ಮುಂಬೈ: ಮೊದಲ ಮೂರು ವರ್ಷ ಅವಧಿಯಲ್ಲಿ ಎನ್‍ಡಿಎ ಸರಕಾರ 13 ಸಲ ಇಂಧನ ಬೆಲೆ ಕಡಿಮೆ ಮಾಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಇಂಧನ ಬೆಲೆ ಜಾಗತಿಕ ಮಾರುಕಟ್ಟೆಗೆ ಸಂಬಂಧಿಸಿದ ವಿಚಾರ ಎನ್ನುವುದು ಪ್ರತಿಪಕ್ಷಗಳಿಗೆ ತಿಳಿದಿದೆ. ಈಗ ಕ್ರೂಡ್ ಆಯಿಲ್ ಬೆಲೆ ಅಂತಾರಾಷ್ಟ್ರಮಾರುಕಟ್ಟೆಯಲ್ಲಿ ಹೆಚ್ಚಳವಾಗುತ್ತಾ ಹೋಗುತ್ತಿದೆ ಎಂದು ಫಡ್ನವಿಸ್ ಹೇಳಿದರು.

ಮಹಾರಾಷ್ಟ್ರದಲ್ಲಿ ಇಂಧನ ದರ ಹೆಚ್ಚಳದಿಂದ ಪಾರಾಗಲು ಜನರಿಗಾಗಿ ಹಲವಾರು ಭರವಸೆಯ ಯೋಜನೆಗಳನ್ನು ಸರಕಾರ ರೂಪಿಸಿದೆ. ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‍ಟಿಯ ಅಧೀನಕ್ಕೊಳಪಡಿಸುವುದು ತೈಲ ದರ ಕಡಿಮೆ ಗೊಳಿಸಲು ಅತ್ಯುತ್ತಮ ದಾರಿಯಾಗಿದೆ. ಜಿಎಸ್‍ಟಿ ಕೌನ್ಸಿಲ್ ಈ ನಿರ್ಧಾರದಲ್ಲಿ ಮುಂದುವರಿಯುವುದಾದರೆ ಮಹಾರಾಷ್ಟ್ರ ಸರಕಾರ ಬೆಂಬಲ ನೀಡಲಿದೆ ಎಂದು ಫಡ್ನವಿಸ್ ಹೇಳಿದರು.

Leave a Reply