ಸಾಂಧರ್ಬಿಕ ಚಿತ್ರ

ಪಾಟ್ನಾ : ಬಿಹಾರದಲ್ಲಿ ಕಾಣೆಯಾದ ಸಹೋದರಿಯನ್ನು ಸಹೋದರನೊಬ್ಬ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಪತ್ತೆ ಹಚ್ಚಿ ಪಾರು ಮಾಡಿದ್ದಾನೆ.

ನಾಲ್ಕು ವರ್ಷಗಳ ಹಿಂದೆ ತನ್ನ ಸಹೋದರಿಗಾಗಿ ಆತ ಹುಡುಕುತ್ತಲೇ ಇದ್ದ. ಖಾಸಗಿ ಹಡಗು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದರ ಬಾಖ್ರಿ ಗ್ರಾಮದ ರೆಡ್ ಲೈಟ್‌ ಪ್ರದೇಶದಲ್ಲಿ ಆಕೆಯನ್ನು ಕಂಡರು. ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಡ್ಡೆಯ ಮೇಲೆ ದಾಳಿ ಮಾಡಿ ಆಕೆಯನ್ನು ರಕ್ಷಿಸಿದರು. ಮಾತ್ರವಲ್ಲ, ಅದರ ಜೊತೆ ಇನ್ನೋರ್ವ ಸಂತ್ರಸ್ಥೆಯನ್ನೂ ಕಾಪಾಡಿದ್ದಾರೆ. ನಮ್ಮ ದೇಶದ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಹಲವಾರು ಇಂತಹ ದಾರುಣ ಕಥೆಗಳಿವೆ ಎಂಬುದು ದುರಂತ.

Leave a Reply