಳೆ

ಅವರು ಯಾವಾಗಲೂ ತನ್ನ ಗಂಡನಿಗೆ ಸಹಾಯ ಮಾಡುತ್ತಿದ್ದರು. ಶೀಘ್ರದಲ್ಲೇ ದ್ವಿಚಕ್ರ ವಾಹನವನ್ನು ಖರೀದಿಸಿದರು, ಇದರಿಂದಾಗಿ ನೀತಾ ಭವೇಶ್ ಅವರ ಮೇಣದಬತ್ತಿಗಳನ್ನು ನಗರದಲ್ಲಿ ಮಾರಾಟ ಮಾಡಲು ಸಹಾಯವಾಯಿತು. ಅವರ ವ್ಯಾಪಾರ ಚೆನ್ನಾಗಿ ಬೆಳೆಯಲು ಪ್ರಾರಂಭಿಸಿತು. ನೀತಾ ವ್ಯಾನ್ ಓಡಿಸಲು ಕಲಿತರು ಮತ್ತು ಅವರು ದೊಡ್ಡ ಪ್ರಮಾಣದಲ್ಲಿ ಮೇಣದಬತ್ತಿಗಳನ್ನು ಸಾಗಿಸಲು ಪ್ರಾರಂಭಿಸಿದರು.

ನೀತಾ ಬಾವೇಶ್ ಅವರ ಬದುಕಿನ ಬೆಳಕು

ಯುವರ್ ಸ್ಟೋರಿ ಯೊಂದಿಗೆ ಮಾತನಾಡಿದ ಭಾವೇಶ್, ” ಅಂಧನೊಬ್ಬ ತನ್ನ ಕಾಲ ಮೇಲೆ ನಿಲ್ಲಬಹುದು ಎಂದು ಜನರು ಭಾವಿಸುವುದಿಲ್ಲ. ಎಲ್ಲ ಕಡೆ ನನ್ನ ಮುಖ ನೋಡಿ ನೀವು ಅಂಧರಾಗಿದ್ದೀರಿ ಎಂದು ಹೇಳುತ್ತಿದ್ದರು. ಕೆಲವು ವೃತ್ತಿಪರ ಕ್ಯಾಂಡಲ್ ತಯಾರಕರು ಮತ್ತು ಇತರ ಸಂಸ್ಥೆಗಳಿಂದ ಮಾರ್ಗದರ್ಶನ ಪಡೆಯಲು ಪ್ರಯತ್ನಿಸಿದೆ. ಆದರೆ ಯಾರೂ ನನಗೆ ಸಹಾಯ ಮಾಡಲಿಲ್ಲ. ನಾನು ಪತ್ನಿಯೊಂದಿಗೆ ಮಾಲ್ ಗೆ ಹೋಗಿ ಸ್ಪರ್ಶದ ಮೂಲಕ ಡಿಸೈನ್ ಗಳನ್ನೂ ಗ್ರಹಿಸುತ್ತಿದ್ದೆ ಮತ್ತು ಹಾಗೆಯೆ ಮನೆಯಲ್ಲಿ ವಿನ್ಯಾಸ ಮಾಡುತ್ತಿದ್ದೆ” ಎಂದರು.

ಅದೃಷ್ಟವಶಾತ್, ದೃಷ್ಟಿಹೀನರಿಗಾಗಿ ವಿಶೇಷ ಯೋಜನೆಯಡಿ ಭವೇಶ್ ಅವರು ಸತಾರಾ ಬ್ಯಾಂಕಿನಿಂದ 15 ಸಾವಿರ ರೂ.ಸಾಲ ಪಡೆದು ಈ ಹಣದಿಂದ ಅವರು 15 ಕೆಜಿ ಮೇಣ, ಎರಡು ಬಣ್ಣಗಳು ಮತ್ತು ಕೈ ಬಂಡಿಯನ್ನು ಖರೀದಿಸಿದರು. ಅವರು ಇಲ್ಲಿಂದ ಅವರ ಹೊಸ ಪ್ರಯಾಣ ಶುರು ಆಯಿತು. ಈ ಕೆಲಸ 15 ಸಾವಿರ ರೂಪಾಯಿಗಳಿಂದ ಪ್ರಾರಂಭವಾಗಿ ಬಹು ಕೋಟಿ ವ್ಯವಹಾರವಾಯಿತು. ಸನ್‌ರೈಸ್ ಕ್ಯಾಂಡಲ್ಸ್ ಉನ್ನತ ಕಾರ್ಪೊರೇಟ್ ಗ್ರಾಹಕರನ್ನು ಹೊಂದಿದೆ.

ಸೂರ್ಯೋದಯ ಕಂಪೆನಿ ಇಂದು ದೊಡ್ಡ ಕಂಪೆನಿ

ಭಾವೇಶ್ ಹೇಳುತ್ತಾರೆ, ” ನಾನು ಸಾಲವನ್ನು ಕೇಳಿದಾಗ ಅನೇಕ ಜನರು ನಿರಾಕಸಿದ್ದರು ಎಂಬುದು ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಏಕೆಂದರೆ ಜಗತ್ತು ನಮ್ಮಂಥವರೊಂದಿಗೆ ವ್ಯವಹಾರ ಮಾಡುವ ವಿಧಾನವು ನಿರ್ದಯವಾಗಿದೆ. ಪ್ರತಿಯೊಬ್ಬರೂ ತಮ್ಮ ಮೆದುಳಿನಿಂದ ಯೋಚನೆ ಮಾಡುತ್ತಾರೆಯೇ ಹೊರತು ಹೃದಯದಿಂದಲ್ಲ. ಹೃದಯದೊಂದಿಗೆ ಸಮೀಕರಣವಾಗಿ ಯೋಚಿಸುವುದು ಯಶಸ್ವಿ ವ್ಯವಹಾರವನ್ನು ನಡೆಸುವ ಏಕೈಕ ಮಾರ್ಗವಾಗಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಸಾಕಷ್ಟು ಸಮಯ. ತ್ಯಾಗ ಮತ್ತು ಶ್ರದ್ಧೆಯ ಅಗತ್ಯವಿದೆ ಎಂದು ಹೇಳುತ್ತಾರೆ.

ಭವೇಶ್ ಅವರಿಗೆ ವಿಕಲಾಂಗರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಇಂದು ಸೂರ್ಯೋದಯ ಮೇಣದಬತ್ತಿಗಳು 9,000 ವಿನ್ಯಾಸದ ಮೇಣದಬತ್ತಿಗಳನ್ನು ತಯಾರಿಸುತ್ತವೆ. ಕಂಪನಿಯು ಪ್ರತಿದಿನ 25 ಟನ್ ಮೇಣವನ್ನು ಬಳಸುತ್ತದೆ.ಭವೇಶ್ ತನ್ನ ಮೇಣವನ್ನು ಯುಕೆ ಯಿಂದ ಖರೀದಿಸುತ್ತಾರೆ. ಅವರ ಗ್ರಾಹಕರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ರಾನ್‌ಬಾಕ್ಸಿ, ಬಿಗ್ ಬಜಾರ್, ನರೋಡಾ ಇಂಡಸ್ಟ್ರೀಸ್ ಮತ್ತು ರೋಟರಿ ಕ್ಲಬ್ ಸೇರಿವೆ. ಎಲ್ಲಾ ಆಡಳಿತಾತ್ಮಕ ಕೆಲಸಗಳನ್ನು ನೀತಾ ನಿರ್ವಹಿಸುತ್ತಾರೆ. ಅವರ ಕಂಪನಿಯಲ್ಲಿ ಸುಮಾರು 200 ಉದ್ಯೋಗಿಗಳಿದ್ದು ಅವರು ಅಂಧರಾಗಿದ್ದಾರೆ.

ಅವರು ಉತ್ತಮ ಕ್ರೀಡಾ ಪಟು. ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಒಟ್ಟು 109 ಪದಕಗಳನ್ನು ಪಡೆದಿದ್ದಾರೆ. ಭಾವೇಶ್ ಅವರ ಪತ್ನಿ ನೀತಾ ಕೂಡ ಒಂದು ದೊಡ್ಡ ಉದಾಹರಣೆಗಿಂತ ಕಡಿಮೆಯಿಲ್ಲ. ಅವರು ಭವೇಶ್ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯದಿಂದ ಸಹಾಯ ಮಾಡಿದರು. ಇಂದು ಅದರ ಸಕಾರಾತ್ಮಕ ಫಲಿತಾಂಶಗಳು ಎಲ್ಲರ ಮುಂದೆ ಇವೆ.

bhavesh

Team | sunrisecandles.in

Bhavesh Bhatia 9Extreme right) with Neeta, his wife.

idunammaooru ವಿಶೇಷ ಸ್ಟೋರಿ

Leave a Reply