ಚೆನ್ನೈ: ಎಂಕೆ ಸ್ಟಾಲಿನ್ ಡಿಎಂಕೆಯ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚೆನ್ನೈ ಅಣ್ಣ ಅರಿವಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಿವಂಗತರಾದ ಕರುಣಾ ನಿಧಿ ಪುತ್ರ ಸ್ಟಾಲಿನ್‍ರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲು ತೀರ್ಮಾನಿಸಲಗಿದೆ. ಡಿಎಂಕೆ 49 ವರ್ಷದ ಬಳಿಕ ಹೊಸ ಅಧ್ಯಕ್ಷನ ಆಯ್ಕೆ ಆಗಿದೆ.

ಕರುಣಾ ನಿಧಿ ನಿಧನರಾಗುವವರೆಗೂ ಕರುಣಾ ನಿಧಿ ಡಿಎಂಕೆ ಅಧ್ಯಕ್ಷರಾಗಿದ್ದರು. ಕರುಣಾ ನಿಧಿ ಅಸಖ್ಯಗೊಂಡ ಬಳಿಕ ಸ್ಟಾಲಿನ್‍ರನ್ನು ಕಾರ್ಯಾಧ್ಯಕ್ಷನಾಗಿ ನೇಮಕಗೊಳಿಸಲಗಿತ್ತು. ಸ್ಟಾಲಿನ್ ಅವಿರೋಧವಾಗಿ ಆಯ್ಕೆಗೊಂಡಿದ್ದು ಈ ತಿಂಗಳ ಏಳಕ್ಕೆ ಡಿಎಂಕೆ ಅಧ್ಯಕ್ಷರಾಗಿದ್ದ ಕರುಣಾನಿಧಿ ನಿಧನರಾಗಿದ್ದರು.

ಮುತ್ತುವೇಲ್ ಕರುಣಾ ನಿಧಿ ಸ್ಟಾಲಿನ್ ಎಂದು ಸ್ಟಾಲಿನ್‍ರ ಪೂರ್ಣ ಹೆಸರಾಗಿದೆ. 1998ರಿಂದ 2002ರವರೆಗೆ ಚೆನ್ನೈ ನಗರಸಭೆಯ 37 ನೆಮೇಯರ್ ಮತ್ತು 2009ರಿಂದ 2011ರವರೆಗೆ ತಮಿಳ್ನಾಡಿನ ಪ್ರಥಮ ಉಪಮುಖ್ಯಮಂತ್ರಿಯಾಗಿಯೂ ಸ್ಟಾಲಿನ್ ಕಾರ್ಯನಿರ್ವಹಿಸಿದ್ದಾರೆ.

Leave a Reply