ಚೆನ್ನೈ: ತಮಿಳ್ನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿ ಹೈಕೋರ್ಟು ಆದೇಶ ನೀಡಿದೆ. ಡಿಎಂಕೆ ಸಲ್ಲಿಸಿದ ಅರ್ಜಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಗೆ ಆದೇಶಿಸಲಾಗಿದೆ.

ತನಿಖೆ ನಡೆಸಿ ಮೂರು ತಿಂಗಳೊಳಗೆ ಪ್ರಾಥಮಿಕ ವರದಿ ಸಲ್ಲಿಸಬೇಕೆಂದು ಹೈಕೋರ್ಟು ಆದೇಶಿಸಿದೆ. ರಾಜ್ಯದ ವಿಜಿಲೆನ್ಸ್‍ಗೆ ಸಿಬಿಐಗೆ ಒಂದು ವಾರದಲ್ಲಿ ಪ್ರಕರಣದ ಎಲ್ಲ ದಾಖಲೆಗಳನ್ನು ಹಸ್ತಾಂತರಿಸಬೇಕೆಂದು ಕೋರ್ಟು ಸೂಚಿಸಿದೆ.

ಈ ಹಿಂದೆ ವಿಜಿಲೆನ್ಸ್ ತನಿಖೆ ಮಾಡಿ ಹೈಕೋರ್ಟಿನಲ್ಲಿ ವರದಿ ಸಲ್ಲಿಸಿತ್ತು.ಅದರಲ್ಲಿ ಪಳನಿ ಸ್ವಾಮಿ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ಸೂಚಿಸಲಾಗಿತ್ತು.ದೂರನ್ನು ವಿಜಿಲೆನ್ಸ್‍ಗೆ ನೀಡಿದ್ದರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಡಿಎಂಕೆ ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿತ್ತು. ಆರೋಪಕ್ಕೆ ಗುರಿಯಾಗಿರುವ ಹಲವು ಗುತ್ತೆದಾರರ ಕಚೇರಿಗೆ ಆದಾಯ ತೆರಿಗೆ ದಾಳಿ ನಡೆದಿದ್ದು ಡಿಎಂಕೆ ಬೆಟ್ಟು ಮಾಡಿತ್ತು.

Leave a Reply