ಬೈಕ್​​ ವ್ಹೀಲಿಂಗ್‌ ಬಗ್ಗೆ ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರೂ ಯುವಕರು ಮಾತ್ರ ಮತ್ತೆ ಮತ್ತೆ ಅದೇ ಪುನರಾವರ್ತನೆ ಮಾಡುತ್ತಾರೆ. ಹಲವು ಬಾರಿ ಬೈಕ್​​ ವ್ಹೀಲಿಂಗ್‌ ಮಾಡಿ ಜೀವ ಕಳಕೊಂಡದ್ದೂ ಇದೆ. ರಸ್ತೆ ಮಧ್ಯೆ ಬೈಕ್​​ ವ್ಹೀಲಿಂಗ್‌ ಮಾಡಿ ಜನರಿಗೆ ಗಾಬರಿ ಹುಟ್ಟಿಸುದು ಮತ್ತು ಇತರರಿಗೆ ತೊಂದರೆ ಕೊಡುವುದು ಇದರಿಂದ ತಪ್ಪಿದ್ದಲ್ಲ.  ಬೈಕ್​ ವ್ಹೀಲಿಂಗ್‌​ ಮಾಡುವಂತೆ ಯುವತಿಯೇ ಹುರಿದುಂಬಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಬೈಕ್​​ ವ್ಹೀಲಿಂಗ್‌ ಮಾಡುವಾಗ ಬೈಕ್ ಸವಾರ ಮಾತ್ರ ಅಲ್ಲ ಹಿಂದೆ ಕೂತವರಿಗೂ ಧೈರ್ಯ ಬೇಕು. ಇಲ್ಲಿ ಹುಡುಗಿಯೇ ಹೆಚ್ಚು ಧೈರ್ಯ ತೋರಿಸಿದಂತೆ ಕಾಣುತ್ತದೆ. ಬೈಕ್​​ ವ್ಹೀಲಿಂಗ್‌ ಮಾಡುತ್ತಾ ಅವರ ಸರ್ಕಸ್ ನೋಡಿ (video courtesy – TV9)

ಆರೋಪಿ ನೂರ್ ಅಹಮ್ಮದ್​ನನ್ನು ಹೆಬ್ಬಾಳ ಟ್ರಾಫಿಕ್ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ತನ್ನ ಸ್ನೇಹಿತೆ ಜತೆ ನಂದಿಬೆಟ್ಟಕ್ಕೆ ತೆರಳುವಾಗ ಅಪಾಯಕಾರಿ ಬೈಕ್​ ವ್ಹೀಲಿಂಗ್​ ಮಾಡಿದ್ದ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ವಿಡಿಯೋ ನೋಡಿದ ಪೊಲೀಸರು  ಪ್ರಕರಣ ದಾಖಲಿಸಿದ್ದರು.

ಕೆಲ ದಿನಗಳ ಹಿಂದೆ ವೀಲಿಂಗ್ ವೀಡಿಯೋ ವನ್ನು ಸೋನು ಎಂಬ ಯುವತಿ ತನ್ನ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ್ದಳು. ನಂತರ ಅದು ವೈರಲಾಗಿತ್ತು. ಈ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇದೀಗ ಯುವಕ ಪೊಲೀಸ್ ಅತಿಥಿಯಾಗಿದ್ದಾನೆ.

Leave a Reply