ಬೀದರ್ : ಕರ್ನಾಟಕದ ಬೀದರ್‌ನ ಶಾಹೀನ್ ಸಂಸ್ಥೆಯು ನೀಟ್ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಸಂಸ್ಥೆಯ ಕಾರ್ತಿಕ್ ರೆಡ್ಡಿ 720 ಅಂಕಗಳಿಗೆ 710 ಅಂಕ ಗಳಿಸಿ ಕರ್ನಾಟಕದ ನಂಬರ್ ಒನ್ ಟಾಪರ್‌ ಆಗಿದ್ದಲ್ಲದೇ ಅಖಿಲ ಭಾರತ ಮಟ್ಟದಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ ಅರ್ಬಜ್ ಅಹ್ಮದ್ ಎಂಬ ಲಾರಿ ಚಾಲಕನ ಮಗ 700 ಅಂಕಗಳೊಂದಿಗೆ ಕರ್ನಾಟಕದ 3ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಮಾತ್ರವಲ್ಲ, ಬೀದರ್‌ನ ಶಾಹೀನ್ ಶಾಲೆಯಲ್ಲಿ ಇಂದು 340ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಉಚಿತ ವೈದ್ಯಕೀಯ ಶಿಕ್ಷಣ ಪಡೆಯಲು ಹೊರಟಿದ್ದಾರೆ. ಈ ವರ್ಷ ಮಾತ್ರವಲ್ಲದೇ ಕಳೆದ ವರ್ಷ ಸಹ ಇದೇ ಸಂಸ್ಥೆಯ 307 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉಚಿತ ವೈದ್ಯಕೀಯ ಸೀಟು ಪಡೆದಿದ್ದರು. ಕಳೆದ 5 ವರ್ಷಗಳಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಕಲಿತು ಉಚಿತ ವೈದ್ಯಕೀಯ ಸೀಟು ಪಡೆದಿದ್ದಾರೆ.

Karnataka NEET Topper Is From Shaheen College - Hubballi Times

ಬೀದರ್ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಗೆ ಬರುವ ಹಿಂದುಳಿದ ಜಿಲ್ಲೆ. ಇಲ್ಲಿ ನಾವು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಕೆಜಿಯಿಂದ ಪ್ರಾರಂಭವಾಗಿ ಪದವಿವರೆಗೂ ಶಿಕ್ಷಣ ನೀಡುತ್ತಿದ್ದೇವೆ. 7 ದೇಶಗಳ ಮತ್ತು ಭಾರತದ 25 ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ನಾವು ಜಾತಿ ಮತ ಬೇಧವೆನ್ನದೆ ಎಲ್ಲರಿಗೂ ಉತ್ತಮ ಗುಣಮಟ್ಟ ಶಿಕ್ಷಣ ನೀಡುತ್ತಿದ್ದೇವೆ ಎಂದು ತೌಸೀಫ್ ಹೇಳಿದ್ದಾರೆ.

Shaheen NEET Toppers are Expressing their joy and Happiness after Release Of NEET Result. - YouTube

ಬಾಡಿಗೆ ಕೋಣೆಯ ಮದರಸ; ಈಗ ದೇಶಾದ್ಯಂತ ಶಾಲಾ ಕಾಲೇಜುಗಳ ಬ್ರಾಂಚ್ ತೆರೆದ ಶಾಹೀನ್ ದೈತ್ಯ ಶಿಕ್ಷಣ ಸಂಸ್ಥೆ

ಕರ್ನಾಟಕದ ಉತ್ತರಕಿರುವ ದಕ್ಷಿಣ ಭಾರತದ ನಗರ ಬೀದರ್, ಹೈದರಾಬಾದ್ನಿಂದ 145 ಕಿ.ಮೀ. ದೂರದಲ್ಲಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಬಿತ್ತನೆ ಮತ್ತು ಸುಗ್ಗಿಯ ಲಯಕ್ಕೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಪ್ರಶಾಂತ ಸ್ಥಳ .

ಉಪಖಂಡದ ಆಚೆಗೆ ಇದರ ಪರಿಚಯ ಅತಿ ವಿರಳ . ಆದರೆ ಇತ್ತೀಚಿನ ವರ್ಷಗಳಲ್ಲಿ, ಇದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಖ್ಯಾತಿಯನ್ನು ನಿರ್ಮಿಸಿದೆ.ಇದು ಮೈಲುಗಳಾಚೆಗೂ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ ಮತ್ತು ಅದರಲ್ಲಿ (ಮದ್ರಸಾ) ಬೋಧಿಸುವ ಶಿಕ್ಷನ ಶಾಸ್ತ್ರವು ಅದ್ಭುತ ಫಲಿತಾಂಶಗಳನ್ನು ನೀಡುತ್ತಾ , ಸಹ ಕಾಲಮಾನದ ಶಿಕ್ಷಣ ತಜ್ಞರನ್ನು ಗೊಂದಲಕ್ಕೊಳ ಪಡಿಸುತ್ತಿದೆ .ಮದ್ರಸಾ ಕೇವಲ ಆಧುನಿಕ ವೃತ್ತಿಜೀವನಕ್ಕೆ ಮಾತ್ರ ದ್ವಾರವನ್ನ ತೆರೆದುಕೊಂಡಿಲ್ಲ ಅದರೊಂದಿಗೆ ಶಾಶ್ವತ ಮೋಕ್ಷದ ನೀರಿಕ್ಷೆಯನ್ನು ಸಹ ಬಲಪಡಿಸುತ್ತದೆ.

Madrasa to mainstream education: Bidar school churns out success stories for Urdu-speaking students - India News , Firstpost

ನಗರದ ಮೂಲೆ ಮೂಲೆಯಲ್ಲಿಯೂ ಘನತೆಯುಳ್ಳ ಶ್ರೀಮಂತ ಸೆಳವು. ನಗರದ ಭೂದೃಶ್ಯವನ್ನು ಬಿಂಬಿಸುವ ಕಿರೀಟಧಾರಿಯಾದ ಗೋಪುರಗಳು ಮತ್ತು ಅದರ ಸುತ್ತಲಿನ ಪ್ರದೇಶಗಳು ಇತಿಹಾಸದ ಮಂಜಿನಲಿ ಕರಗಿವೆ .ಲ್ಯಾವೆಂಡರ್ ಹೂವಿನ ಸೊಬಗಿನಂತೆ ಸುತ್ತುಗಟ್ಟಿರುವ ಸಂಜೆಯ ಹೊಳಪಿನಿಂದ ಕವಿಗಳು ತಮ್ಮ ಕವಿತೆಯಲಿ ಮಾಂತ್ರಿಕ ಪ್ರೇಮವನ್ನು ಹೊರತೆಗೆಯುತ್ತಾರೆ .ಈ ನೆಲವು ಇಲ್ಲಿ ವಾಸಿಸಿದ ಮಹಾನ್ ರಾಜರು ಮತ್ತು ಸಂತರ ದಂತಕತೆಗಳಿಂದ ತುಂಬಿದೆ .ಸಮಯದ ಅವಶೇಷಗಳು ಮತ್ತು ಇತಿಹಾಸದ ಹಾದಿಗಳು ನಿಧಾನವಾಗಿ ಗತ ವೈಭವದ ಅಧ್ಯಾಯಗಳನ್ನು ನೆನಪಿಗೆ ತರುತ್ತದೆ. ಅಂದರೆ ಬೀದರ್ ನಕ್ಷೆಯಲ್ಲಿ ಮಗದೊಮ್ಮೆ ಹೊರಹೊಮ್ಮಿದೆ. ಒಂದು ಕಿರಿದಾದ ಸಂದಿಯಲ್ಲಿ , ಬೀದರ್ ನ ಗೊಲೆ ಖಾನಾ ಪ್ರದೇಶದಲ್ಲಿ ಮಹ್ಮದ್ ಗವಾನ್ (1472) ನ 15 ನೆಯ ಶತಮಾನದ ಮದರಸಕ್ಕೆ ಎದುರಾಗಿ ಶಾಹೀನ್ ಶಾಲೆ, ರೋಮಾಂಚಕ ಶೈಕ್ಷಣಿಕ ಕ್ರಾಂತಿಯ ಪ್ರಮುಖ ಸಂಸ್ಥೆ ಅದರ ತರಂಗಗಳು ದೇಶಾದ್ಯಂತ ಸಾವಿರಾರು ಜೀವಗಳನ್ನು ಸ್ಪರ್ಶಿಸುತ್ತಿವೆ. ತಾತ್ಕಾಲಿಕ ಮತ್ತು ಆಧ್ಯಾತ್ಮಿಕ ಶಿಕ್ಷಣದ ಮಿಶ್ರಣವನ್ನು ಬಯಸುತ್ತಿರುವ ಪಾಲಕರು ಮುಖ್ಯವಾಹಿನಿಯ ಸಂಸ್ಥೆಗಳ ನಡುವೆ ಇದನ್ನು ಆರಿಸಿಕೊಳ್ಳುತ್ತಿದ್ದಾರೆ.ಈ ಸಂಸ್ಥೆಯ ಅನನ್ಯ ಕೊಡುಗೆಗಳಲ್ಲಿ ಬ್ರಿಡ್ಜ್ ಕೋರ್ಸ್ ಒಂದು ,ಮದ್ರಸಾ ತೇರ್ಗಡೆಯಾದವರನ್ನು ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಲು ಸಜ್ಜುಗೊಳಿಸುವುದು .ಇದು ‘ಮದ್ರಸಾದಿಂದ ವಿಜ್ಞಾನ ಪ್ರಯೋಗಾಲಯಕ್ಕೆ ಒಂದು ಸಣ್ಣ ಜಿಗಿತ ‘ ಎಂದು ಪ್ರಸಿದ್ಧವಾಗಿದೆ.

ಅಬ್ದುಲ್ ಖದೀರ್ 58, ವೃತ್ತಿಯಲ್ಲಿ ಎಂಜಿನಿಯರ್ ,1989 ರಲ್ಲಿ 18 ವಿದ್ಯಾರ್ಥಿಗಳೊಂದಿಗೆ ಒಂದು ಕೋಣೆಯ ಬಾಡಿಗೆ ಪಡೆಯುವ ಮೂಲಕ ತನ್ನ ಸಂಸ್ಥೆಯನ್ನು ಪ್ರಾರಂಭಿಸಿದಾಗ ,ಅವರ ಈ ಪ್ರಯತ್ನವು ಒಂದು ವಿಶಿಷ್ಟವಾದ ಶೈಕ್ಷಣಿಕ ಕ್ರಾಂತಿಯ ಮುಂಗಾಮಿಯಾಗಿ ಮಾರ್ಪಡಬಹುದೆಂದು ಅವರು ಎಂದಿಗೂ ಊಹಿಸಿರಲಿಲ್ಲ. ಯಾರೂ ಎನಿಸಿರಲೂ ಇಲ್ಲ.

“ಪ್ರತಿಯೊಬ್ಬರಿಗೂ ಪ್ರವೇಶಿಸಬಹುದಾದ ಕಲಿಕೆಯ ಆದರ್ಶ ಸ್ಥಳವನ್ನು ರೂಪಿಸುವ ” ಉದ್ದೇಶದೊಂದಿಗೆ ಈ ಚಳುವಳಿ ಶೈಕ್ಷಣಿಕ ಶ್ರೇಷ್ಠತೆಯ ಪ್ರಮುಖ ಕೇಂದ್ರವಾಗಿ ಮತ್ತು ಆಧುನಿಕ ಕಲಿಕೆಯ ಸಂಕೇತವಾಗಿ ರೂಪುಗೊಂಡು .ಸುಮಾರು 400 ಶಿಕ್ಷಕರಿಂದ ಮೇಲ್ವಿಚಾರಣೆ ಮಾಡಲ್ಪಟ್ಟು 11000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಮುಟ್ಟಿದೆ ,ಅವರೆಲ್ಲರು ಜ್ಞಾನ ಸಂಪತ್ತಿನ ಸೃಷ್ಟಿಗಾಗಿ ತೊಡಗಿಕೊಂಡವರು .ಈ ಜಾಲವು ಒಂಭತ್ತು ಶಾಲೆಗಳು 16 ಪದವಿಪೂರ್ವ ಮತ್ತು ಪದವಿ ಕಾಲೇಜುಗಳನ್ನು ಹಲವಾರು ನಗರಗಳಲ್ಲಿ ಹೊಂದಿದೆ .ಅವರು ಕಳೆದ 15 ವರ್ಷಗಳಲ್ಲಿ 900 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ವೈದ್ಯರನ್ನಾಗಿಸಲು ಶಕ್ತರಾಗಿದ್ದಾರೆ.

Rajyotsava Award-2013

ಮುಸ್ಲಿಮರಿಗೆ ಇಂತಹ ಸಂಸ್ಥೆಯ ಅಗತ್ಯವಿದೆ.ಅವರು ಭಾರತದ ಜನಸಂಖ್ಯೆಯ 14% ಒಳಗೊಂಡಿದ್ದಾರೆ ಆದರೆ ಅನಕ್ಷರತೆ ದರ (42.7%) ಅತ್ಯಧಿಕ ,ಉನ್ನತ ಶಿಕ್ಷಣದಲ್ಲಿ ಕಡಿಮೆ ಮಟ್ಟದ ದಾಖಲಾತಿ (4.4%) ಸರಕಾರಿ ಉದ್ಯೋಗಳಲ್ಲಿ (ಔಪಚಾರಿಕ ) ಅತೀ ಕಡಿಮೆ ಪಾಲು, ಸರ್ಕಾರಿ ಉದ್ಯೋಗಗಳು ಸೇರಿದಂತೆ ಶಾಲೆಯ ಮತ್ತು ವಿಶ್ವವಿದ್ಯಾನಿಲಯದ ಹುದ್ದೆಗಳು (4.9%), ಇತರರಿಗಿಂತ ಕಡಿಮೆ ಆದಾಯ ,ಹಣಕಾಸಿನ ಪ್ರಪಂಚದಿಂದ ಹೆಚ್ಚು ಹೊರಗಿಡಲ್ಪಟ್ಟವರು , ಮತ್ತು ಕೆಲವೇ ಕೆಲವು ವರ್ಷಗಳನ್ನು ಮಾತ್ರ ಶಾಲೆಯಲ್ಲಿ ಕಳೆಯುವವರು .ಭಾರತದ ಜೈಲಿನಲ್ಲಿ 40% ದಷ್ಟು ಪಾಲನ್ನು ಮುಸ್ಲಿಮರು ಹೊಂದಿರುವುದು ಖೇದಕರ .

ಖದೀರ್ ,ಅಲಿಘಢ್ ಮುಸ್ಲಿಮ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಸರ್ ಸೈಯದ್ ಅಹ್ಮದ್ ರಚಿಸಿದ ಆಧುನಿಕ ಉದಾರವಾದಿ ಮುಸ್ಲಿಂ ಶಿಕ್ಷಣದ ಸರಪಳಿಯ ಹಲವಾರು ಕೊಂಡಿಗಳಲ್ಲಿ ಒಬ್ಬರು ,ಸರ್ ಸೈಯದ್ ಈಗಿನ ಯುಗಕ್ಕೆ ಮತ್ತು ಕಾಲದ ಉತ್ಸಾಹಕ್ಕೆ ಅನುಗುಣವಾಗಿಲ್ಲದ ಮದ್ರಸಾ ಪಠ್ಯಕ್ರಮವನ್ನು ಮನಗಂಡರು .ನೈಜ ತಿಳುವಳಿಕೆಗಿಂತ ಹೆಚ್ಚಾಗಿ ಮನ:ಪಠಣವನ್ನು ಪ್ರೋತ್ಸಾಹಿಸುವುದನ್ನು ಅವರು ಟೀಕಿಸಿದರು.

ಜಾತ್ಯತೀತ ಮುಸ್ಲಿಂ ಶಿಕ್ಷಣಜ್ಞರು ಹೆಚ್ಚಿನ ಮದ್ರಸಾಗಳಲ್ಲಿ ಪಠ್ಯಕ್ರಮವು ಪಳೆಯುಳಿಕೆಯಾಗಿರುವುದನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಅಂದಗೊಳಿಸುವ ಬದಲಾವಣೆಗಳಿಂದ ಅದನ್ನು ಸುಧಾರಿಸಲಾಗುವುದಿಲ್ಲ. ಸದೃಶ ಕೆಲವು ಪಠ್ಯಗಳನ್ನು ತಿರುಚುವುದು ಅಥವಾ ಕೆಲವು ಕಂಪ್ಯೂಟರ್ಗಳನ್ನು ಅಳವಡಿಸಿದಂತೆ .ಮದ್ರಾಸಗಳು ಭೌತಿಕ ಮತ್ತು ಬೌದ್ಧಿಕ ಸಂಪನ್ಮೂಲಗಳನ್ನು ಒದಗಿಸಬೇಕು-ಮತ್ತು ಅತ್ಯಂತ ಪ್ರಮುಖವಾದುದು -ಸಾಂಸ್ಕೃತಿಕ ಮನೋಧರ್ಮ,ಹೆಚ್ಚು ಸ್ಪರ್ಧಾತ್ಮಕ ಆಧುನಿಕ ಪ್ರಪಂಚದ ಸಂಕೀರ್ಣ ಬೇಡಿಕೆಗಳಿಗಾಗಿ ತಮ್ಮ ವಿದ್ಯಾರ್ಥಿಗಳನ್ನು ತಯಾರುಗೊಳಿಸಲು . ಮದ್ರಸಾಗಳಲ್ಲಿ ಅತ್ಯಂತ ಸಾಧಿಸಿದ ಆಧುನಿಕ ಪರಿಣಾಮಗಳಲ್ಲಿ ಒಂದಾದ ,ಇಬ್ರಾಹಿಂ ಮೂಸಾ ಎವರ್ಸ್:” ಕೆಲವರು ಬಳಸಿದ ಪಠ್ಯಗಳು ಪುನರಾವರ್ತಿತವಾಗುತ್ತವೆ ಮತ್ತು ಕೆಲವು ಸಮಯಗಳಲ್ಲಿ ತೂರಲಾಗುವುದಿಲ್ಲ ಎಂಬ ಆರೋಪವನ್ನು ಮರುಬಳಕೆ ಮಾಡಲು ಸಮರ್ಥರಾಗಿದ್ದಾರೆ,ಅವರನ್ನು ನಿಪುಣರನ್ನಾಗಿಸಲು ತಮ್ಮ ಜೀವನವನ್ನು ಸವೆಸಿದ ವಿದ್ವಾಂಸರನ್ನು ಊಹಿಸಿಕೊಳ್ಳಿ ವಾಸ್ತವವಾಗಿ ಹೆಚ್ಚಿನ ಪಠ್ಯಗಳು ನಿರಾಶೆಯಿಂದ ಕೂಡಿರುತ್ತವೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಾಯಕ್ಕಾಗಿ ವ್ಯಾಖ್ಯಾನಗಳನ್ನು ಮತ್ತು ಮಹಾ -ವ್ಯಾಖ್ಯಾನಗಳನ್ನು ಹುಡುಕುವಂತೆ ಒತ್ತಾಯಿಸುತ್ತವೆ .

Photo

ಐತಿಹಾಸಿಕವಾಗಿ, ಮದ್ರಸಾಗಳು ಪಾಶ್ಚಿಮಾತ್ಯ ಶಿಕ್ಷಣದ ಪ್ರಾರಂಭದಿಂದಾಗಿ ತಮ್ಮ ಪ್ರಾಮುಖ್ಯತೆ ಕಡಿಮೆಯಾಗುವವರೆಗೂ ಉನ್ನತ ಶಿಕ್ಷಣದ ಕೇಂದ್ರಗಳಾಗಿದ್ದವು .ಅದು ಇಸ್ಲಾಮೀ ನಾಗರಿಕತೆಯ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ .ಅದು ಕಲಿಕಾ ವ್ಯವಸ್ಥೆಯ ಶಕ್ತಿಶಾಲಿ ಗ್ರಂಥಿಗಳುಮತ್ತು ನ್ಯಾಯಶಾಸ್ತ್ರ, ತತ್ವಶಾಸ್ತ್ರ, ಖಗೋಳ ವಿಜ್ಞಾನ, ಧರ್ಮ, ಸಾಹಿತ್ಯ ಮತ್ತು ಔಷಧಿಗಳಂತಹಾ ವೈವಿಧ್ಯಮಯ ಕ್ಷೇತ್ರಗಳಲ್ಲಿ ಹಲವಾರು ಕ್ರಾಂತಿಕಾರಿ ಸಾಧನೆಗಳ ಮುನ್ಸೂಚಕಗಳು .ಇಸ್ಲಾಂನ ಸುವರ್ಣ ಯುಗವು ಇಳಿಮುಖವಾಗಲು ಪ್ರಾರಂಭವಾದಾಗ ಮಾತ್ರ ಮದ್ರಸಾಗಳು ತಮ್ಮ ಶೈಕ್ಷಣಿಕ ಮತ್ತು ಬೌದ್ಧಿಕ ಪರಿಶುದ್ಧತೆಯನ್ನು ಕಳೆದುಕೊಂಡಿತು , ಮತ್ತು ಅವುಗಳ ಹುರುಪು ಮತ್ತು ಪ್ರಸ್ತುತತೆಯನ್ನು ಮತ್ತು ಪಾಶ್ಚಾತ್ಯ-ಆಧಾರಿತ ಶಿಕ್ಷಣಕ್ಕೆ ಪ್ರಧಾನ ಸ್ಥಳವನ್ನು ಬಿಟ್ಟುಕೊಟ್ಟಿತು.

ಖದೀರ್ ತನ್ನ ಸಕ್ರಿಯ ಜೀವನವನ್ನು ಸಾಂಪ್ರದಾಯಿಕ ಮತ್ತು ಆಧುನಿಕ ಶಿಕ್ಷಣದ ನಡುವಿನ ವಿಭಜನೆಗೆ ಸೇತುವೆ ನಿರ್ಮಿಸಲು ವ್ಯಯಿಸಿದ್ದಾರೆ . ಅವರ ಶಾಲೆಗಳು ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ಇತಿಹಾಸದಂತಹ ಜಾತ್ಯತೀತ ವಿಷಯಗಳ ಜೊತೆಗೆ ಶಾಸ್ತ್ರೀಯ ಇಸ್ಲಾಮೀ ಗ್ರಂಥಗಳನ್ನು ಕಲಿಸುತ್ತದೆ ಅವರ ಅನನ್ಯ ನಾವೀನ್ಯತೆಗಳಲ್ಲೊಂದು ಬ್ರಿಡ್ಜ್ ಕೋರ್ಸ್ ..ಎಂಟನೇ ಮತ್ತು ಒಂಬತ್ತನೇ ತರಗತಿಗೆ ಸೇರ್ಪಡೆಗೊಂಡ 14 ರಿಂದ 17 ವಯಸ್ಸಿನ ಹಾಫಿಝ್ಗಳು . 10 ತಿಂಗಳ ಬ್ರಿಡ್ಜ್ ಕೋರ್ಸ್ ಮೂಲಕ ಕನ್ನಡ, ಇಂಗ್ಲೀಷ್, ಗಣಿತ, ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನಗಳನ್ನು ಕಲಿಯಬಹುದು.ನಂತರ, ಅವರು ಎಸ್ಎಸ್ಎಲ್ಸಿ ಬೋರ್ಡ್ ಎದುರಿಸಲು ತಯಾರಾಗುತ್ತಾರೆ . ಕುರಾನಿನ ಎಲ್ಲಾ 6,236 ಶ್ಲೋಕಗಳನ್ನು ನೆನಪಿಸಿಕೊಂಡ ಮುಸ್ಲಿಮನು ಹಾಫಿಝ್ ಎಂದು ಕರೆಯುವ ಹಕ್ಕನ್ನು ಗಳಿಸುತ್ತಾನೆ.

Karnataka Award 2017

ಅಬೂ ಸುಫಿಯಾನ್ ವೈದ್ಯ ಮತ್ತು ಶಹೀನ್ ನ ಉತ್ಪನ್ನ ,ಹೆಮ್ಮೆಯಿಂದ ಹೇಳುತ್ತಾರೆ ಅವರು ಭವಿಷ್ಯದ ರೋಗಿಗಳಿಗೆ ಆಧ್ಯಾತ್ಮಿಕ ಮತ್ತು ಭೌತಿಕ ಚಿಕಿತ್ಸೆ-ದವಾ ಮತ್ತು ದುವಾ (ಔಷಧಿ ಮತ್ತು ಪ್ರಾರ್ಥನೆ) ಎರಡನ್ನೂ ನೀಡಲು ಸಾಧ್ಯ. ರಾಯಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಎರಡನೇ ವರ್ಷದ ಎಂ ಬಿ ಬಿ ಎಸ್ ವಿದ್ಯಾರ್ಥಿ ಅವರು ಖುರಾನ್ನನ್ನು ಮನಃಪಠಣ ಮಾಡಿದ ‘ಹಾಫಿಝ್ ‘, “ನಾನು ಹೈಸ್ಕೂಲ್ನಲ್ಲಿ ಸೇರಿದಾಗ, ನನಗೆ ಹೊಂದದ ಮಣ್ಣಿಗೆ ಬಂದಿದ್ದೇನೆ ಎಂದು ಅನಿಸಿತು .ಬಹಳ ಪ್ರಯಾಸದೊಂದಿಗೆ ನನ್ನ ಬೇರುಗಳನ್ನು ನಾನು ಕಂಡುಕೊಳ್ಳಬಲ್ಲೆ .ಆದರೆ ನಾನು ಉತ್ತಮ ಅಂಕಗಳನ್ನು ಗಳಿಸಲು ಸಫಲನಾದೆ .ಇಲ್ಲಿನ ನನ್ನ ವಾಸ್ತವ್ಯವು ಜೀವನ ಪರಿವರ್ತಕವಾಗಿ ಬದಲಾಯಿತು.”ಎಂದು ಅವರು ಹೇಳುತ್ತಾರೆ .’ಶಿಸ್ತುಬದ್ಧ ಮದ್ರಸಾ ಜೀವನ’ ಅವರಿಗೆ ಪದವಿ ಪೂರ್ವದಲ್ಲಿ ಉತ್ತಮ ಶ್ರೇಣಿಗಳನ್ನು ಮತ್ತು ವೈದ್ಯಕೀಯ ಕಾಲೇಜು ಸೀಟು ಪಡೆಯಲು ನೆರವಾಯಿತು.ಅವರು ಹೇಳುತ್ತಾರೆ “”ಎಂಜಿನಿಯರಿಂಗ್ ನ ಮೂಲಭೂತ ತತ್ತ್ವಗಳು ಕುರ್ಆನ್ ಮಹತ್ವ ನೀಡಿದ , ಪ್ರಕೃತಿಯ ಆರೋಗ್ಯಪೂರ್ಣ ಅಧ್ಯಯನವೆಂದು ನಾನು ಅರ್ಥ ಮಾಡಿಕೊಂಡಿದ್ದೇನೆ.”
“ಅನುಭವಗಳು ಸಮಾಜದಿಂದ ಪ್ರತ್ಯೇಕಿಸಲಾರವು .ನೂರಾರು ಮದ್ರಸಾ ಪದವೀಧರರು ಈಗ ಮುಖ್ಯವಾಹಿನಿ ಕಾಲೇಜುಗಳಲ್ಲಿದ್ದಾರೆ.ಆರೋಗ್ಯಕರ ಶಿಕ್ಷಣ ಹೊಂದಿರುವ ಯುವಕರು ದಾರಿ ತಪ್ಪುವ ಸಾಧ್ಯತೆ ಕಡಿಮೆ.ಆಧುನಿಕ ಪ್ರಪಂಚದ ಸರಿಯಾದ ತಿಳುವಳಿಕೆ ಮತ್ತುಪ್ರಸ್ತುತ ಜ್ಞಾನದ ಮಾನ್ಯತೆ ಯುವಕರನ್ನು ತಪ್ಪು ಪ್ರಭಾವವನ್ನು ತಡೆದುಕೊಳ್ಳುವಲ್ಲಿ ಸಜ್ಜುಗೊಳಿಸುತ್ತದೆ,”ಎಂದು ಖದೀರ್ ಹೇಳುತ್ತಾರೆ.

Doctorate

“ನಾವು ಉಲೇಮಾಗಳಿಂದ ಸಾಕಷ್ಟು ಸಂದೇಹವಾದವನ್ನು ಎದುರಿಸಿದ್ದೇವೆ, ಆದರೆ ನಾವು ಮುಂದುವರಿದೆವು ,ಮತ್ತು ಅದಕ್ಕೆ ಬೆಲೆ ಸಿಕ್ಕಿತು .ಈಗ ,ಇಹ ಪರದಲ್ಲಿ ಅತ್ಯುತ್ತಮವಾದುದನ್ನು ಸಾಧಿಸಲು ನಾವು ಯುವಕರಿಗೆ ತರಬೇತಿ ನೀಡುತ್ತಿದ್ದೇವೆಂದು ಅವರು ಅರಿತುಕೊಂಡರು”

ಶಾಹಿನ್ ಕಾಲೇಜಿನ ವಚನ ಶ್ರೀ ಪಾಟೀಲ್ ಅವರು 2016 ರ ವೈದ್ಯಕೀಯ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ .ಅವರು ಭಾರತೀಯ ಔಷಧ ಮತ್ತು ಹೋಮಿಯೋಪತಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ , ಪಶುವೈದ್ಯ ವಿಜ್ಞಾನದಲ್ಲಿ ಮೂರನೇ ಸ್ಥಾನ, ಬಿ. ಫಾರ್ಮಾದಲ್ಲಿ ಒಂಭತ್ತನೇ ಸ್ಥಾನ ಮತ್ತು ಬಿಎಸ್ಸಿ 18ನೇ ಸ್ಥಾನ ಪಡೆದುಕೊಂಡಿದ್ದಾರೆ .

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್ 2018) ಪರೀಕ್ಷೆಯನ್ನು ಭೇದಿಸಿದ 300 ಕ್ಕಿಂತ ಹೆಚ್ಚು ಶಾಹಿನ್ ವಿದ್ಯಾರ್ಥಿಗಳು ಭಾರತದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.2017 ರಲ್ಲಿ ವಿವಿಧ ವೈದ್ಯಕೀಯ ಕಾಲೇಜುಗಳಿಗೆ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಹೇನ್ ತಂಡ ಕಳುಹಿಸಿದೆ.2016 ರಲ್ಲಿ 152, 2015 ರಲ್ಲಿ 111, 2014 ರಲ್ಲಿ 93, 2013 ರಲ್ಲಿ 89 ಮತ್ತು 2012 ರ ಅದರ ಮೊದಲ ತಂಡದಲ್ಲಿ 71.

ಉತ್ತರ ಪ್ರದೇಶದ ಗೋರಖ್ಪುರದ ವಹೀದ್ ಅಬ್ದುಲ್ಲಾ 2018 ರಲ್ಲಿ 300 ಅರ್ಹ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.ಅವರು ಹಫಿಜ್-ಇ-ಖುರಾನ್ ಮತ್ತು ಎಂದಿಗೂ ಶಾಲೆಗೆ ಹೋಗಿರಲಿಲ್ಲ .ಅವರು ಶಹೀನ್ ನ ಬೀದರ್ ಕೇಂದ್ರದಲ್ಲಿ ಉಚಿತ ತರಬೇತಿಯನ್ನು ಪಡೆದರು ಮತ್ತು ಅಖಿಲ ಭಾರತ ಶ್ರೇಣಿ (AIR) 95 ನ್ನೂ ಪಡೆದುಕೊಳ್ಳಲು ಒಟ್ಟು 720 ಅಂಕಗಳಲ್ಲಿ 659 ಅಂಕಗಳನ್ನು ಗಳಿಸಿದರು. ಅವರ ಜೊತೆಗೆ ಹದಿಮೂರು ಹಾಫಿಝ್ ಗಳು ಸಹ ಶ್ರೇಣಿ ಪಡೆದುಕೊಂಡಿದ್ದಾರೆ .ಕಳೆದ 4 ವರ್ಷಗಳಿಂದ ಕನಿಷ್ಠ 40 ಹಾಫಿಝ್ ಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯನ್ನು ಭೇದಿಸಿದ್ದಾರೆ.

ಅಝೀo ಖುರೇಷಿಯ ಕುಟುಂಬವು ಮತ್ತೊಂದು ಅದ್ಭುತ ಉದಾಹರಣೆ. ಅವರು ಬೀದರ್ನ ಕಟುಕ (ಖುರೇಷಿ) ಸಮುದಾಯಕ್ಕೆ ಸೇರಿದ್ದಾರೆ.ಅವರ ಮೂವರು ಪುತ್ರಿಯರಾದ ಇಶ್ರತ್ ಫಾತಿಮಾ, ನಾಝಿಯಾ ಸುಲ್ತಾನ ಮತ್ತು ಮೆಹ್ರೆನ್ ಫಾತಿಮಾ ಶಹೀನ್ ನ ಹಳೆವಿದ್ಯಾರ್ಥಿಗಳು ಅವರು ಎಂಬಿಬಿಎಸ್ ಸ್ಥಾನಗಳನ್ನು ಭದ್ರಪಡಿಸುವ ಮೂಲಕ ಅಂತ್ಯ ಹಾಡಿದರು.ಇಶ್ರತ್ ಫಾತಿಮಾ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಎಸ್ ಮಾಡಿದ್ದಾರೆ ಮತ್ತು ನಾಝಿಯ ಫಾತಿಮಾ ಅವರು ರೋಗಲಕ್ಷಣ ಶಾಸ್ತ್ರ (ಪ್ಯಾಥಾಲಜಿ)ದಲ್ಲಿ ಎಂಡಿ ಮಾಡುತ್ತಿದ್ದಾರೆ.ಇಶ್ರತ್ ಫಾತಿಮಾ ಈ ಕೋರ್ಸ್ ನ ವಿದ್ಯಾರ್ಥಿಯಾಗಿದ್ದರು. ಹಾಫಿಝ ( ಮಹಿಳಾ ಹಾಫಿಝ್ ),ಇಶ್ರತ್ ಶಾಹೀನ್ಗೆ ಮರಳಿದರು ಮತ್ತು ಅಂತಿಮವಾಗಿ ಅವರ ವೈದ್ಯಕೀಯ ಪರಿಣತಿಯನ್ನು ಪೂರ್ಣಗೊಳಿಸಲು ಹೋದರು .ಅವರು ಈಗ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ವೈದ್ಯಕೀಯ ಕಾಲೇಜಿನಲ್ಲಿ ಭೋದಿಸುತ್ತಿದ್ದಾರೆ .
“ನನ್ನ ಹಿಫ್ಝ್ ಮುಗಿದ ನಂತರ, ನಾನು ಮದುವೆಯಾಗಲು ಅಗತ್ಯವಾದಂತೆ ಮೆಟ್ರಿಕ್ಯುಲೇಷನ್ ಅನ್ನು ತೇರ್ಗಡೆ ಹೊಂದುವ ಉದ್ದೇಶದಿಂದ ಶಾಹನ್ಗೆ ಸೇರಿಕೊಂಡೆ.”

ಮದ್ರಸಾಗಳು ಮತ್ತು ಮಸೀದಿಗಳು ಮುಸ್ಲಿಂ ಸಮುದಾಯದ ಪ್ರಮುಖ ಲಕ್ಷಣವಾಗಿದೆ ಮತ್ತು ಸಮುದಾಯದ ಒಗ್ಗಟ್ಟು ಮತ್ತು ಏಕೀಕರಣವನ್ನು ಬಲಪಡಿಸುತ್ತದೆ. ಅವು ಪ್ರಮುಖವಾಗಬಹುದು ,ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಏಕೀಕರಣವನ್ನು ತೊಡಗಿಸಿಕೊಳ್ಳುವಲ್ಲಿ ಮತ್ತು ಪ್ರಮುಖವಾಗಿದೆ .ಸಮಕಾಲೀನ ಅವಧಿಗೆ ಸಂಬಂಧಿಸಿದಂತೆ ಅವುಗಳನ್ನು ಪ್ರಸ್ತುತ ಪಡಿಸಲು ನಮಗೆ ಒಂದು ಸಂಯೋಜಿತ ತಂತ್ರದ ಅಗತ್ಯವಿದೆ . ಖದೀರ್ ನಂತವರು ಶಹೀನ್ನಲ್ಲಿ ಪ್ರತಿರೂಪದ ಮಾದರಿಯನ್ನು ಪ್ರಸ್ತುತಪಡಿಸಿದ್ದಾರೆ. ಬೇರೆಡೆ ಮದ್ರಾಸ್ಗಳು ಶಹೀನ್ ನ ಪುಸ್ತಕದಿಂದ ಎಲೆಯೊಂದನ್ನು ತೆಗೆದುಕೊಳ್ಳಬೇಕಾಗಿದೆ .

ಮಾದರಿಗಿಂತಲೂ ಹೆಚ್ಚಾಗಿ ಖದೀರ್ ನಂತಹ ನಾಯಕರ ವರ್ಚಸ್ಸೂ ಸಂಸ್ಥೆಯಲ್ಲಿ ಶಕ್ತಿ ತುಂಬುತ್ತದೆ ಎಂಬುವುದು ಸತ್ಯವಾಗಿದೆ .ಆದರೆ ಈ ಮದರಸವು ನಿಸ್ಸಂಶಯವಾಗಿ ಮಸ್ಲಿಮರ ನಿವರ್ಣ ಶೈಕ್ಷಣಿಕ ದಿಗಂತದಲಿ ಮೂಡಿದ ಬೆಳ್ಳಿ ಗೆರೆಯಾಗಿದೆ .ಸಮುದಾಯದ ಸ್ವಂತ ನ್ಯೂನತೆಗಳನ್ನು ಇತರರ ಮೇಲೆ ಸುಲಭವಾಗಿ ಹೇರಲಾಗುವುದಿಲ್ಲ ಎಂಬುದು ನಾವು ಕಲಿಯಬೇಕಾದ ಪಾಠ.

ಮಾದರಿಗಿಂತಲೂ ಹೆಚ್ಚಾಗಿ ಖದೀರ್ ನಂತಹ ನಾಯಕರ ವರ್ಚಸ್ಸೂ ಸಂಸ್ಥೆಯಲ್ಲಿ ಶಕ್ತಿ ತುಂಬುತ್ತದೆ ಎಂಬುವುದು ಸತ್ಯವಾಗಿದೆ . ಈ ಮದರಸವು ನಿಶಂಶಯವಾಗಿ ಮಸ್ಲಿಮರ ನಿವರ್ಣ ಶೈಕ್ಷಣಿಕ ದಿಗಂತದಲಿ ಮೂಡಿದ ಬೆಳ್ಳಿ ಗೆರೆಯಾಗಿದೆ .ಸಮುದಾಯದ ಸ್ವಂತ ನ್ಯೂನತೆಗಳನ್ನು ಇತರರ ಮೇಲೆ ಸುಲಭವಾಗಿ ಹೇರಲಾಗುವುದಿಲ್ಲ ಎಂಬುದು ನಾವು ಕಲಿಯಬೇಕಾದ ಪಾಠ.

ಸರ್ ಮುಹಮ್ಮದ್ ಇಕ್ಬಾಲ್ ಶ್ರೇಷ್ಠ ತತ್ವಜ್ಞಾನಿ ಕವಿ ,ಸದಾ ಕ್ರಿಯಾತ್ಮಕ ಮತ್ತು ಚಲನಶೀಲ ; ಅವರ ದೃಷ್ಟಿಯಲ್ಲಿ ಮುಚ್ಚಿದ ದೇವತಾಶಾಸ್ತ್ರವು ಕೇವಲ ಅನುಕರಣೆಗೆ ಮಾತ್ರವಲ್ಲ.ಇಸ್ಲಾಂ ಪ್ರವಾದಿತ್ವದ ಅಂತ್ಯವನ್ನು ಮಾತ್ರ ಗುರುತಿಸಿದೆ, ಮಾನವ ಬುದ್ಧಿವಂತಿಕೆಯನ್ನಲ್ಲ .ಶಿಬ್ಲಿ ನುಮಾನಿ, ಮದ್ರಸಾ ವಲಯಗಳಲ್ಲಿನ ಇಪ್ಪತ್ತನೇ ಶತಮಾನದ ಹೆಸರಾಂತ ವಿದ್ವಾಂಸ ಸ್ವತಃ ಈ ರೀತಿ ಹೇಳುತ್ತಾರೆ :”ನಾವು ಮುಸ್ಲಿಮರಿಗೆ , ಇಂಗ್ಲಿಷ್ [ಆಧುನಿಕ] ಶಿಕ್ಷಣ ಕೇವಲ ಸಾಕಾಗುವುದಿಲ್ಲ, ಅಥವಾ ಹಳೆಯ ಅರೆಬಿಕ್ ಮದ್ರಾಸ ಶಿಕ್ಷಣವು ಸಾಕಾಗದು . ನಮ್ಮ ಕಾಯಿಲೆಗೆ ಅಗತ್ಯವಿರುವುದು ‘ಸಂಯುಕ್ತ ಸರ್ವ ರೋಗ ನಿರೋಧಕ ಔಷಧಿ’ ‘ (ಮಾಂಜು-ಐ ಮರುಕಾಬ್) -ಒಂದು ಭಾಗ ಪೂರ್ವ ಮತ್ತು ಇನ್ನೊಂದು ಪಶ್ಚಿಮದ ಅಗತ್ಯವಿದೆ. ”

ಮದರಸ , ಖದೀರ್ ರವರು ನಡೆಸುವಂತಹ ,ಆಧುನಿಕ ಪ್ರಪಂಚದ ಸವಾಲುಗಳನ್ನು ಎದುರಿಸಲು ಸುಸಜ್ಜಿತವಾದ ಬುದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಶಾಸ್ತ್ರೀಯ ಮತ್ತು ಆಧುನಿಕ ವಿಜ್ಞಾನದಲ್ಲಿ ಮತ್ತು ಜಾತ್ಯತೀತ ಮತ್ತು ಧಾರ್ಮಿಕ ಚಿಂತನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾರಣ, ಅವರು ಧರ್ಮಗ್ರಂಥದ ವಿರೂಪಗಳನ್ನು ಗುರುತಿಸುವಲ್ಲಿ ಸಮರ್ಥರಾಗಿದ್ದಾರೆ.ಅವರು ತಮ್ಮ ಸಮುದಾಯಗಳು ಮತ್ತು ಮುಖ್ಯವಾಹಿನಿಯ ಸಮಾಜಕ್ಕೆ ಮತ್ತು ಅವರ ಸ್ಥಿರ ಗುರುತಿಗೆ , ಧಾರ್ಮಿಕತೆಗೆ ಸಂಪರ್ಕ ಸಾದಿಸಲು ಮತ್ತು ತೀವ್ರಗಾಮಿತ್ವದಿಂದ ಅವರನ್ನು ರಕ್ಷಿಸಿಕೊಳ್ಳುವ ಒಲವನ್ನು ಹೊಂದಿದ್ದಾರೆ .ಆಧುನಿಕತೆಯೆಡೆಗೆ ಭಾರತದ ಪರಿವರ್ತನೆಗೆ ಈ ಮದರಸಗಳು ಪ್ರಬಲ ಮೈತ್ರಿಗಳಾಗಿವೆ .

ಜಾಮೀಯಾ ಮಿಲಿಯಾ ಇಸ್ಲಾಮಿಯಾ ಸಂಸ್ಥಾಪಕರು ಅದರ ವಿದ್ಯಾರ್ಥಿಗಳಿಗೆ ಹಾಡಲು ಬರೆದಿರುವಾ ಅಧಿಕೃತ ಗೀತೆ :

ಇಲ್ಲಿ ಮಾತ್ರ ಆತ್ಮಸಾಕ್ಷಿ ಸಂಕೇತ . .
ಇದು ಅನೇಕ ನಂಬಿಕೆಗಳ ಮೆಕ್ಕಾ,
ವಿಶ್ವಾಸದ ಯಾತ್ರೆ , ಪಾವಿತ್ರ್ಯತೆಯಲಿ ವಿರಮಿಸುತ ,
ಪ್ರವಾಹದ ವಿರುದ್ಧ ಸೀಳುವಿಕೆ ಇಲ್ಲಿನ ನಂಬಿಕೆ,
ಆನಂದ ಅಡಗಿರುವುದು ಅಡ್ಡತೆರೆಗಳನ್ನ ಎದುರಿಸುವಲ್ಲಿ
ಇದು ನನ್ನ ವರ್ಷಾಂತ್ಯದ ಮನೆ
ಇದು ನನ್ನ ಕನಸಿನ ನೆಲ . “
ಈ ಉದಾತ್ತ ಚಿಂತನೆಯು ಪ್ರತಿ ಮುಸ್ಲಿಂನಿಗೂ ವಿಶ್ವಾಸದ ಮಾರ್ಗದರ್ಶಿಯಾಗಿ ಉಳಿಯುತ್ತದೆ.

ಮೊಯಿನ್ ಕಾಝಿ :ಮುಸ್ಲಿಂ ಮಿರರ್
ಕನ್ನಡಕ್ಕೆ : ಆಯಿಷತುಲ್ ಅಫೀಫಾ

ಇದು ನಮ್ಮ ಊರು ವಿಶೇಷ ಲೇಖನ

Leave a Reply