ಭಾರತ ಮತ್ತು ಪಾಕ್ ತಂಡಗಳು ಬಹಳ ಬಿಡುವಿನ ಬಳಿಕ ಮತ್ತೆ ಕ್ರಿಕೆಟ್ ಆಡಲು ಮೈದಾನಕ್ಕಿಳಿಯುವಾಗ ಹೊರಗಡೆ ಸೌಹಾರ್ದದ ಹೂಗಳು ಅರಳುವುದು ಕಂಡು ಬರುತ್ತಿವೆ. ದುಬೈಯಲ್ಲಿ ನಡೆಯುವ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸಪ್ಟೆಂಬರ್ ಹತ್ತೊಂಬತ್ತರಂದು ಭಾರತ ಮತ್ತು ಪಾಕ್ ಮುಖಾ ಮುಖಿಯಾಗಲಿದೆ.

ಭಾರತ ತಂಡ ಅಭ್ಯಾಸ ನಡೆಸುವಾಗ ಅನಿರೀಕ್ಷಿತವಾಗಿ ಪಾಕಿಸ್ತಾನದ ಮಾಜಿ ನಾಯಕ ಶುಐಬ್ ಮಲಿಕ್ ಅತಿಥಿಯಾಗಿ ಬಂದು ದೋನಿಗೆ ಹಸ್ತಲಾಘವ ಮಾಡಿ ಸೌಹಾರ್ದದ ಹೂ ಮತ್ತೆ ಅರಳುವಂತೆ ಮಾಡಿದರು.

ಪಾಕಿಸ್ತಾನ ತಂಡದ ಆಟಗಾರ ಶೋಯಿಬ್ ಮಲಿಕ್ ಧೋನಿಯನ್ನು ಹುಡುಕಿಕೊಂಡು ಬಂದು ಗೌರವ ಸಲ್ಲಿಸಿದ ವೀಡಿಯೋ ಇದೀಗ ವೈರಲಾಗಿದೆ.
ಅಭ್ಯಾಸದ ವೇಳೆ ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯಿಬ್ ಮಲಿಕ್ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.

ಎಂಎಸ್ ಧೋನಿಯನ್ನು ಭೇಟಿಯಾದ ವೇಳೆ ಶೋಯಿಬ್ ಮಲಿಕ್ ತಮ್ಮ ಕ್ಯಾಪ್ ಮೇಲಕ್ಕೆ ಸರಿಸಿ ಗೌರವ ನೀಡಿದ್ದು ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ದಿಗ್ಗಜ ಆಟಗಾರನನ್ನು ಯಾವ ರೀತಿ ಗೌರವಿಸಬೇಕು ಎಂದು ಮಲಿಕ್ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಅಭಿಮಾನಿಗಳು ಬಣ್ಣಿಸಿದ್ದು, ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧ ವೃದ್ದಿಗೆ ಈ ಘಟನೆ ಪುಷ್ಠಿ ನೀಡಿದೆ.

Leave a Reply