ಮಹಾರಾಷ್ಟ್ರ : ವಿಧಿಯಿಂದ ರಕ್ಷಣೆ ಹೊಂದಲು ಯಾರಿಗೂ ಸಾಧ್ಯವಿಲ್ಲ. ಅಮರಾವತಿಯ ಈ ಡಾಕ್ಟರ್ ದಂಪತಿಗಳ ಜೀವನದಲ್ಲೂ ಹಾಗೆಯೇ ಆಗಿದೆ. ಕಳೆದ ಡಿಸೆಂಬರ್ ನಲ್ಲಿ ಅವರ ಮಗುವನ್ನು ಉಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಮಾತ್ರವಲ್ಲ, ಮಗುವಿನ ಅಂಗಾಂಗ ದಾನ ಮಾಡಿ ಬೇರೆಯವರ ಜೀವಕ್ಕೆ ಬೆಳಕಾಗುವ ಎಂಬ ನಿರ್ಧಾರ ಮಾಡಿ ಪ್ರಯತ್ನ ಮಾಡಿಯೂ ಅದು ಕಾರ್ಯ ರೂಪಕ್ಕೆ ಬರಲು ಸಾಧ್ಯವಾಗಲಿಲ್ಲ.

ಆದರೆ ಎಂಟು ತಿಂಗಳ ಬಳಿಕ ಅವರು ತಮ್ಮ ಮಗುವಿನ ಹುಟ್ಟಿದ ದಿನದ ಪ್ರತೀಕವಾಗಿ ಇಬ್ಬರು ಹೃದ್ರೋಗಿಗಳಿಗೆ ಶಶ್ತ್ರ ಚಿಕಿತ್ಸೆಗೆ ಬೇಕಾದ ಹಣವನ್ನು ದಾನ ಮಾಡಿದ್ದಾರೆ. ಡಾಕ್ಟರ್ ಉಮೇಶ್ ಮತ್ತು ಅಶ್ವಿನಿ ಯವರು ತಮ್ಮ ಮಗಳ ಮೊದಲ ಬರ್ತ್ ಡೇ ಅಂಗವಾಗಿ ಇಂತಹ ಒಂದು ಪುಣ್ಯದ ಕೆಲಸವನ್ನು ಮಾಡಿದ್ದಾರೆ.

ಅಮ್ರಾವತಿಯ ವಾಘೋಲಿ ಮತ್ತು ದೇವ್ಗನ್ ಗ್ರಾಮಗಳ ಇಬ್ಬರು ಮಕ್ಕಳು ಹೃದ್ರೋಗದಿಂದ ಬಳಲುತ್ತಿದ್ದರು. ಅವರ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಇತರ ಮಕ್ಕಳಿಗೆ ಜೀವದಾನ ಮಾಡುವ ಯೋಚನೆ ಮಾಡಿದ ಈ ದಂಪತಿಗಳಿಗೆ ಹಲವರು ಧನ್ಯವಾದ ಸಲ್ಲಿಸಿದ್ದಾರೆ. ಆ ಎರಡೂ ಮಕ್ಕಳು ತಮ್ಮ ಹೃದಯದಲ್ಲಿ ಒಂದು ರಂಧ್ರವನ್ನು ಹೊಂದಿದ್ದರು. ಇದೀಗ ಆ ಮಕ್ಕಳ ಬಾಳು ಬೆಳಕಾಗಲಿದೆ.

Leave a Reply