ಎರ್ನಾಕುಳಂ: ತಮಿಳ್ನಾಡಿನ ವಿರುದಬಕ್ಕಂನಿಂದ ಕೇರಳ ಪೊಲೀಸರು ಬಂಧಿಸಿದ್ದ ಆರ್ಥಿಕ ವಂಚನೆ ಪ್ರಕರಣದ ಆರೋಪಿ ಮಹಾರಾಜನ್‍ಗೆ ಜಾಮೀನು ದೊರಕಿದೆ. ಎರ್ನಾಕುಳಂ ತೊಪ್ಪಪಡಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟು ಆರೋಪಿಗೆ ಜಾಮೀನು ನೀಡಿದ್ದು ಆರ್ಥಿಕ ವಂಚನೆಯಲ್ಲದೆ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದು ಸಹಿತ ಪ್ರಕರಣಗಳು ಈತನ ವಿರುದ್ಧ ಹೊರಿಸಲಾಗಿದೆ. ನಿನ್ನೆ ಮಹಾರಾಜನ್‍ನ್ನು ಸಾಹಸಿಕವಾಗಿ ಪೊಲೀಸರು ಬಂಧಿಸಿದ್ದರು.

ನಿನ್ನೆ ಬಂಧಿಸಿ ತಮಿಳ್ನಾಡಿನಿಂದ ಕೇರಳಕ್ಕೆ ಕರೆತರಲಾಗಿತ್ತು.ಕಮಿಶನರ್ ಕಚೇರಿಯಲ್ಲಿ ಆರೋಪಿಯನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ವೈದ್ಯ ಪರಿಶೀಲನೆ ಪೂರ್ತಿಗೊಳಿಸಿದ ಬಳಿಕ ಕೋರ್ಟಿಗೆ ಹಾಜರುಪಡಿಸಲಾಯಿತು. ಸಾಕ್ಷ್ಯ ಸಂಗ್ರಹ ಇತ್ಯಾದಿ ಆವಶ್ಯಕತೆಗಳಿಗಾಗಿ ಆರೋಪಿಯನ್ನು 10 ದಿವಸ ಕಸ್ಟಡಿಗೆ ಬಿಟ್ಟು ಕೊಡಬೇಕೆಂದು ಪೊಲೀಸರು ಮನವಿ ಮಾಡಿದ್ದರು.

ಆದರೆ ಪೊಲೀಸರ ಮನವಿಯನ್ನು ಪುರಸ್ಕರಿಸದೆ ಆರೋಪಿಗೆ ಜಾಮೀನು ಸಿಕ್ಕಿದೆ. ಮಹಾರಾಜನ್ ವಿರುದ್ಧ ಪೊಲೀಸರು 500 ಕೋಟಿ ರೂಪಾಯಿ ಆರ್ಥಿಕ ವಂಚನೆ ಮತ್ತು ಪೊಲೀಸರು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದು ಸಹಿತ ಕೇಸುಗಳನ್ನು ದಾಖಲಿಸಿ ಕೊಂಡಿದ್ದಾರೆ.

Leave a Reply